ದಿನ ಭವಿಷ್ಯ 12-10-2026
ರಾಹುಕಾಲ – 7:42 ರಿಂದ 9:11 ಗುಳಿಕಕಾಲ – 1:39 ರಿಂದ 3:08 ಯಮಗಂಡಕಾಲ : 10:40 ರಿಂದ 12:09 ವಾರ : ಸೋಮವಾರ, ತಿಥಿ : ದ್ವಿತೀಯ, ನಕ್ಷತ್ರ : ಸ್ವಾತಿ ಶ್ರೀ ಪರಾಭವ ನಾಮ ಸಂವತ್ಸರ ದಕ್ಷಿಣಾಯನ, ಶರದ್ ಋತು ಆಶ್ವಯುಜ ಮಾಸ, ಶುಕ್ಲ ಪಕ್ಷ ಮೇಷ: ಪಿತ್ರಾರ್ಜಿತ ಆಸ್ತಿ ಲಭ್ಯ, ಸ್ವಗೃಹವಾಸ, ವಿಪರೀತ ವ್ಯಸನ, ವ್ಯಾಪಾರದಲ್ಲಿ ಅಲ್ಪ ಲಾಭ, ಚಂಚಲ ಮನಸ್ಸು. ವೃಷಭ: ಯತ್ನ ಕಾರ್ಯಗ

ರಾಹುಕಾಲ – 7:42 ರಿಂದ 9:11 ಗುಳಿಕಕಾಲ – 1:39 ರಿಂದ 3:08 ಯಮಗಂಡಕಾಲ : 10:40 ರಿಂದ 12:09 ವಾರ : ಸೋಮವಾರ, ತಿಥಿ : ದ್ವಿತೀಯ, ನಕ್ಷತ್ರ : ಸ್ವಾತಿ ಶ್ರೀ ಪರಾಭವ ನಾಮ ಸಂವತ್ಸರ ದಕ್ಷಿಣಾಯನ, ಶರದ್ ಋತು ಆಶ್ವಯುಜ ಮಾಸ, ಶುಕ್ಲ ಪಕ್ಷ ಮೇಷ: ಪಿತ್ರಾರ್ಜಿತ ಆಸ್ತಿ ಲಭ್ಯ, ಸ್ವಗೃಹವಾಸ, ವಿಪರೀತ ವ್ಯಸನ, ವ್ಯಾಪಾರದಲ್ಲಿ ಅಲ್ಪ ಲಾಭ, ಚಂಚಲ ಮನಸ್ಸು. ವೃಷಭ: ಯತ್ನ ಕಾರ್ಯಗಳಲ್ಲಿ ವಿಳಂಬ, ಯಾರನ್ನು ಹೆಚ್ಚಾಗಿ ನಂಬಬೇಡಿ, ಶತ್ರು ಭಾದೆ, ಅಕಾಲ ಭೋಜನ, ಆಕಸ್ಮಿಕ ಧನ ಲಾಭ. ಮಿಥುನ: ಗೆಳೆಯರ ಸಹಕಾರ, ಕೃಷಿಕರಿಗೆ ಲಾಭ, ಹೊಸ ಯೋಜನೆಗಳ ಆರಂಭ, ಕೆಲಸ ಕಾರ್ಯಗಳಲ್ಲಿ ಜಯ. ಕಟಕ: ವಾದ ವಿವಾದಗಳಿಂದ ದೂರವಿರಿ, ಕುಟುಂಬ ಸೌಖ್ಯ, ದಂಡ ಕಟ್ಟುವಿರಿ, ದೈವಾನುಗ್ರಹಕ್ಕೆ ಮೊರೆ ಹೋಗುವಿರಿ. ಸಿಂಹ: ಉದ್ಯೋಗದಲ್ಲಿ ಉನ್ನತ ಸ್ಥಾನ, ಮಕ್ಕಳಿಂದ ಸಂತಸ, ಅಧಿಕ ಖರ್ಚು, ಋಣ ವಿಮೋಚನೆ, ಸಾಲ ಮರುಪಾವತಿ. ಕನ್ಯಾ: ಮೋಸದ ತಂತ್ರಕ್ಕೆ ಬೀಳುವಿರಿ, ಮನೋವ್ಯಥೆ, ಮಾತಿನಿಂದ ಅನರ್ಥ, ಅನ್ಯ ಜನರಲ್ಲಿ ಪ್ರೀತಿ. ತುಲಾ: ಪರರಿಗೆ ಸಹಾಯ, ಕಾರ್ಯ ಬದಲಾವಣೆ, ಅಲ್ಪ ಕಾರ್ಯ ಸಿದ್ಧಿ, ಹಿತ ಶತ್ರುಭಾದೆ, ಮನಕ್ಲೇಶ. ವೃಶ್ಚಿಕ: ಈ ದಿನ ಪರಸ್ಥಳವಾಸ, ಮಿತ್ರರ ಭೇಟಿ, ದಾಂಪತ್ಯದಲ್ಲಿ ಪ್ರೀತಿ, ಮನಶಾಂತಿ, ದುಂದು ವೆಚ್ಚ ಮಾಡಬೇಡಿ. ಧನಸ್ಸು: ಈ ದಿನ ಆಪ್ತರ ಸಲಹೆ, ಪರಸ್ತ್ರಿಯಿಂದ ತೊಂದರೆ ಎಚ್ಚರ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಪ್ರತಿಯೊಂದು ವಿಷಯದಲ್ಲಿ ಎಚ್ಚರ. ಮಕರ: ವಿದ್ಯಾರ್ಥಿಗಳಿಗೆ ಶುಭ, ದೈನಂದಿನ ಕೆಲಸಗಳಲ್ಲಿ ಹೆಚ್ಚಿನ ಬದಲಾವಣೆ, ಆಕಸ್ಮಿಕ ಖರ್ಚು, ಆಸ್ತಿಯ ವಿಷಯದಲ್ಲಿ ಮನಸ್ತಾಪ. ಕುಂಭ: ನಾನಾ ರೀತಿಯ ಸಮಸ್ಯೆ, ಸೇವಕರಿಂದ ಸಹಾಯ, ಶರೀರದಲ್ಲಿ ಆಯಾಸ , ದೃಷ್ಟಿ ದೋಷದಿಂದ ತೊಂದರೆ. ಮೀನ: ಈ ದಿನ ವಾಹನ ಯೋಗ, ಆರೋಗ್ಯದಲ್ಲಿ ಚೇತರಿಕೆ, ಪುಣ್ಯಕ್ಷೇತ್ರ ದರ್ಶನ, ವಿದೇಶ ಪ್ರಯಾಣ, ತಾಳ್ಮೆ ಅಗತ್ಯ.