ಈ ದಿನದ ಪ್ರಮುಖ 10 ಸುದ್ದಿಗಳು: ಶನಿವಾರ, 24 ಅಕ್ಟೋಬರ್ 2026
ಈ ದಿನದ ಪ್ರಮುಖ 10 ಸುದ್ದಿಗಳು: ಶನಿವಾರ, 24 ಅಕ್ಟೋಬರ್ 2026ಚೀನಾ ಸೇನೆ ಗಸ್ತು ನಿಯಮ ಉಲ್ಲಂಘಿಸುತ್ತಿರುವುದೇ ಗಡಿ ಸಂಘರ್ಷಕ್ಕೆ ಕಾರಣ: MEA ಚೀನಾ ಸೇನಾ ಸಿಬ್ಬಂದಿ ನಿಗದಿತ ಗಸ್ತು ಮಾರ್ಗವನ್ನು ಬಿಟ್ಟು ಬೇರೆಡೆ ಗಸ್ತು ತಿರುಗಿದಾಗಲೆಲ್ಲಾ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್ಎಸಿ) ಬಳಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ಭಾರತ ಶುಕ್ರವಾರ ಹೇಳಿದೆ.ಚೀನಾ ಸೇನೆ ಗಸ್ತ

ಈ ದಿನದ ಪ್ರಮುಖ 10 ಸುದ್ದಿಗಳು: ಶನಿವಾರ, 24 ಅಕ್ಟೋಬರ್ 2026ಚೀನಾ ಸೇನೆ ಗಸ್ತು ನಿಯಮ ಉಲ್ಲಂಘಿಸುತ್ತಿರುವುದೇ ಗಡಿ ಸಂಘರ್ಷಕ್ಕೆ ಕಾರಣ: MEA ಚೀನಾ ಸೇನಾ ಸಿಬ್ಬಂದಿ ನಿಗದಿತ ಗಸ್ತು ಮಾರ್ಗವನ್ನು ಬಿಟ್ಟು ಬೇರೆಡೆ ಗಸ್ತು ತಿರುಗಿದಾಗಲೆಲ್ಲಾ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್ಎಸಿ) ಬಳಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ಭಾರತ ಶುಕ್ರವಾರ ಹೇಳಿದೆ.ಚೀನಾ ಸೇನೆ ಗಸ್ತು ನಿಯಮ ಉಲ್ಲಂಘಿಸುತ್ತಿರುವುದೇ ಗಡಿ ಸಂಘರ್ಷಕ್ಕೆ ಕಾರಣ: MEAತೀವ್ರ ಮಳೆ ಕೊರತೆ: ಶತಕದತ್ತ ಸೋನಾಮಸೂರಿ ಅಕ್ಕಿ ಬೆಲೆ ತೀವ್ರ ಮಳೆ ಕೊರತೆ ಬೆನ್ನಲ್ಲೇ ಸೋನಾಮಸೂರಿ ಅಕ್ಕಿಯ ಬೆಲೆ ನಿರಂತರವಾಗಿ ಹೆಚ್ಚಾಗುತ್ತಲೇ ಇದ್ದು, 10 ದಿನಗಳಲ್ಲಿ ಒಂದು ಕ್ವಿಂಟಲ್ಗೆ ₹1,500ರಷ್ಟು ಬೆಲೆ ಹೆಚ್ಚಾಗಿದೆ. ತೀವ್ರ ಮಳೆ ಕೊರತೆ: ಶತಕದತ್ತ ಸೋನಾಮಸೂರಿ ಅಕ್ಕಿ ಬೆಲೆಬ್ಲ್ಯಾಕ್ಮೇಲ್ ಮಾಡಲು ಸ್ಟಿಂಗ್: ಅಧಿಕಾರ ಹೋದ ಮೇಲೆ ಪಿತೂರಿ– ಸಿದ್ದರಾಮಯ್ಯ ‘ನನ್ನ ವಿರುದ್ಧ ಪಿತೂರಿ ನಡೆಸಲಾಗಿದೆ. ಅದರ ಭಾಗವೇ ಸ್ಟಿಂಗ್ ಆಪರೇಷನ್. ಅದು ಸುಳ್ಳು ಕೇಸ್. ಬ್ಲ್ಯಾಕ್ಮೇಲ್ಗೆ ಮಾಡಿರುವಂತಹದು’ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಹೇಳಿದರು.ಬ್ಲ್ಯಾಕ್ಮೇಲ್ ಮಾಡಲು ಸ್ಟಿಂಗ್: ಅಧಿಕಾರ ಹೋದ ಮೇಲೆ ಪಿತೂರಿ– ಸಿದ್ದರಾಮಯ್ಯಮೊದಲು SIR ಲೋಪ ಸರಿಪಡಿಸಿ: ಎಸ್ಎಸ್ಆರ್ ಸಭೆಯಿಂದ ಹೊರನಡೆದ ಟಿವಿಕೆ, ಡಿಎಂಕೆ ಮತದಾರರ ಪಟ್ಟಿಗಳ ವಿಶೇಷ ವಾರ್ಷಿಕ ಪರಿಷ್ಕರಣೆ (ಎಸ್ಎಸ್ಆರ್) ಕುರಿತು ಚರ್ಚಿಸಲು ಶುಕ್ರವಾರ ತಮಿಳುನಾಡು ಚುನಾವಣಾ ಆಯೋಗ ಕರೆದಿದ್ದ ಸಮಾಲೋಚನಾ ಸಭೆಯಿಂದ ಆಡಳಿತಾರೂಢ ಟಿವಿಕೆ, ಪ್ರತಿಪಕ್ಷ ಡಿಎಂಕೆ ಸೇರಿದಂತೆ ಒಟ್ಟು 12 ರಾಜಕೀಯ ಪಕ್ಷಗಳ ಪೈಕಿ 9 ಪಕ್ಷಗಳು ಹೊರನಡೆದಿವೆ.ಮೊದಲು SIR ಲೋಪ ಸರಿಪಡಿಸಿ: ಎಸ್ಎಸ್ಆರ್ ಸಭೆಯಿಂದ ಹೊರನಡೆದ ಟಿವಿಕೆ, ಡಿಎಂಕೆವಿಧಾನ ಪರಿಷತ್ ಮತದಾನ ಕಾರ್ಯಕರ್ತರ ಬಡಿದಾಟ; ಮುನಿರತ್ನ ಮೇಲೆ ಹಲ್ಲೆ ಯತ್ನ ರಾಜ್ಯ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ಶುಕ್ರವಾರ ಬಿರುಸಿನ ಮತದಾನ ನಡೆದಿದ್ದು, ಮತದಾನದ ವೇಳೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಗದಗ ಜಿಲ್ಲೆಯ ಕೆಲವೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಬಡಿದಾಟ ನಡೆದಿದೆ.ವಿಧಾನ ಪರಿಷತ್ ಮತದಾನ ಕಾರ್ಯಕರ್ತರ ಬಡಿದಾಟ; ಮುನಿರತ್ನ ಮೇಲೆ ಹಲ್ಲೆ ಯತ್ನಶಿಕಾರಿಪುರ: ಕಾರ್–ಕ್ಯಾಂಟರ್ ಡಿಕ್ಕಿ; ನಾಲ್ವರ ಸಾವು ತಾಲ್ಲೂಕಿನ ತರಲಘಟ್ಟ ಗ್ರಾಮದ ಸಮೀಪ ಕಾರು ಹಾಗೂ ಅಡಿಕೆ ತುಂಬಿದ ಕ್ಯಾಂಟರ್ ನಡುವೆ ಶುಕ್ರವಾರ ಡಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಶಿಕಾರಿಪುರ: ಕಾರ್–ಕ್ಯಾಂಟರ್ ಡಿಕ್ಕಿ; ನಾಲ್ವರ ಸಾವುದಸರಾದಲ್ಲಿ ಸರ್ಕಾರದಿಂದಲೇ ಅಸ್ಪೃಶ್ಯತೆ ಆಚರಣೆ: ಗೋವಿಂದ ಕಾರಜೋಳ ಆರೋಪ ‘ಅಸ್ಪೃಶ್ಯತೆ ಆಚರಣೆ ಕಾಂಗ್ರೆಸ್ ಸರ್ಕಾರದಲ್ಲಿ ಜೀವಂತವಾಗಿದೆ. ಮೈಸೂರು ದಸರಾ ವೇಳೆ ಸಚಿವರಾದ ಶಿವರಾಜ್ ತಂಗಡಗಿ, ಪಿ.ಎಂ. ನರೇಂದ್ರಸ್ವಾಮಿ ಹಾಗೂ ಕೆ.ಎಸ್. ಬಸವಂತಪ್ಪ ಅವರಿಗೆ ಮಾಡಿದ ಅವಮಾನವೇ ಇದಕ್ಕೆ ಉದಾಹರಣೆ’ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.ದಸರಾದಲ್ಲಿ ಸರ್ಕಾರದಿಂದಲೇ ಅಸ್ಪೃಶ್ಯತೆ ಆಚರಣೆ: ಗೋವಿಂದ ಕಾರಜೋಳ ಆರೋಪರಾಕೇಶ್ ಶೆಟ್ಟಿ ರಕ್ಷಣೆಗೆ ಸರ್ಕಾರದಿಂದಲೇ ಯತ್ನ: ಎಚ್.ಡಿ.ಕುಮಾರಸ್ವಾಮಿ ‘ಸ್ಟಿಂಗ್ ಕಾರ್ಯಾಚರಣೆ ಸಂಚುಕೋರ ರಾಕೇಶ್ ಶೆಟ್ಟಿಯನ್ನು ರಕ್ಷಿಸಲು ಸರ್ಕಾರದ ಉನ್ನತ ವ್ಯಕ್ತಿಗಳೇ ಪ್ರಯತ್ನಿಸುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.ರಾಕೇಶ್ ಶೆಟ್ಟಿ ರಕ್ಷಣೆಗೆ ಸರ್ಕಾರದಿಂದಲೇ ಯತ್ನ: ಎಚ್.ಡಿ.ಕುಮಾರಸ್ವಾಮಿಇರಾನ್ ವಿರುದ್ಧ ಮತ್ತೊಮ್ಮೆ ಸೇನಾ ಕಾರ್ಯಾಚರಣೆ: ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್ ವಿರುದ್ಧ ತಮ್ಮ ದೇಶವು ಮತ್ತೊಮ್ಮೆ ಸೇನಾ ಕಾರ್ಯಾಚರಣೆ ನಡೆಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.ಇರಾನ್ ವಿರುದ್ಧ ಮತ್ತೊಮ್ಮೆ ಸೇನಾ ಕಾರ್ಯಾಚರಣೆ: ಅಮೆರಿಕ ಅಧ್ಯಕ್ಷ ಟ್ರಂಪ್ಟಿಬೆಟ್ನಲ್ಲಿ ಭೂಕಂಪ: 16 ಮಂದಿ ಸಾವು, ಡ್ರೋನ್ಗಳ ಮೂಲಕ ಚೀನಾ ಶೋಧಕಾರ್ಯ ಟಿಬೆಟ್ನ ಪರ್ವತ ಪ್ರದೇಶದಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ. ಕನಿಷ್ಠ 16 ಮಂದಿ ಮೃತಪಟ್ಟಿದ್ದು, 76 ಮಂದಿ ಗಾಯಗೊಂಡಿದ್ದಾರೆ. ಬದುಕುಳಿದವರಿಗಾಗಿ ಉಪಗ್ರಹಗಳು ಮತ್ತು ಡ್ರೋನ್ಗಳನ್ನು ಬಳಸಿಕೊಂಡು ಚೀನಾ ಶೋಧ ಕಾರ್ಯಾಚರಣೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಟಿಬೆಟ್ನಲ್ಲಿ ಭೂಕಂಪ: 16 ಮಂದಿ ಸಾವು, ಡ್ರೋನ್ಗಳ ಮೂಲಕ ಚೀನಾ ಶೋಧಕಾರ್ಯ