ಈ ದಿನದ ಪ್ರಮುಖ 10 ಸುದ್ದಿಗಳು: ಶನಿವಾರ, 25 ಜುಲೈ 2026
ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ಸೌರ ಪಂಪ್ಸೆಟ್ ಅಳವಡಿಕೆ: ಕ್ರೆಡಲ್ ಸೂಚನೆ ಪಂಪ್ಸೆಟ್ ಬಳಸಿ ಕೃಷಿಬೆಂಗಳೂರು: ‘ಕುಸುಮ್ ಬಿ’ ಯೋಜನೆಯಡಿ ಅರ್ಜಿ ಸಲ್ಲಿಸಿರುವ ರೈತರ ಕೊಳವೆಬಾವಿಗಳಿಗೆ ಸೆಪ್ಟೆಂಬರ್ ಅಂತ್ಯದ ಒಳಗೆ ಸೌರ ಪಂಪ್ಸೆಟ್ಗಳನ್ನು ಅಳವಡಿಸುವಂತೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧ

ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ಸೌರ ಪಂಪ್ಸೆಟ್ ಅಳವಡಿಕೆ: ಕ್ರೆಡಲ್ ಸೂಚನೆ ಪಂಪ್ಸೆಟ್ ಬಳಸಿ ಕೃಷಿಬೆಂಗಳೂರು: ‘ಕುಸುಮ್ ಬಿ’ ಯೋಜನೆಯಡಿ ಅರ್ಜಿ ಸಲ್ಲಿಸಿರುವ ರೈತರ ಕೊಳವೆಬಾವಿಗಳಿಗೆ ಸೆಪ್ಟೆಂಬರ್ ಅಂತ್ಯದ ಒಳಗೆ ಸೌರ ಪಂಪ್ಸೆಟ್ಗಳನ್ನು ಅಳವಡಿಸುವಂತೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಕ್ರೆಡಲ್) ಸೂಚನೆ ನೀಡಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿಮೂಡಿಗೆರೆ: ಕಾಫಿ ತೋಟದ ಮಾಲೀಕ ಹಾರಿಸಿದ ಗುಂಡೇಟಿನಿಂದ ಬಾಲಕನಿಗೆ ಗಾಯಗುಂಡು ತಾಗಿ ಗಾಯಗೊಂಡ ಬಾಲಕನಿಗೆ ಎಂಜಿಎಂ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತುಮೂಡಿಗೆರೆ: ಕೂಲಿ ಹಣದ ವಿಚಾರವಾಗಿ ಕಾಫಿ ತೋಟದ ಮಾಲೀಕ ಹಾಗೂ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದಾಗ, ತೋಟದ ಮಾಲೀಕ ಹಾರಿಸಿದ ಗುಂಡು 4 ವರ್ಷದ ಬಾಲಕನ ತಲೆಗೆ ತಾಗಿದ ಘಟನೆ ತಾಲ್ಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿಕಾವೇರಿ ನೀರು ಹಂಚಿಕೆ: ಆಗಸ್ಟ್ 3ಕ್ಕೆ ವಿಜಯ್-ಡಿಕೆಶಿ ನೇರ ಮಾತುಕತೆಕಾವೇರಿ ನೀರು ಹಂಚಿಕೆ ವಿವಾದಬೆಂಗಳೂರು: ಮಳೆ ಕೊರತೆಯ ಕಾರಣ ಜಲಾಶಯಗಳಲ್ಲಿ ನೀರಿನ ಸಂಗ್ರಹ ತಳ ತಲುಪುತ್ತಿದ್ದು, ಕಾವೇರಿ ನದಿ ನೀರು ಹಂಚಿಕೆ ವಿವಾದದ ಸ್ವರೂಪ ಪಡೆಯುತ್ತಿರುವ ಮಧ್ಯೆಯೇ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ನೇರ ಮಾತುಕತೆಗೆ ಮುಂದಾಗಿದ್ದಾರೆ. ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿಪ್ರಧಾನ್ ಬೆನ್ನಿಗೆ ನಿಂತ ಮೋದಿ ಸರ್ಕಾರ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ವರದಿನವದೆಹಲಿ: ಧರ್ಮೇಂದ್ರ ಪ್ರಧಾನ್ ಅವರ ಬೆಂಬಲಕ್ಕೆ ಇಡೀ ಸರ್ಕಾರವೇ ನಿಂತಿದ್ದು, ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಎನ್ಡಿಎ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಎನ್ಡಿಟಿವಿ ವರದಿ ಮಾಡಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿಸಿಜೆಪಿ ಪ್ರತಿಭಟನೆ: ರಾತ್ರಿ 8ರ ನಂತರ ಮದ್ಯ ಮಾರಾಟ ನಿಷೇಧನವದೆಹಲಿ: ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆ ದೆಹಲಿಯಲ್ಲಿ ಮದ್ಯದಂಗಡಿಗಳನ್ನು ರಾತ್ರಿ 8 ಗಂಟೆಯೊಳಗೆ ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ ಎಂದು ಶುಕ್ರವಾರ ಮೂಲಗಳು ತಿಳಿಸಿವೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿನನ್ನ ಉಪವಾಸ ನಿಜವೋ ಸುಳ್ಳೋ ಎಂಬುದಕ್ಕೆ ಪ್ರಮಾಣಪತ್ರ ನೀಡಬೇಕೇ?: ವಾಂಗ್ಚೂಕ್ ಬೇಸರನವದೆಹಲಿ: ‘ಹಲವು ದಿನಗಳ ಕಠಿಣ ಉಪವಾಸದ ನಂತರವೂ ನಾನು ನನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಬೇಕಾದ ಸಂದರ್ಭ ಬಂದಿದೆ’ ಎಂದು ಶಿಕ್ಷಣ ತಜ್ಞ, ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಬೇಸರ ವ್ಯಕ್ತಪಡಿಸಿದ್ದಾರೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿಸಂಪಾದಕೀಯ | ಸಚಿವ ಪ್ರಧಾನ್ ರಾಜೀನಾಮೆ ನೀಡಲಿ: ಹೊಣೆಗಾರಿಕೆಗೆ ಸರ್ಕಾರ ಬದ್ಧವಾಗಲಿಧರ್ಮೇಂದ್ರ ಪ್ರಧಾನ್ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕೆನ್ನುವ ಒತ್ತಡ ಹೆಚ್ಚಾಗುತ್ತಿದ್ದು, ಆ ಆಗ್ರಹ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರ ಉಪವಾಸ ಸತ್ಯಾಗ್ರಹ ಹಾಗೂ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಬ್ಯಾನರ್ ಅಡಿಯಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸುತ್ತಿರುವ ಪ್ರತಿಭಟನೆಗಳ ಮೂಲಕ ರಾಜೀನಾಮೆಯ ಬೇಡಿಕೆಯು ಆರಂಭಗೊಂಡಿತು. ನಂತರದಲ್ಲಿ ಪರಿಸ್ಥಿತಿಯು ಕ್ಷಿಪ್ರ ಬದಲಾವಣೆಗಳನ್ನು ಕಂಡಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿವಿಶ್ಲೇಷಣೆ | ಚಳವಳಿ: ಮುಖವಾಡ ಮತ್ತು ಮುಖ ಇತಿಹಾಸದ ಮರುಕಳಿಕೆಯನ್ನು ಜನಚಳವಳಿಗಳ ಸಂದರ್ಭದಲ್ಲೂ ನೋಡಬಹುದು. ಬಹುತೇಕ ಚಳವಳಿಗಳು ಪ್ರಾಮಾಣಿಕ ಉದ್ದೇಶಗಳಿಂದಲೇ ಆರಂಭ ಗೊಂಡರೂ, ಮುಟ್ಟುವ ಗುರಿ ಬಹುತೇಕ ಸಂದರ್ಭದಲ್ಲಿ ಬೇರೆಯದೇ ಆಗಿರುತ್ತದೆ. ಏಕೆಂದರೆ, ಗಾಂಧೀಜಿ ಅಥವಾ ಜೇಪಿ ಅವರಂಥ ನಾಯಕರು ಎಲ್ಲ ಚಳವಳಿಗಳಿಗೂ ದೊರೆಯುವುದಿಲ್ಲ!ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿಸಂಗತ | ಸೌಜನ್ಯಾ ಪ್ರಕರಣ: ‘ಸುಪ್ರೀಂ’ ಸಂದೇಶ! ಸಂಗತಭೀಕರ ಕೊಲೆ, ಅತ್ಯಾಚಾರ ಅಥವಾ ಮಹಿಳೆಯರ ಮೇಲಿನ ಅಮಾನವೀಯ ದೌರ್ಜನ್ಯ ನಡೆದಾಗ ‘ಅಪರಾಧಿಗೆ ಗಲ್ಲು ವಿಧಿಸಿ’, ‘ಎನ್ಕೌಂಟರ್ ಮಾಡಿ’ ಎಂಬ ಭಾವೋದ್ರೇಕದ ಮಾತುಗಳು ಸಾಮಾನ್ಯ. ಆದರೆ, ಸಾಕಷ್ಟು ವಿಳಂಬಗತಿಯಲ್ಲಿ ತನಿಖೆ ಮುಗಿದು ಆರೋಪಿಗಳಿಗೆ ಶಿಕ್ಷೆಯೋ ಬಿಡುಗಡೆಯೋ ಆಗುವಷ್ಟರಲ್ಲಿ ಸಾರ್ವಜನಿಕರ ನೆನಪು ಸಾಕಷ್ಟು ಮಾಸಿರುತ್ತದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿಕಾಮನ್ವೆಲ್ತ್ನಲ್ಲಿ ಖಾತೆ ತೆರೆದ ಭಾರತ: ಪೋಲಿಯೊ ಪೀಡಿತ ಝಂಡು ಕುಮಾರ್ಗೆ ಕಂಚುಗ್ಲಾಸ್ಗೊ: ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಝಂಡು ಕುಮಾರ್ ಕಂಚಿನ ಪದಕಕ್ಕೆ ಕೊರಳೊಡ್ಡುವ ಮೂಲಕ ಶುಕ್ರವಾರ(ಜುಲೈ 24) ಆರಂಭವಾಗಿರುವ ಕಾಮನ್ವೆಲ್ತ್ ಕೂಟದಲ್ಲಿ ಭಾರತವು ಪದಕದ ಖಾತೆ ತೆರೆದಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿ