ಈ ದಿನದ ಪ್ರಮುಖ 10 ಸುದ್ದಿಗಳು: ಬುಧವಾರ,15 ಜುಲೈ 2026
ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ಶೇ 500ರಷ್ಟು ಸುಂಕದ ಪ್ರಸ್ತಾವನೆ ಸಡಿಲಿಸಿದ ಅಮೆರಿಕ: ಭಾರತ, ಚೀನಾ ನಿರಾಳಪಿನ್, ಮೋದಿ, ಟ್ರಂಪ್ವಾಷಿಂಗ್ಟನ್: ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುವ ಭಾರತ ಮತ್ತು ಚೀನಾ ಸೇರಿದಂತೆ ಪ್ರಮುಖ ದೇಶಗಳ ಮೇಲೆ ವಿಧಿಸಲು ಉದ್ದೇಶಿಸಲಾಗಿದ್ದ ಶೇ 500 ರಷ್ಟು ಭಾರಿ ಸುಂಕದ ಪ್ರಸ್ತಾ

ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ಶೇ 500ರಷ್ಟು ಸುಂಕದ ಪ್ರಸ್ತಾವನೆ ಸಡಿಲಿಸಿದ ಅಮೆರಿಕ: ಭಾರತ, ಚೀನಾ ನಿರಾಳಪಿನ್, ಮೋದಿ, ಟ್ರಂಪ್ವಾಷಿಂಗ್ಟನ್: ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುವ ಭಾರತ ಮತ್ತು ಚೀನಾ ಸೇರಿದಂತೆ ಪ್ರಮುಖ ದೇಶಗಳ ಮೇಲೆ ವಿಧಿಸಲು ಉದ್ದೇಶಿಸಲಾಗಿದ್ದ ಶೇ 500 ರಷ್ಟು ಭಾರಿ ಸುಂಕದ ಪ್ರಸ್ತಾವನೆಯನ್ನು ಅಮೆರಿಕ ಸಂಸದರು ಸಡಿಲಿಸಿದ್ದಾರೆ ಎಂದು ವರದಿಗಳು ಹೇಳಿವೆ. ಈ ಮೂಲಕ ಭಾರತ ಮತ್ತು ಚೀನಾ ದೇಶಗಳು ಭಾರಿ ಸುಂಕದ ಹೊರೆಯಿಂದ ನಿರಾಳಗೊಂಡಿವೆ.ಅಮೆರಿಕ ಅನ್ಯಾಯದ ಸುಂಕದ ವಿರುದ್ಧ ಭಾರತ, ಚೀನಾ ಒಟ್ಟಿಗೆ ಹೋರಾಡಬೇಕು:ಚೀನಾ ರಾಯಭಾರಿಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಕೈದಿ ಕಾಲಿಗೆ ಗುಂಡೇಟು, ಬಂಧನಕಲಬುರಗಿಯ ಕೇಂದ್ರ ಕಾರಾಗೃಹದಿಂದ ಪರಾರಿಯಾಗಲು ಕೈದಿಗಳು ಬಟ್ಟೆ ಕಟ್ಟಿರುವುದು ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದ ಕಾಂಪೌಂಡ್ ಜಿಗಿದು ಪರಾರಿಯಾಗಿದ್ದ ಮೂವರ ಪೈಕಿ ಒಬ್ಬ ಕೈದಿಯ ಕಾಲಿಗೆ ಬುಧವಾರ ನಸುಕಿನಲ್ಲಿ ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಮಂಗಳವಾರ ಬೆಳಿಗ್ಗೆ 4.35ರ ಹೊತ್ತಿಗೆ ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕಿನ ಇಸ್ಲಾಂಪುರದ ಮಸ್ತಾನ್ ತಂದೆ ಮಣಿಕಪ್ಪ, ಔರಾದ್ ತಾಲ್ಲೂಕಿನ ಸಂತಪುರ ಗ್ರಾಮದ ಸಂತೋಷ ತಂದೆ ಬಸಪ್ಪ ಹಾಗೂ ಬೀದರ್ ತಾಲ್ಲೂಕಿನ ಬಕ್ಕಚೌಡಿ ಗ್ರಾಮದ ಸಾಗರ ತಂದೆ ಭೀಮರಾಯ ಎಂಬ ಕೈದಿಗಳು ಪರಾರಿಯಾಗಿದ್ದರು.ಕಲಬುರಗಿ | ಕಾಲಿಗೆ ಗುಂಡೇಟು ಹೊಡೆದು ಬಂಧನFIFA World Cup | ಸ್ಪೇನ್ಗೆ ಹೇಗೆ ಪೆಟ್ಟು ನೀಡಬೇಕೆಂಬುದೇ ತಿಳಿಯಲಿಲ್ಲ: ಎಂಬಾಪೆಫ್ರಾನ್ಸ್ನ ಕೈಲಿಯನ್ ಎಂಬಾಪೆಫಿಫಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಎದುರು 2–0 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ಸ್ಪೇನ್, ಫೈನಲ್ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಫ್ರಾನ್ಸ್ನ ಫುಟ್ಬಾಲ್ ತಾರೆ ಕಿಲಿಯನ್ ಎಂಬಾಪೆ ಅವರು ಫೈನಲ್ ಕನಸು ಕಮರಿತು.FIFA World Cup: ಕ್ವಾರ್ಟರ್ ಫೈನಲ್ನಲ್ಲಿ 8 ತಂಡಗಳ ಹೋರಾಟ, ಬಲಾಬಲ ಹೀಗಿದೆ..ಅಹಮದಾಬಾದ್ ದುರಂತದ ಅಂತಿಮ ತನಿಖಾ ವರದಿ ಅಕ್ಟೋಬರ್ನಲ್ಲಿ ಸಿದ್ಧ: ಸುಪ್ರೀಂಗೆ AAIBನವದೆಹಲಿ: 2025ರ ಜೂನ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ತನಿಖೆಯ ಅಂತಿಮ ಕರಡು ವರದಿ ಈ ವರ್ಷದ ಅಕ್ಟೋಬರ್ನಲ್ಲಿ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಸುಪ್ರೀಂ ಕೋರ್ಟ್ಗೆ ತಿಳಿಸಿದೆ.ಅಹಮದಾಬಾದ್ ವಿಮಾನ ದುರಂತ: AAIB ತನಿಖೆ ಬೆಂಬಲಿಸಿದ US ಸಾರಿಗೆ ಸುರಕ್ಷತಾ ಮಂಡಳಿE-20: ಗಡ್ಕರಿ ವರ್ಚಸ್ಸಿಗೆ ಧಕ್ಕೆ; ನಾಲ್ವರು ಯುಟ್ಯೂಬರ್ಗಳ ವಿರುದ್ಧ ಪ್ರಕರಣನಿತಿನ್ ಗಡ್ಕರಿನಾಗ್ಪುರ: ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಪಿತೂರಿ ನಡೆಸಿ, ಅವರ ವರ್ಚಸ್ಸಿಗೆ ಧಕ್ಕೆ ತಂದ ಆರೋಪದ ಮೇಲೆ ನಾಲ್ವರು ಯುಟ್ಯೂಬರ್ಗಳ (ಇನ್ಫ್ಲುಯೆನ್ಸರ್) ವಿರುದ್ಧ ಇಲ್ಲಿನ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಿಹಾರದ ಖ್ಯಾತ ಯೂಟ್ಯೂಬರ್ ಮನೀಶ್ ಕಶ್ಯಪ್ ಸೇರಿದಂತೆ, ದೇಸಿ ಬಾಯ್ಸ್ ಎನ್ಸಿಆರ್, ಹರ್ಷಿತ್ ರಾಠಿ ಮತ್ತು ಅಂಕಲೇಶ್ ಇನ್ವತೆ ಎಂಬುವವರ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.₹20 ಲಕ್ಷ ಕೋಟಿಗೆ ಇ.ವಿ.ವಾಹನ ಮಾರುಕಟ್ಟೆ: ನಿತಿನ್ ಗಡ್ಕರಿ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ: ಬಿ.ದಯಾನಂದ್ ಸೇರಿ ಮೂವರು ದೋಷಮುಕ್ತಬೆಂಗಳೂರು: ಆರ್ಸಿಬಿ ಐಪಿಎಲ್ ಟ್ರೋಫಿ ಗೆದ್ದಿದ್ದ ಸಂಭ್ರಮಾಚರಣೆ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 2025ರ ಜೂನ್ನಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರಂತದ ಬಳಿಕ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿಗಳಾದ ಬಿ.ದಯಾನಂದ್, ವಿಕಾಸ್ ಕುಮಾರ್ ವಿಕಾಸ್, ಶೇಖರ್ ಎಚ್. ತೆಕ್ಕಣ್ಣನವರ್ ವಿರುದ್ಧ ನಡೆದಿದ್ದ ವಿಭಾಗೀಯ ವಿಚಾರಣೆ ಪ್ರಕ್ರಿಯೆಯನ್ನು ಅಧಿಕೃತವಾಗಿ ರಾಜ್ಯ ಸರ್ಕಾರವು ಮುಕ್ತಾಯಗೊಳಿಸಿದೆ.ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ: ಮುಚ್ಚಿದ ಲಕೋಟೆ ವರದಿಗೆ ಆಕ್ಷೇಪಸಂಪಾದಕೀಯ: ‘ಕೆಪಿಎಸ್ಸಿ’ಗೆ ಮತ್ತೊಮ್ಮೆ ಮಸಿ; ಕಳಂಕ ಸರಣಿಗೆ ಕೊನೆ ಎಂದು?_ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಎಸ್. ಸಾಹುಕಾರ ಅಮಾನತುಗೊಂಡಿರುವುದು, ನ್ಯಾಯ, ಅರ್ಹತೆ ಮತ್ತು ನೈತಿಕತೆಯ ಪ್ರತೀಕ ಆಗಿರಬೇಕಾದ ಸಂಸ್ಥೆಯ ಇತಿಹಾಸಕ್ಕೆ ಸೇರ್ಪಡೆಯಾಗಿರುವ ಮತ್ತೊಂದು ವಿಷಾದಕರ ಅಧ್ಯಾಯವಾಗಿದೆ.ಸಂಪಾದಕೀಯ: ‘ಕೆಪಿಎಸ್ಸಿ’ಗೆ ಮತ್ತೊಮ್ಮೆ ಮಸಿ; ಕಳಂಕ ಸರಣಿಗೆ ಕೊನೆ ಎಂದು?ಆಳ ಅಗಲ: ವಿಳಂಬ, ವಿರೋಧದ ನಡುವೆ ರೋಪ್ ವೇಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮಲ್ಲಹಳ್ಳಿ ಜಲಪಾತದ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹550 ಕೋಟಿ ವೆಚ್ಚದ ರೋಪ್ ವೇಗೆ ಅನುಮತಿ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅರಣ್ಯ ಇಲಾಖೆಯ ಪರಿವೇಶ್ ತಂತ್ರಾಂಶದಲ್ಲಿ ಅರ್ಜಿ ಹಾಕಲಾಗಿದ್ದು, ಇಲಾಖೆಯ ಅನುಮತಿ ದೊರೆತ ಕೂಡಲೇ ಕಾಮಗಾರಿ ಆರಂಭವಾಗಲಿದೆ.ಆಳ ಅಗಲ: ವಿಳಂಬ, ವಿರೋಧದ ನಡುವೆ ರೋಪ್ ವೇExplainer: ರಷ್ಯಾ ಮೇಲೆ ಕಠಿಣ ನಿರ್ಬಂಧ ವಿಧಿಸುವ ಮಸೂದೆ ಮಂಡಿಸಿದ US ಸೆನೆಟರ್ಗಳುಅಮೆರಿಕದ ಶ್ವೇತಭವನವಾಷಿಂಗ್ಟನ್: ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುವ ಬಹುನಿರೀಕ್ಷಿತ ಮಸೂದೆಯನ್ನು ಅಮೆರಿಕದ ಉಭಯ ಪಕ್ಷಗಳ ಸೆನೆಟರ್ಗಳು ಮಂಡಿಸಿದ್ದಾರೆ. ರಷ್ಯಾದ ತೈಲ ಖರೀದಿ ಮುಂದುವರಿಸಿದ್ದಕ್ಕಾಗಿ ಸುಂಕ ಎದುರಿಸಬಹುದಾದ ಐದು ದೇಶಗಳ ಪೈಕಿ ಭಾರತವನ್ನು ಹೆಸರಿಸಲಾಗಿದೆ.Explainer:ರಷ್ಯಾ ಮೇಲೆ ಕಠಿಣ ನಿರ್ಬಂಧ ವಿಧಿಸುವ ಮಸೂದೆ ಮಂಡಿಸಿದ US ಸೆನೆಟರ್ಗಳುಬಿಡದಿ ಟೌನ್ಶಿಪ್: ಪರ – ವಿರುದ್ಧದ ಹೋರಾಟ ತಾರಕಕ್ಕೆಟೌನ್ಶಿಪ್ ಪರ ಹೋರಾಟಗಾರರು ಬಿಡದಿ ಕಡೆಗೆ ಹೊರಟ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕಾರಿಗೆ ಕೆಂಪು ಬಾವುಟ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು. ಪೊಲೀಸರ ಭದ್ರತೆಯಲ್ಲಿ ಕಾರು ಮುಂದಕ್ಕೆ ಸಾಗಿತುಬಿಡದಿ (ರಾಮನಗರ): ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ (ಜಿಬಿಐಟಿ) ಸಂಬಂಧಿಸಿದಂತೆ, ಬೈರಮಂಗಲದಲ್ಲಿ ನಡೆಯುತ್ತಿರುವ ಪರ ಮತ್ತು ವಿರುದ್ಧದ ಹೋರಾಟ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಸೋಮವಾರ ಸಂಘರ್ಷ ನಡೆದರೂ, ಮಂಗಳವಾರ ಪ್ರತಿಭಟನೆಯ ಕಾವು ಮಾತ್ರ ತಣ್ಣಗಾಗಿಲ್ಲ.ಬಿಡದಿ ಟೌನ್ಶಿಪ್: ಪರ – ವಿರುದ್ಧದ ಹೋರಾಟ ತಾರಕಕ್ಕೆ