ರಾಜ್ಯದ ಹವಾಮಾನ ವರದಿ 16-07-2026
ರಾಜ್ಯದಲ್ಲಿ ಮಳೆಯ ಪ್ರಮಾಣ ಕುಸಿದಿದ್ದು, ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ಇಂದು ಸಹ ರಾಜ್ಯದಲ್ಲಿ ಬಹುತೇಕ ಭಾಗಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಲ್ಲಿ ವಾಡಿಕೆ ಉಷ್ಣಾಂಶಕ್ಕಿಂತ 4 ಡಿಗ್ರಿ ಸೆಲ್ಸಿಯೆಸ್ ಉಷ್ಣ

ರಾಜ್ಯದಲ್ಲಿ ಮಳೆಯ ಪ್ರಮಾಣ ಕುಸಿದಿದ್ದು, ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ಇಂದು ಸಹ ರಾಜ್ಯದಲ್ಲಿ ಬಹುತೇಕ ಭಾಗಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಲ್ಲಿ ವಾಡಿಕೆ ಉಷ್ಣಾಂಶಕ್ಕಿಂತ 4 ಡಿಗ್ರಿ ಸೆಲ್ಸಿಯೆಸ್ ಉಷ್ಣಾಂಶ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ನಗರಗಳ ಹವಾಮಾನ ವರದಿ: ಬೆಂಗಳೂರು: 29-22 ಮಂಗಳೂರು: 30-24 ಶಿವಮೊಗ್ಗ: 29-23 ಬೆಳಗಾವಿ: 27-22 ಮೈಸೂರು: 30-22 ಮಂಡ್ಯ: 31-22 ಮಡಿಕೇರಿ: 25-20 ರಾಮನಗರ: 31-22 ಹಾಸನ: 27-21 ಚಾಮರಾಜನಗರ: 31-22 ಚಿಕ್ಕಬಳ್ಳಾಪುರ: 29-21 ಕೋಲಾರ: 31-22 ತುಮಕೂರು: 30-22 ಉಡುಪಿ: 31-24 ಕಾರವಾರ: 29-26 ಚಿಕ್ಕಮಗಳೂರು: 24-19 ದಾವಣಗೆರೆ: 31-23 ಹುಬ್ಬಳ್ಳಿ: 29-22 ಚಿತ್ರದುರ್ಗ: 30-22 ಹಾವೇರಿ: 29-23 ಬಳ್ಳಾರಿ: 33-24 ಗದಗ: 29-22 ಕೊಪ್ಪಳ: 32-24 ರಾಯಚೂರು: 34-26 ಯಾದಗಿರಿ: 33-26 ವಿಜಯಪುರ: 30-21 ಕಲಬುರಗಿ: 33-24 ಬಾಗಲಕೋಟೆ: 32-24