07 ಆಗಸ್ಟ್ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..ಅಂತರ್ಜಲಮಟ್ಟ 1,000 ಅಡಿಗೆ ಕುಸಿತ, ಸದ್ಯ ಕೊಳವೆ ಬಾವಿ ಕೊರೆಸಬೇಡಿ: ಈಶ್ವರ ಖಂಡ್ರೆಕೊಳವೆ ಬಾವಿ ಕೊರೆಯುತ್ತಿರುವುದುಬೆಂಗಳೂರು: ರಾಜ್ಯದ ವಿವಿಧ ಪ್ರದೇಶಗಳಲ್ಲಿ ಅಂತರ್ಜಲಮಟ್ಟ 1000 ಅಡಿಗೂ ಕೆಳಗೆ ಹೋಗಿದ್ದು, ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರವೇ ಕೊಳ

ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..ಅಂತರ್ಜಲಮಟ್ಟ 1,000 ಅಡಿಗೆ ಕುಸಿತ, ಸದ್ಯ ಕೊಳವೆ ಬಾವಿ ಕೊರೆಸಬೇಡಿ: ಈಶ್ವರ ಖಂಡ್ರೆಕೊಳವೆ ಬಾವಿ ಕೊರೆಯುತ್ತಿರುವುದುಬೆಂಗಳೂರು: ರಾಜ್ಯದ ವಿವಿಧ ಪ್ರದೇಶಗಳಲ್ಲಿ ಅಂತರ್ಜಲಮಟ್ಟ 1000 ಅಡಿಗೂ ಕೆಳಗೆ ಹೋಗಿದ್ದು, ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರವೇ ಕೊಳವೆ ಬಾವಿ ಕೊರೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.ಅಂತರ್ಜಲಮಟ್ಟ 1,000 ಅಡಿಗೆ ಕುಸಿತ, ಸದ್ಯ ಕೊಳವೆ ಬಾವಿ ಕೊರೆಸಬೇಡಿ: ಈಶ್ವರ ಖಂಡ್ರೆವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆಬಸವರಾಜ ಹೊರಟ್ಟಿಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸ್ವ–ಇಚ್ಚೆಯಿಂದಲೇ ರಾಜೀನಾಮೆ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.ಸುನೇತ್ರಾ ಪವಾರ್–ಪ್ರಶಾಂತ್ ಕಿಶೋರ್ ಭೇಟಿ: ಬಿಜೆಪಿ ಮೈತ್ರಿಕೂಟದಲ್ಲಿ ಬಿರುಕು?ಸುನೇತ್ರಾ–ಪ್ರಶಾಂತ್ ಕಿಶೋರ್ಮುಂಬೈ: ಬಿಹಾರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದ ಚುನಾವಣೆ ಚಾಣಕ್ಷ ಖ್ಯಾತಿಯ ಪ್ರಶಾಂತ್ ಕಿಶೋರ್ ಅವರನ್ನು ಎನ್ಸಿಪಿ ನಾಯಕಿ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಭೇಟಿಯಾಗಿದ್ದು, ಆಡಳಿತಾರೂಢ 'ಮಹಾಯುತಿ' ಮೈತ್ರಿಗೆ ಧಕ್ಕೆ ತರುವಂತಹ ಯಾವುದೇ ಹೆಜ್ಜೆ ಇಡದಂತೆ ಬಿಜೆಪಿ ಎಚ್ಚರಿಕೆ ನೀಡಿದೆ.ಪಡುಬಿದ್ರಿ: ಗುಂಡು ಹಾರಿಸಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಹತ್ಯೆಪಡುಬಿದ್ರಿಉಡುಪಿ: ಕಾಪು ವ್ಯಾಪ್ತಿಯ ಮುದರಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜ ಎಂಬುವವರನ್ನು ದುಷ್ಕಮಿಗಳು ಶುಕ್ರವಾರ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಡೇವಿಡ್ ಅವರಿಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವ ನಡುವೆ ಮೃತಪಟ್ಟಿದ್ದಾರೆ.ವಿಚ್ಛೇದನ ಅರ್ಜಿ ಹಿಂಪಡೆದ ತಮಿಳುನಾಡು CM ವಿಜಯ್ ಪತ್ನಿ ಸಂಗೀತಾ: ಪ್ರಕರಣ ಇತ್ಯರ್ಥವಿಜಯ್ ಮತ್ತು ಸಂಗೀತಾಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಹಿಂಪಡೆದಿದ್ದಾರೆ. ಫೆಬ್ರುವರಿ 27ರಂದು ಸಂಗೀತಾ ಅವರು ವಿಚ್ಛೇದನ ಕೋರಿ ಚೆಂಗಲ್ಪಟ್ಟು ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ಹಿಂಪಡೆದ ಹಿನ್ನೆಲೆಯಲ್ಲಿ ಕೋರ್ಟ್ ಪ್ರಕರಣವನ್ನು ಇತ್ಯರ್ಥಪಡಿಸಿದೆ.Karnataka Rains: ಚಿಕ್ಕಮಗಳೂರು ಸಹಿತ 3 ಜಿಲ್ಲೆಯಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆವಿವಿಧೆಡೆ ಭಾರಿ ಮಳೆ ಮುನ್ನೆಚ್ಚರಿಕೆಬೆಂಗಳೂರು: ಕರ್ನಾಟಕದ ದಕ್ಷಿಣಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿ ಆಗಸ್ಟ್ 7ರಂದು ಅತಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮುಂದಿನ ಎರಡು ದಿನಗಳ ಮಳೆ ಮುನ್ನೆಚ್ಚರಿಕೆ ವರದಿಯನ್ನು ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದ್ದು, ಮೂರು ಜಿಲ್ಲೆಗಳಲ್ಲಿ 64.5 ಮಿ.ಮೀನಿಂದ 204.4 ಮಿ.ಮೀವರೆಗೂ ಮಳೆಯಾಗುವ ಸಾಧ್ಯತೆಯಿದೆ. ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.ಕಾವೇರಿ ವಿಚಾರದಲ್ಲಿ ಸದ್ಯ ಬಂದ್ ಬೇಡ, ನಾಲೆಗಳಿಗೆ ಮೊದಲು ನೀರು ಹರಿಸಲು ಆಗ್ರಹಕರ್ನಾಟಕ ನೆಲ ಜಲ ಪರಿಸರ ಸಂರಕ್ಷಣಾ ಸಮಿತಿ ಸಭೆಯಲ್ಲಿ ಕುರುಬೂರು ಶಾಂತಕುಮಾರ್,ಮುಖ್ಯಮಂತ್ರಿ ಚಂದ್ರು ಮತ್ತಿತರರು ಪಾಲ್ಗೊಂಡರು.ಬೆಂಗಳೂರು: ಕಾವೇರಿ ನೀರು ಹರಿಸುವ ವಿಚಾರದಲ್ಲಿ ವಿವಿಧ ಸಂಘಟನೆಗಳು ಆಗಸ್ಟ್ 13ರಂದು ಕರೆ ನೀಡಿರುವ ಕರ್ನಾಟಕ ಬಂದ್ ಅನ್ನು ಮುಂದೂಡಿಸುವುದು ಒಳ್ಳೆಯದು. ಈಗಾಗಲೇ ತಮಿಳುನಾಡಿಗೆ ಬೇಡಿಕೆಗಿಂತ ಹೆಚ್ಚು ನೀರು ಹರಿಸಲಾಗಿದ್ದು ತಕ್ಷಣವೇ ಕಾವೇರಿ ಕಣಿವೆಯ ಜಲಾಶಯಗಳಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ಕರ್ನಾಟಕ ನೆಲ ಜಲ ಪರಿಸರ ಸಂರಕ್ಷಣಾ ಸಮಿತಿ ಆಗ್ರಹಿಸಿದೆಮಗನ ಲೀಡರ್ ಮಾಡಲು ಇತರರ ರಾಜಕೀಯ ಜೀವನ ಮುಗಿಸಿದ ಸಿದ್ದರಾಮಯ್ಯ: ಪ್ರತಾಪ ಟೀಕೆ ಸಿದ್ದರಾಮಯ್ಯ ಮತ್ತು ಪ್ರತಾಪ ಸಿಂಹಮೈಸೂರು: ‘ಮೈಸೂರು ಭಾಗದಲ್ಲಿ ಮಗನನ್ನು (ಯತೀಂದ್ರ) ಲೀಡರ್ ಮಾಡಲು ಸಿದ್ದರಾಮಯ್ಯ ಇಲ್ಲಿನ ಕಾಂಗ್ರೆಸ್ ನಾಯಕರ ರಾಜಕೀಯ ಜೀವನವನ್ನು ಮುಗಿಸಿದ್ದಾರೆ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ದೂರಿದರು. ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಮಗನನ್ನು ಮಂತ್ರಿ ಮಾಡಲು ಮಲ್ಲಿಕಾರ್ಜುನ ಖರ್ಗೆ ಆ ಭಾಗದ ಎಲ್ಲಾ ಕಾಂಗ್ರೆಸ್ ನಾಯಕರ ರಾಜಕೀಯ ಜೀವನವನ್ನು ಮುಗಿಸಿದರು. ಅದೇ ಮಾದರಿಯನ್ನು ಸಿದ್ದರಾಮಯ್ಯ ಇಲ್ಲಿ ಅನುಸರಿಸಿದ್ದಾರೆ. ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಸೇರಿದಂತೆ ಎಲ್ಲರನ್ನೂ ಮೂಲೆಗುಂಪು ಮಾಡಿದ್ದಾರೆ’ ಎಂದು ಆರೋಪಿಸಿದರು.Gen Z ದೇಶ ವಿರೋಧಿಗಳಲ್ಲ ಎಂದಾದರೆ ಬಿಜೆಪಿ ದಾಳಿ ಮಾಡಿದ್ದೇಕೆ: ವಿಪಕ್ಷಗಳ ಪ್ರಶ್ನೆಮುಂಬೈ: ಜೆನ್ ಝೀಗಳನ್ನು ದೇಶ ವಿರೋಧಿಗಳು ಎನ್ನಬೇಡಿ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಅವರು ದೇಶ ವಿರೋಧಿಗಳಲ್ಲ ಎಂದಾದರೆ ಪ್ರತಿಭಟನೆ ನಡೆಸಿದ ಯುವಕರ ಮೇಲೆ ಬಿಜೆಪಿ ನಾಯಕರು ದಾಳಿ ಮಾಡಿದ್ದೇಕೆ ಎಂದು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್ಸಿಪಿ (ಎಸ್ಪಿ) ಶುಕ್ರವಾರ ಪ್ರಶ್ನಿಸಿವೆ.ಭದ್ರತಾ ಕಾಳಜಿ: ಪಾಕ್, ಸೌದಿ, ಟರ್ಕಿ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಜೊತೆ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ಅಂಕಾರ: ಹೆಚ್ಚುತ್ತಿರುವ ಭದ್ರತಾ ಕಾಳಜಿಯ ಪ್ರಾದೇಶಿಕ ಶಕ್ತಿಗಳ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಪಾಕಿಸ್ತಾನ, ಸೌದಿ ಅರೇಬಿಯಾ, ಟರ್ಕಿ ದೇಶವು ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿಹಾಕಿವೆ. ಮೂರು ರಾಷ್ಟ್ರಗಳ ಪೈಕಿ ಯಾವುದೇ ರಾಷ್ಟ್ರದ ಮೇಲೂ ದಾಳಿ ನಡೆದರೂ ಕೂಡ ಮೂರು ದೇಶಗಳ ಮೇಲೆ ನಡೆದ ದಾಳಿ ಎಂದು ಒಪ್ಪಂದದ ಅಡಿಯಲ್ಲಿ ಪರಿಗಣಿಸಲಾಗುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ತಿಳಿಸಿದೆ.ಭಾರತ ಜೊತೆಗಿನ ರಕ್ಷಣಾ ಒಪ್ಪಂದ ಬೆಳೆಯುತ್ತಿದೆ, ಗಟ್ಟಿಯಾಗುತ್ತಿದೆ: ಅಮೆರಿಕ