ಈ ದಿನದ ಪ್ರಮುಖ 10 ಸುದ್ದಿಗಳು: ಶನಿವಾರ, 24 ಅಕ್ಟೋಬರ್ 2026
ಈ ದಿನದ ಪ್ರಮುಖ 10 ಸುದ್ದಿಗಳು: ಶನಿವಾರ, 24 ಅಕ್ಟೋಬರ್ 2026ಧಾರವಾಡ :ಸಾಲಬಾಧೆಯಿಂದ ತಾಯಿ, ಮಗಳು ಸಾವುಧಾರವಾಡ: ಸಾಲಬಾಧೆ ತಾಳಲಾರದೆ ಶನಿವಾರ ಮೂವರು ಪುತ್ರಿಯರಿಗೆ ನುಸಿ ಗುಳಿಗೆ ನುಂಗಿಸಿದ್ದಲ್ಲದೇ, ತಾನೂ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಪೈಕಿ, ಇಬ್ಬರು ಮೃತಪಟ್ಟಿದ್ದಾರೆ.ಈ ಸುದ್ದಿ ಪೂರ್ತಿ ಇಲ್ಲಿ ಕ್ಲಿಕ್ಕಿಸಿಆತ್ಮಸ್ಥೈರ್ಯದಿಂದ ಮುನ್ನಡೆಸುವ ಶಕ್ತಿ ಚನ

ಈ ದಿನದ ಪ್ರಮುಖ 10 ಸುದ್ದಿಗಳು: ಶನಿವಾರ, 24 ಅಕ್ಟೋಬರ್ 2026ಧಾರವಾಡ :ಸಾಲಬಾಧೆಯಿಂದ ತಾಯಿ, ಮಗಳು ಸಾವುಧಾರವಾಡ: ಸಾಲಬಾಧೆ ತಾಳಲಾರದೆ ಶನಿವಾರ ಮೂವರು ಪುತ್ರಿಯರಿಗೆ ನುಸಿ ಗುಳಿಗೆ ನುಂಗಿಸಿದ್ದಲ್ಲದೇ, ತಾನೂ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಪೈಕಿ, ಇಬ್ಬರು ಮೃತಪಟ್ಟಿದ್ದಾರೆ.ಈ ಸುದ್ದಿ ಪೂರ್ತಿ ಇಲ್ಲಿ ಕ್ಲಿಕ್ಕಿಸಿಆತ್ಮಸ್ಥೈರ್ಯದಿಂದ ಮುನ್ನಡೆಸುವ ಶಕ್ತಿ ಚನ್ನಮ್ಮ: ಕವಿತಾ ಕುಸುಗಲ್ಲ ಅಭಿಮತ ಚನ್ನಮ್ಮನ ಕಿತ್ತೂರು: ‘ಸಮಾಜದಲ್ಲಿನ ಆಂತರಿಕ ವಿರೋಧ ಮತ್ತು ದ್ರೋಹಗಳನ್ನು ಮೆಟ್ಟಿ ನಿಂತು, ಪ್ರಗತಿಯತ್ತ ಧಾವಿಸಲು ಹಾಗೂ ಇಂದಿನ ಮಹಿಳೆಯರನ್ನು ವರ್ತಮಾನದಲ್ಲಿ ಧೈರ್ಯದಿಂದ ಮುನ್ನಡೆಸಲು ರಾಣಿ ಚನ್ನಮ್ಮ ನಮಗೆ ಶಕ್ತಿಯಾಗಿದ್ದಾಳೆ’ ಎಂದು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಕವಿತಾ ಕುಸಗುಲ್ಲ ಹೇಳಿದರು. ಈ ಸುದ್ದಿ ಪೂರ್ತಿ ಇಲ್ಲಿ ಕ್ಲಿಕ್ಕಿಸಿಯಲಹಂಕ ಬಂಗಲೆಯಲ್ಲಿ ಸಹೋದರಿ ಶರ್ಮಿಳಾ ಮಗಳ ಮದುವೆಗೆ ಒಪ್ಪಿಗೆ ನೀಡದ ಜಗನ್: ವರದಿಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ (ವೈಎಸ್ಆರ್) ಅವರ ಮಕ್ಕಳಾದ ವೈ.ಎಸ್. ಜಗನ್ ಮೋಹನ್ ರೆಡ್ಡಿ (ಮಾಜಿ ಮುಖ್ಯಮಂತ್ರಿ, ವೈಎಸ್ಆರ್ಸಿಪಿ ಮುಖ್ಯಸ್ಥ) ಮತ್ತು ವೈ.ಎಸ್. ಶರ್ಮಿಳಾ ರೆಡ್ಡಿ (ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥೆ) ನಡುವಿನ ‘ಒಡಹುಟ್ಟಿದವರ ಪೈಪೋಟಿ’ ತೀವ್ರಗೊಂಡಿದ್ದು, ಅವರ ಕುಟುಂಬದಲ್ಲಿ ನಡೆಯಲಿರುವ ವಿವಾಹವು ಈಗ ಚರ್ಚೆಯ ವಿಷಯವಾಗಿದೆ. ಈ ಸುದ್ದಿ ಪೂರ್ತಿ ಇಲ್ಲಿ ಕ್ಲಿಕ್ಕಿಸಿ ಅನಧಿಕೃತ ಗೈರಿಗೆ ತಾಯ್ತನದ ರಜೆಯ ಗುರಾಣಿ: ಉದ್ಯೋಗಿ ವಜಾ ಕ್ರಮ ಎತ್ತಿಹಿಡಿದ ಕೋರ್ಟ್ ಬೆಂಗಳೂರು: ‘ತಾಯ್ತನದ ರಜೆಯನ್ನು ದೀರ್ಘ ಕಾಲದ ಅನಧಿಕೃತ ಗೈರು ಹಾಜರಿಗೆ ಅನುಕೂಲಕರ ಗುರಾಣಿಯಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಜಿಲ್ಲಾ ನ್ಯಾಯಾಲಯದ ಸಾಫ್ಟ್ವೇರ್ ತಂತ್ರಜ್ಞೆಯೊಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದ ಕ್ರಮವನ್ನು ಎತ್ತಿಹಿಡಿದಿದೆ.ಈ ಸುದ್ದಿ ಪೂರ್ತಿ ಇಲ್ಲಿ ಕ್ಲಿಕ್ಕಿಸಿದೇವರು, ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಬೇಡ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ತೀರ್ಥಹಳ್ಳಿ: ‘ಜೀವನಕ್ಕೋಸ್ಕರ ರಾಜಕಾರಣಕ್ಕೆ ಬರಬೇಡಿ. ಜೀವನವನ್ನು ಬದಲಾಯಿಸಲು ರಾಜಕಾರಣ ಆಯ್ಕೆ ಮಾಡಿಕೊಳ್ಳಿ. ದೇವರು, ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಬೇಡ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಾಸ್ ಹೇಳಿದರು.ಈ ಸುದ್ದಿ ಪೂರ್ತಿ ಇಲ್ಲಿ ಕ್ಲಿಕ್ಕಿಸಿಅಕ್ರಮ ಸಿಮ್ ಕಾರ್ಡ್ ಮಾರಾಟ: ಹೈಕೋರ್ಟ್ ಕಳವಳ ಬೆಂಗಳೂರು: ಅನುಮತಿಯಿಲ್ಲದೆ ಆಧಾರ ಕಾರ್ಡ್ ಸಂಖ್ಯೆ ಹಾಗೂ ಗ್ರಾಹಕರ ದಾಖಲೆಗಳನ್ನು ಬಳಸಿಕೊಂಡು ಅಕ್ರಮವಾಗಿ ಸಿಮ್ ಕಾರ್ಡ್ಗಳನ್ನು ಸಕ್ರಿಯಗೊಳಿಸಿ ಮಾರಾಟ ಮಾಡುವ ಜಾಲದ ಬಗ್ಗೆ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಸುದ್ದಿ ಪೂರ್ತಿ ಇಲ್ಲಿ ಕ್ಲಿಕ್ಕಿಸಿನಿಗದಿಯಂತೆ ಎಸ್ಎಸ್ಎಲ್ಸಿ–ಪಿಯು ಪರೀಕ್ಷೆ: ಮಧು ಬಂಗಾರಪ್ಪ ಬೆಂಗಳೂರು: ‘ಎಸ್ಎಸ್ಎಲ್ಸಿ, ದ್ವಿತೀಯ ಪಿಯು ಪರೀಕ್ಷೆಗಳನ್ನು ಮುಂದೂಡುವ ಪ್ರಶ್ನೆಯೇ ಇಲ್ಲ. ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಅವಧಿ ಮುಕ್ತಾಯವಾಗಿದ್ದು, ಅಂತಿಮ ವೇಳಾಪಟ್ಟಿಯನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಶೀಘ್ರ ಪ್ರಕಟಿಸಲಿದೆ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಈ ಸುದ್ದಿ ಪೂರ್ತಿ ಇಲ್ಲಿ ಕ್ಲಿಕ್ಕಿಸಿಒಡಿಶಾದಿಂದ ಉತ್ತರಪ್ರದೇಶಕ್ಕೆ 6 ತಿಂಗಳು ಪ್ರಯಾಣಿಸಿದ ಬೃಹತ್ ಯಂತ್ರ ಹೊತ್ತ ಟ್ರಕ್ ಲಖನೌ: 308 ಚಕ್ರಗಳ ‘ಬಾಹುಬಲಿ ಟ್ರಕ್’, ಅದರ ಮೇಲೆ 200 ಟನ್ ತೂಕದ ಯಂತ್ರ, ಆರು ತಿಂಗಳ ಸುದೀರ್ಘ ಪ್ರಯಾಣ, ಹಲವಾರು ಅಡೆತಡೆಗಳು, ಸವಾಲುಗಳು... ಈ ಸುದ್ದಿ ಪೂರ್ತಿ ಇಲ್ಲಿ ಕ್ಲಿಕ್ಕಿಸಿತರಬೇತಿ ವಿಮಾನಗಳ ಡಿಕ್ಕಿ: ನಾಲ್ವರು ಪೈಲಟ್ಗಳ ಸಾವು ಮನಿಲಾ: ತರಬೇತಿ ಹಾರಾಟದ ಸಮಯದಲ್ಲಿ ಫಿಲಿಪ್ಪೀನ್ಸ್ ವಾಯುಪಡೆಯ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಪತನಗೊಂಡ ಪರಿಣಾಮ ವಿಮಾನಗಳಲ್ಲಿದ್ದ ನಾಲ್ವರು ಪೈಲಟ್ಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.ಈ ಸುದ್ದಿ ಪೂರ್ತಿ ಇಲ್ಲಿ ಕ್ಲಿಕ್ಕಿಸಿಹೂಥಿ ಕ್ಷಿಪಣಿ ಹೊಡೆದುರುಳಿಸಿದ ಸೌದಿ ಅರೇಬಿಯಾರಿಯಾದ್: ಇರಾನ್ ಬೆಂಬಲಿತ ಹೂಥಿ ಬಂಡುಕೋರರು ಹಾರಿಸಿದ ಎರಡು ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಸೌದಿ ಅರೇಬಿಯಾ ಹೇಳಿದೆ. ಈ ಸುದ್ದಿ ಪೂರ್ತಿ ಇಲ್ಲಿ ಕ್ಲಿಕ್ಕಿಸಿ