ಈ ದಿನದ ಟಾಪ್ 10 ಸುದ್ದಿಗಳು: ಮಂಗಳವಾರ, 13 ಅಕ್ಟೋಬರ್ 2026
ಸಿಜೆಪಿ ಪ್ರತಿಭಟನೆ ಸೇರಿದಂತೆ ಈ ದಿನದ ಟಾಪ್ 10 ಸುದ್ದಿಗಳು....ಪ್ರತಿಭಟನೆಯನ್ನು ಶಿವನ ತಾಂಡವಕ್ಕೆ ಹೋಲಿಸಿದ ರಾಹುಲ್: ಕ್ಷಮೆಯಾಚನೆಗೆ VHP ಆಗ್ರಹ ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳ ನಡೆಸಿದ ಪ್ರತಿಭಟನೆಯನ್ನು ಭಗವಾನ್ ಶಿವನ ತಾಂಡವಕ್ಕೆ ಹೋಲಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ವಿಶ್ವ ಹಿಂ

ಸಿಜೆಪಿ ಪ್ರತಿಭಟನೆ ಸೇರಿದಂತೆ ಈ ದಿನದ ಟಾಪ್ 10 ಸುದ್ದಿಗಳು....ಪ್ರತಿಭಟನೆಯನ್ನು ಶಿವನ ತಾಂಡವಕ್ಕೆ ಹೋಲಿಸಿದ ರಾಹುಲ್: ಕ್ಷಮೆಯಾಚನೆಗೆ VHP ಆಗ್ರಹ ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳ ನಡೆಸಿದ ಪ್ರತಿಭಟನೆಯನ್ನು ಭಗವಾನ್ ಶಿವನ ತಾಂಡವಕ್ಕೆ ಹೋಲಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಆರೋಪಿಸಿದೆ. ಜೊತೆಗೆ ಬಹಿರಂಗ ಕ್ಷಮೆಯಾಚನೆಗೆ ಆಗ್ರಹಿಸಿದೆ.ಪ್ರತಿಭಟನೆಯನ್ನು ಶಿವನ ತಾಂಡವಕ್ಕೆ ಹೋಲಿಸಿದ ರಾಹುಲ್: ಕ್ಷಮೆಯಾಚನೆಗೆ VHP ಆಗ್ರಹಮುಖ್ಯಮಂತ್ರಿಯನ್ನು ಬದಿಗೆ ತಳ್ಳುವುದೇ ಕಾಂಗ್ರೆಸ್ ಸಂಸ್ಕೃತಿ: ಅಶೋಕ ವಾಗ್ದಾಳಿ ಏಳೂವರೆ ಕೋಟಿ ಕನ್ನಡಿಗರ ಪ್ರತಿನಿಧಿಯಾದ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನಡೆಸಿಕೊಂಡ ರೀತಿ ಅತ್ಯಂತ ಖಂಡನೀಯ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದ್ದಾರೆ.ಮುಖ್ಯಮಂತ್ರಿಯನ್ನು ಬದಿಗೆ ತಳ್ಳುವುದೇ ಕಾಂಗ್ರೆಸ್ ಸಂಸ್ಕೃತಿ: ಅಶೋಕ ವಾಗ್ದಾಳಿನೇಹಾ ಬೋರಾ ಹೋರಾಟದ ಹಾದಿ.. ಸಾಮಾಜಿಕ ಜಾಲತಾಣದಲ್ಲಿ ಹೆಣ್ಣುಹುಲಿ ಎಂದ ನೆಟ್ಟಿಗರು.. ಚುನಾವಣಾ ಅಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು.ನೇಹಾ ಬೋರಾ ಹೋರಾಟದ ಹಾದಿ.. ಸಾಮಾಜಿಕ ಜಾಲತಾಣದಲ್ಲಿ ಹೆಣ್ಣುಹುಲಿ ಎಂದ ನೆಟ್ಟಿಗರು..ಕೇಂದ್ರ ಸಚಿವ ಎಲ್.ಮುರುಗನ್ ರಾಜೀನಾಮೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಸದಸ್ಯ ಎಲ್.ಮುರುಗನ್ ಅವರು ಮಂಗಳವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಕೇಂದ್ರ ಸಚಿವ ಎಲ್.ಮುರುಗನ್ ರಾಜೀನಾಮೆಕೇಂದ್ರ ಸಚಿವ ಎಲ್.ಮುರುಗನ್ ರಾಜೀನಾಮೆಪಂಜಾಬ್: ಡ್ರಗ್ಸ್ ಮಾರಾಟ ಪ್ರಶ್ನಿಸಿ ಲೈವ್ ಬಂದಿದ್ದ ಹೋರಾಟಗಾರನ ಗುಂಡಿಕ್ಕಿ ಹತ್ಯೆ ಡ್ರಗ್ಸ್ ಮಾರಾಟ ಪ್ರಶ್ನಿಸಿ ಫೇಸ್ಬುಕ್ನಲ್ಲಿ ಲೈವ್ ಮಾಡುತ್ತಿದ್ದ ಮಾದಕ ದ್ರವ್ಯ ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಅವರನ್ನು ಮೆಡಿಕಲ್ ಸ್ಟೋರ್ ಮಾಲೀಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.ಪಂಜಾಬ್: ಡ್ರಗ್ಸ್ ಮಾರಾಟ ಪ್ರಶ್ನಿಸಿ ಲೈವ್ ಬಂದಿದ್ದ ಹೋರಾಟಗಾರನ ಗುಂಡಿಕ್ಕಿ ಹತ್ಯೆಸ್ಟಿಂಗ್ ಆಪರೇಷನ್ ವಿಡಿಯೊಗೂ ನನಗೂ ಯಾವುದೇ ಸಂಬಂಧ ಇಲ್ಲ: ಸಿದ್ದರಾಮಯ್ಯ ‘ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಡಿಯೊಗೆ ನನ್ನ ಹೆಸರನ್ನು ಜೋಡಿಸಿ ಅಪಪ್ರಚಾರ ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಇದು ಸ್ಪಷ್ಟವಾಗಿ ರಾಜಕೀಯ ದುರುದ್ದೇಶದಿಂದ ನನ್ನ ಚಾರಿತ್ರ್ಯಹನನ ಮಾಡುವ ಪ್ರಯತ್ನದಂತೆ ಕಾಣುತ್ತಿದೆ’ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.ಸ್ಟಿಂಗ್ ಆಪರೇಷನ್ ವಿಡಿಯೊಗೂ ನನಗೂ ಯಾವುದೇ ಸಂಬಂಧ ಇಲ್ಲ: ಸಿದ್ದರಾಮಯ್ಯಸಚಿವರ, ಶಾಸಕರ ಫೋನ್ ಕದ್ದಾಲಿಕೆ: ಡಿಕೆಶಿ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಆರೋಪ ಮುಖ್ಯಮಂತ್ರಿ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಫೋನ್ ಕದ್ದಾಲಿಕೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.ಸಚಿವರ, ಶಾಸಕರ ಫೋನ್ ಕದ್ದಾಲಿಕೆ: ಡಿಕೆಶಿ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಆರೋಪಕೆಪಿಎಸ್ಸಿ ಹಗರಣ: ಎಸ್ಐಟಿ ತಂಡದಿಂದ ಅಲೋಕ್ ಕುಮಾರ್ ಸೇರಿ ಇಬ್ಬರು ಹೊರಕ್ಕೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಪಶು ವೈದ್ಯಾಧಿಕಾರಿಗಳು ಹಾಗೂ ಇತರೆ ಹುದ್ದೆಗಳಿಗೆ ನಡೆಸಿದ ನೇಮಕ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಪಿತೂರಿಯನ್ನು ಬಯಲಿಗೆಳೆದು ಅಪರಾಧಿಗಳನ್ನು ಪತ್ತೆ ಹಚ್ಚಲು ಹೈಕೋರ್ಟ್ ರಚಿಸಿದ್ದ ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ಡಿಜಿಪಿ ಅಲೋಕ್ ಕುಮಾರ್ ಸೇರಿ ಇಬ್ಬರನ್ನು ಕೈಬಿಡಲಾಗಿದೆ.ಕೆಪಿಎಸ್ಸಿ ಹಗರಣ: ಎಸ್ಐಟಿ ತಂಡದಿಂದ ಅಲೋಕ್ ಕುಮಾರ್ ಸೇರಿ ಇಬ್ಬರು ಹೊರಕ್ಕೆತಮಿಳುನಾಡು ಸಿಎಂ ವಿಜಯ್ ಭೇಟಿಯಾದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ದಂಪತಿ ‘ರಣಬಾಲಿ’ ಸಿನಿಮಾ ಬಿಡುಗಡೆಗೂ ಮುನ್ನ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ ವಿಜಯ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವಿಜಯ್ ಅವರೊಂದಿಗೆ ಭೇಟಿಯಾದ ಅಪರೂಪದ ಫೋಟೊವನ್ನು ತಾರಾ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.ತಮಿಳುನಾಡು ಸಿಎಂ ವಿಜಯ್ ಭೇಟಿಯಾದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ದಂಪತಿಇರಾನ್ಗೆ ಸಹಾಯ ಮಾಡಿದರೆ ರಷ್ಯಾ, ಚೀನಾ ಹೆಚ್ಚಿನದನ್ನು ಕಳೆದುಕೊಳ್ಳಲಿವೆ –ಟ್ರಂಪ್ ಇರಾನ್ಗೆ ಸಹಾಯ ಮಾಡುವ ಮೂಲಕ ರಷ್ಯಾ ಮತ್ತು ಚೀನಾ ‘ಹೆಚ್ಚಿನದನ್ನು ಕಳೆದುಕೊಳ್ಳಲಿವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಇರಾನ್ಗೆ ರಷ್ಯಾ ಮತ್ತು ಚೀನಾ ನೆರವಾಗುತ್ತಿವೆ ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.ಇರಾನ್ಗೆ ಸಹಾಯ ಮಾಡಿದರೆ ರಷ್ಯಾ, ಚೀನಾ ಹೆಚ್ಚಿನದನ್ನು ಕಳೆದುಕೊಳ್ಳಲಿವೆ –ಟ್ರಂಪ್