ಈ ದಿನದ ಪ್ರಮುಖ 10 ಸುದ್ದಿಗಳು: ಗುರುವಾರ, 15 ಅಕ್ಟೋಬರ್ 2026
ಈ ದಿನದ ಪ್ರಮುಖ 10 ಸುದ್ದಿಗಳು: ಗುರುವಾರ, 15 ಅಕ್ಟೋಬರ್ 2026ಹೊರ್ಮುಜ್: ಸಮುದ್ರದಡಿಯಲ್ಲಿದ್ದ ಜಲ ಬಾಂಬ್ಗೆ ಡಿಕ್ಕಿ ಹೊಡೆದು ಮುಳುಗಿದ ಹಡಗುದುಬೈ (ಎಪಿ): ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಮಾಡುತ್ತಿದ್ದ ಹಡಗೊಂದು ಸಮುದ್ರದಡಿಯಲ್ಲಿದ್ದ ಜಲ ಬಾಂಬ್ಗೆ ಡಿಕ್ಕಿ ಹೊಡೆದು ಮುಳುಗಿದೆ ಎಂದು ಇರಾನ್ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತಿಳಿಸಿದೆ.ಈ ಸುದ್ದಿ ಪ

ಈ ದಿನದ ಪ್ರಮುಖ 10 ಸುದ್ದಿಗಳು: ಗುರುವಾರ, 15 ಅಕ್ಟೋಬರ್ 2026ಹೊರ್ಮುಜ್: ಸಮುದ್ರದಡಿಯಲ್ಲಿದ್ದ ಜಲ ಬಾಂಬ್ಗೆ ಡಿಕ್ಕಿ ಹೊಡೆದು ಮುಳುಗಿದ ಹಡಗುದುಬೈ (ಎಪಿ): ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಮಾಡುತ್ತಿದ್ದ ಹಡಗೊಂದು ಸಮುದ್ರದಡಿಯಲ್ಲಿದ್ದ ಜಲ ಬಾಂಬ್ಗೆ ಡಿಕ್ಕಿ ಹೊಡೆದು ಮುಳುಗಿದೆ ಎಂದು ಇರಾನ್ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತಿಳಿಸಿದೆ.ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಮತದಾರರ ಪಟ್ಟಿ ಅಕ್ರಮ ಆರೋಪ: ರಾಹುಲ್ ಗಾಂಧಿ ಅರ್ಜಿ ವಿಚಾರಣೆ ಇಂದುನವದೆಹಲಿ (ಪಿಟಿಐ): ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಯಲ್ಲಿ (ಎಸ್ಐಆರ್) ಭಾರಿ ಅಕ್ರಮಗಳು ನಡೆದಿವೆ ಮತ್ತು ಬೃಹತ್ ಸಂಖ್ಯೆಯ ಮತದಾರರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷಗಳ ಹಲವು ಮುಖಂಡರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ.ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಸಿಕ್ಕಿಂನ ರಾಜ್ಯಪಾಲರಾಗಿ ಬಿಜೆಪಿ ನಾಯಕ ದುಶ್ಯಂತ್ ಕುಮಾರ್ ನೇಮಕಕ್ಕೆ ಆಕ್ಷೇಪ ನವದೆಹಲಿ: ಬಿಜೆಪಿ ನಾಯಕ ದುಶ್ಯಂತ್ ಕುಮಾರ್ ಗೌತಮ್ ಅವರನ್ನು ಸಿಕ್ಕಿಂನ ರಾಜ್ಯಪಾಲರಾಗಿ ನೇಮಕಗೊಳಿಸಿರುವುದನ್ನು ಖಂಡಿಸಿ 2022ರಲ್ಲಿ ಕೊಲೆಯಾಗಿದ್ದ ಹೋಟೆಲ್ನ ಸ್ವಾಗತಕಾರಿಣಿ ಅಂಕಿತಾ ಭಂಡಾರಿ ಕುಟುಂಬಸ್ಥರು ನವದೆಹಲಿಯ ಇಂಡಿಯಾ ಗೇಟ್ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರುಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಮಾದಕ ವಸ್ತು ವಿರೋಧಿ ಹೋರಾಟಗಾರ ಝೋಟಾ ಹತ್ಯೆ :ಕೊಲೆ ಆರೋಪಿ ಅಂಗಡಿಗೆ ಬೆಂಕಿಚಂಡೀಗಢ (ಪಿಟಿಐ): ಮಾದಕ ವಸ್ತು ವಿರೋಧಿ ಹೋರಾಟಗಾರ ಪರ್ವೀಂದರ್ ಸಿಂಗ್ ಅಲಿಯಾಸ್ ಝೋಟಾ ಅವರನ್ನು ಹತ್ಯೆ ಮಾಡಿದ ಔಷಧ ಅಂಗಡಿಯ ಮಾಲೀಕ ಅಶ್ವನಿ ಕುಮಾರ್ ಅವರ ನಿವಾಸದ ಒಂದು ಭಾಗವನ್ನು ಪಂಜಾಬ್ನ ಮನ್ಸಾ ಜಿಲ್ಲೆಯ ಅಧಿಕಾರಿಗಳು ಬುಧವಾರ ತೆರವುಗೊಳಿಸಿದ್ದಾರೆ. ಈ ಮಧ್ಯೆ ಗುಂಪೊಂದು ಔಷಧ ಅಂಗಡಿಗೆ ಬೆಂಕಿ ಹಚ್ಚಿದೆ.ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಬಿಡಿಎ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡವರ ಸುಳಿವು ನೀಡಿದವರಿಗೆ ಬಹುಮಾನಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿರುವ ಅಥವಾ ನಕಲಿ ದಾಖಲೆಗಳ ಮೂಲಕ ಹಕ್ಕು ಸಾಧಿಸಿರುವವರ ಬಗ್ಗೆ ಮಾಹಿತಿ ನೀಡುವವರಿಗೆ ₹4 ಲಕ್ಷದವರೆಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಸಾರ್ವಜನಿಕರಿಗೆ ಇಂತಹ ಪ್ರೋತ್ಸಾಹಧನ ಘೋಷಿಸಿರುವುದು ಇದೇ ಮೊದಲು.ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಬ್ರಿಮ್ಸ್: ಆರಂಭವಾಗದ ಕ್ಯಾಥ್ಲ್ಯಾಬ್, ಹೃದ್ರೋಗಿಗಳಿಗೆ ಚಿಕಿತ್ಸೆ ಮರೀಚಿಕೆಬೀದರ್: ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಬ್ರಿಮ್ಸ್) ಕ್ಯಾಥ್ಲ್ಯಾಬ್ ನಿರ್ಮಿಸಿ ಒಂದೂವರೆ ವರ್ಷವಾದರೂ ಇದುವರೆಗೆ ಹೃದ್ರೋಗಿಗಳಿಗೆ ಚಿಕಿತ್ಸೆ ಮರೀಚಿಕೆಯಾಗಿದೆ. ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ‘ನಮ್ಮ ನಡೆ ಗ್ರಂಥಾಲಯದ ಕಡೆ’ ಅಭಿಯಾನ: ಬೆಂಗಳೂರು ನಗರ ವಿ.ವಿಯಲ್ಲಿ ಆರಂಭ ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಗ್ರಂಥಾಲಯ ಸಂಸ್ಕೃತಿ ಬೆಳೆಸುವುದು ಮತ್ತು ಓದುವ ಅಭ್ಯಾಸವನ್ನು ಉತ್ತೇಜಿಸಲು ‘ನಮ್ಮ ನಡೆ ಗ್ರಂಥಾಲಯದ ಕಡೆ’ ಎಂಬ ಕಾರ್ಯಕ್ರಮವನ್ನು ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಆರಂಭಿಸಿದೆ. ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಜಕ್ಕೂರು–ಅಮೃತಹಳ್ಳಿ: ಚರಂಡಿ ಕಾಮಗಾರಿ ಅಪೂರ್ಣಯಲಹಂಕ: ಜಕ್ಕೂರು–ಅಮೃತಹಳ್ಳಿ ಮುಖ್ಯರಸ್ತೆಯ ಎಂಸಿಇಸಿಎಚ್ಎಸ್ ಬಡಾವಣೆ ಸಮೀಪ ಹಾಗೂ ಅಮೃತಹಳ್ಳಿಯ 18ನೇ ಕ್ರಾಸ್ ಬಳಿ ಚರಂಡಿ (ಕಲ್ವರ್ಟ್) ನಿರ್ಮಾಣಕ್ಕಾಗಿ ಜಿಬಿಎ ವತಿಯಿಂದ ಗುಂಡಿ ಅಗೆದುಬಿಟ್ಟು ಮೂರು ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಸಂಚಾರಕ್ಕೆ ಸಂಕಷ್ಟ ಉಂಟಾಗಿದೆ. ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ2011ರ ಕೆಪಿಎಸ್ಸಿ ನೇಮಕಾತಿ ಕಾಯ್ದೆ ರದ್ದು: ಸುಪ್ರೀಂ ಕೋರ್ಟ್ ಎಚ್ಚರಿಕೆನವದೆಹಲಿ: 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳ ನೇಮಕಕ್ಕೆ ಕರ್ನಾಟಕ ಸರ್ಕಾರ ತಂದಿದ್ದ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಸುಪ್ರೀಂ ಕೋರ್ಟ್ ಮೌಖಿಕವಾಗಿ ಬುಧವಾರ ಎಚ್ಚರಿಸಿದೆ. ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಜಂತರ್ ಮಂತರ್ಗೆ ‘ಅತಿಕ್ರಮ ಪ್ರವೇಶ’: CJP ನಾಯಕ ದಾಸ್,ರಾಂಕಾಗೆ ನ್ಯಾಯಾಂಗ ಬಂಧನನವದೆಹಲಿ: ಜಂತರ್ ಮಂತರ್ಗೆ ‘ಅತಿಕ್ರಮ ಪ್ರವೇಶ’ ಮಾಡಿದ್ದಕ್ಕಾಗಿ ಸಿಜೆಪಿ ನಾಯಕರಾದ ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ಅವರನ್ನು ಬಂಧಿಸಿ, ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತಿಹಾರ ಜೈಲಿಗೆ ಬುಧವಾರ ಕಳುಹಿಸಲಾಯಿತು. ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ