ಈ ದಿನದ ಪ್ರಮುಖ 10 ಸುದ್ದಿಗಳು: ಶನಿವಾರ, 18 ಜುಲೈ 2026
ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ನಿ ಚನ್ನಮ್ಮ ವಿಧಿವಶಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರು ವಿಧಿವಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.ಉಸಿರಾಟದ ತೊಂದರೆ ಹಾಗೂ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಅವರು ಬೆಂಗಳೂರಿನ ಮಣಿಪಾಲ್ ಆಸ್

ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ನಿ ಚನ್ನಮ್ಮ ವಿಧಿವಶಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರು ವಿಧಿವಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.ಉಸಿರಾಟದ ತೊಂದರೆ ಹಾಗೂ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ 4 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ 4.50ರ ಸುಮಾರಿಗೆ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ನಿ ಚನ್ನಮ್ಮ ವಿಧಿವಶಆಸ್ಪತ್ರೆಯಲ್ಲೂ ಉಪವಾಸ: ಚಿಕಿತ್ಸೆ ಪಡೆಯಲು ಒಪ್ಪದ ವಾಂಗ್ಚೂಕ್ನವದೆಹಲಿ: ಚಿಕಿತ್ಸೆ ಪಡೆದುಕೊಳ್ಳಲು ಸೊನಮ್ ವಾಂಗ್ಚೂಕ್ ಅವರು ನಿರಾಕರಿಸುತ್ತಿದ್ದಾರೆ ಎಂದು ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಶನಿವಾರ ತಿಳಿಸಿದ್ದಾರೆ.ಮೂರು ವಾರಗಳ ಕಾಲ ಉಪವಾಸ ಕುಳಿತು ತೀವ್ರವಾಗಿ ಬಳಲಿರುವ ವಾಂಗ್ಚೂಕ್ ಅವರನ್ನು ನ್ಯಾಯಾಲಯದ ಸೂಚನೆ ಮೇರೆಗೆ ಇಂದು ದೆಹಲಿ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆಸ್ಪತ್ರೆಯಲ್ಲೂ ಉಪವಾಸ: ಚಿಕಿತ್ಸೆ ಪಡೆಯಲು ಒಪ್ಪದ ವಾಂಗ್ಚೂಕ್ವಾಂಗ್ಚೂಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದದ್ದು ತಪ್ಪು: ರಾಹುಲ್ನವದೆಹಲಿ: ಜಂತರ್ಮಂತರ್ನಲ್ಲಿ ಶಾಂತಿಯುತವಾಗಿ ಉಪವಾಸ ಮಾಡುವ ಮೂಲಕ ಪ್ರತಿಭಟನೆ ಮಾಡುತ್ತಿದ್ದ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ಅಲ್ಲಿಂದ ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದು ತಪ್ಪು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.ವಾಂಗ್ಚೂಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದದ್ದು ತಪ್ಪು: ರಾಹುಲ್ಇತಿಹಾಸ ಸೃಷ್ಟಿಸಿದ ವಿಕ್ರಮ್-1: ದೇಶದ ಮೊದಲ ಖಾಸಗಿ ಕಕ್ಷೀಯ ರಾಕೆಟ್ ಉಡ್ಡಯನಹೈದರಾಬಾದ್: ದೇಶದ ಬಾಹ್ಯಾಕಾಶ ಕ್ಷೇತ್ರವು ಹೊಸದೊಂದು ಮೈಲುಗಲ್ಲಿಗೆ ಸಾಕ್ಷಿಯಾಗಿದೆ. ಹೈದರಾಬಾದ್ನ ಸ್ಪೇಸ್–ಟೆಕ್ ಸಾರ್ಟ್ಆಪ್ ‘ಸ್ಕೈರೂಟ್ ಏರೊಸ್ಪೇಸ್’ ನಿರ್ಮಿಸಿದ ‘ವಿಕ್ರಮ್-1’ ರಾಕೆಟ್ ಅನ್ನು ಶನಿವಾರ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.ಇತಿಹಾಸ ಸೃಷ್ಟಿಸಿದ ವಿಕ್ರಮ್-1: ದೇಶದ ಮೊದಲ ಖಾಸಗಿ ಕಕ್ಷೀಯ ರಾಕೆಟ್ ಉಡ್ಡಯನಭಾರತದ ಮೊದಲ ಖಾಸಗಿ ರಾಕೆಟ್ ಉಡ್ಡಯನ: ಸ್ಕೈರೂಟ್ ಏರೊಸ್ಪೇಸ್ಗೆ ಮೋದಿ ಅಭಿನಂದನೆನವದೆಹಲಿ: ಖಾಸಗಿಯಾಗಿ ಅಭಿವೃದ್ಧಿಪಡಿಸಿರುವ ದೇಶದ ಮೊದಲ ಕಕ್ಷೀಯ ರಾಕೆಟ್ ವಿಕ್ರಮ್–1 ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಅದನ್ನು ತಯಾರಿಸಿದ ಸ್ಕೈರೂಟ್ ಏರೊಸ್ಪೇಸ್ ಸಂಸ್ಥೆಯ ತಂಡದ ಜೊತೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ.ಭಾರತದ ಮೊದಲ ಖಾಸಗಿ ರಾಕೆಟ್ ಉಡ್ಡಯನ: ಸ್ಕೈರೂಟ್ ಏರೊಸ್ಪೇಸ್ಗೆ ಮೋದಿ ಅಭಿನಂದನೆನೂತನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಶಿರಾ ಬಳಿ ನಿರ್ಮಿಸಬೇಕು: ಸೋಮಣ್ಣಬೆಂಗಳುರು: ಸರ್ಕಾರವು ನೂತನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯ ಶಿರಾ ಬಳಿ ನಿರ್ಮಿಸಬೇಕು ಎಂಬುದು ರಾಜ್ಯದ ಬಹುತೇಕ ಜನಪ್ರತಿನಿಧಿಗಳ ಒತ್ತಾಯ. ಶಿರಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಪ್ರಗತಿಗೆ ಸಹಾಯಕವಾಗಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಇಲಾಖೆಯ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.ನೂತನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಶಿರಾ ಬಳಿ ನಿರ್ಮಿಸಬೇಕು: ಸೋಮಣ್ಣಪತಿಗೆ ಆಗದಿದ್ರೆ ‘ಸಂಸತ್ ಚಲೊ’ವನ್ನು ನಾನು ಮುನ್ನಡೆಸುವೆ: ವಾಂಗ್ಚೂಕ್ ಪತ್ನಿನವದೆಹಲಿ: ಜುಲೈ 20ರಂದು ನಡೆಯಲಿರುವ ಸಂಸತ್ ಚಲೊ ಜಾಥಾದಲ್ಲಿ ಸೊನಮ್ ವಾಂಗ್ಚೂಕ್ ಅವರಿಗೆ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೆ, ಅದರ ನೇತೃತ್ವವನ್ನು ನಾನು ವಹಿಸಿಕೊಳ್ಳುತ್ತೇನೆ ಎಂದು ವಾಂಗ್ಚೂಕ್ ಪತ್ನಿ ಗೀತಾಂಜಲಿ ಜೆ. ಆಂಗ್ಮೊ ಹೇಳಿದ್ದಾರೆ.ಪತಿಗೆ ಆಗದಿದ್ರೆ ‘ಸಂಸತ್ ಚಲೊ’ವನ್ನು ನಾನು ಮುನ್ನಡೆಸುವೆ: ವಾಂಗ್ಚೂಕ್ ಪತ್ನಿಮುಂದುವರಿದ ಸಂಘರ್ಷ: ಇರಾನ್ನ ವಿಮಾನ ನಿಲ್ದಾಣ, ಸೇತುವೆಗಳ ಮೇಲೆ ಅಮೆರಿಕ ದಾಳಿವಾಷಿಂಗ್ಟನ್/ಟೆಹರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಶುಕ್ರವಾರ ಉಭಯ ದೇಶಗಳು ಪರಸ್ಪರ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ.ಅಮೆರಿಕ ದಾಳಿಯನ್ನು ಮುಂದುವರಿಸಿದರೆ ಆಕ್ರಮಣಕಾರಿ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಇರಾನ್ನ ಹಿರಿಯ ಸೇನಾ ಸಲಹೆಗಾರರು ಎಚ್ಚರಿಸಿದ್ದಾರೆ.ಮುಂದುವರಿದ ಸಂಘರ್ಷ: ಇರಾನ್ನ ವಿಮಾನ ನಿಲ್ದಾಣ, ಸೇತುವೆಗಳ ಮೇಲೆ ಅಮೆರಿಕ ದಾಳಿಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ನೀಡಬೇಕು: ಹಂಸಲೇಖ ಪರ ನೆನಪಿರಲಿ ಪ್ರೇಮ್ ಅಭಿಯಾನಕನ್ನಡದ ನಟ ಪ್ರೇಮ್ ಅವರು ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕೆಂದು ಅಭಿಯಾನ ಶುರು ಮಾಡಲು ಸಜ್ಜಾಗಿದ್ದಾರೆ. ಸಂಗೀತ ನಿರ್ದೇಶನ, ಜನಪ್ರಿಯ ಗೀತೆಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಹಂಸಲೇಖ ಅವರ ಕುರಿತು ನಟ ಪ್ರೇಮ್ ಪೋಸ್ಟ್ ಹಂಚಿಕೊಂಡಿದ್ದಾರೆ.ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ನೀಡಬೇಕು: ಹಂಸಲೇಖ ಪರ ನೆನಪಿರಲಿ ಪ್ರೇಮ್ ಅಭಿಯಾನಫಿಫಾ ವಿಶ್ವಕಪ್ ಫೈನಲ್: ಎಲ್ಲಿ ನೋಡಬಹುದು, ಸಮಾರೋಪದ ವಿಶೇಷದ ಮಾಹಿತಿ ಇಲ್ಲಿದೆ..ನ್ಯೂಯಾರ್ಕ್: 48 ತಂಡಗಳು, 104 ಪಂದ್ಯಗಳು, 39 ದಿನಗಳ ರೋಚಕ ಹಣಾಹಣಿ. ಫಿಫಾ ವಿಶ್ವಕಪ್ ಸಮರ ಕೊನೇ ಹಂತ ತಲುಪಿದೆ. ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಮಧ್ಯರಾತ್ರಿ 12.30ಕ್ಕೆ ಅರ್ಜೆಂಟೀನಾ ಮತ್ತು ಸ್ಪೇನ್ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಫಿಫಾ ವಿಶ್ವಕಪ್ ಫೈನಲ್: ಎಲ್ಲಿ ನೋಡಬಹುದು, ಸಮಾರೋಪದ ವಿಶೇಷದ ಮಾಹಿತಿ ಇಲ್ಲಿದೆ..