ಕಾಂಗ್ರೆಸ್ ರ್ಯಾಲಿಗೆ ಬಿಜೆಪಿ ಕೌಂಟರ್ – 1984ರ ಸಿಖ್ ಗಲಭೆ ಸಂತ್ರಸ್ತರು ಸೇರಿ 5,000 ಜನ ಬೀದಿಗಿಳಿದು ಪ್ರತಿಭಟನೆ
ನವದೆಹಲಿ: ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬಣದ ರ್ಯಾಲಿಯ ವಿರುದ್ಧ ಬಿಜೆಪಿ (BJP) ದೆಹಲಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಕಾಂಗ್ರೆಸ್ನ ʻದೆಹಲಿ ಚಲೋʼ ಪ್ರತಿಭಟನಾ ಮೆರವಣಿಗೆಗೆ ಕೌಂಟರ್ ಕೊಡಲು ಸುಮಾರು 5,000 ಜನರನ್ನು ಒಳಗೊಂಡ ಮೆರವಣಿಗೆ ನಡೆಸಲು ಬಿಜೆಪಿ ಮುಂದಾಗಿದೆ. ಜೊತೆಗೆ ಈ ಬೃಹತ್ ಮೆರ

ನವದೆಹಲಿ: ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬಣದ ರ್ಯಾಲಿಯ ವಿರುದ್ಧ ಬಿಜೆಪಿ (BJP) ದೆಹಲಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಕಾಂಗ್ರೆಸ್ನ ʻದೆಹಲಿ ಚಲೋʼ ಪ್ರತಿಭಟನಾ ಮೆರವಣಿಗೆಗೆ ಕೌಂಟರ್ ಕೊಡಲು ಸುಮಾರು 5,000 ಜನರನ್ನು ಒಳಗೊಂಡ ಮೆರವಣಿಗೆ ನಡೆಸಲು ಬಿಜೆಪಿ ಮುಂದಾಗಿದೆ. ಜೊತೆಗೆ ಈ ಬೃಹತ್ ಮೆರವಣಿಗೆಯಲ್ಲಿ ʻ1984 ರ ಸಿಖ್ ವಿರೋಧಿ ಗಲಭೆʼಯ ಸಂತ್ರಸ್ತ ಕುಟುಂಬದ ಸದಸ್ಯರು ಸಹ ಭಾಗವಹಿಸುವ ನಿರೀಕ್ಷೆಯಿದ್ದು, ಬಿಜೆಪಿಯ ಈ ಪ್ರತಿದಾಳಿಯ ಪ್ರಮುಖ ಆಕರ್ಷಣೆಯಾಗಿದೆ. ಈ ಮೆರವಣಿಗೆಯನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನೇತೃತ್ವ ವಹಿಸಲಿದ್ದು, ಭಾನುವಾರ (ನವೆಂಬರ್ 1) ಬೆಳಿಗ್ಗೆ 11 ಗಂಟೆಗೆ ದೆಹಲಿಯ ಹರಿ ನಗರದಲ್ಲಿ ಮೆರವಣಿಗೆ ನಡೆಯಲಿದೆ. ಪಕ್ಷದ ಹಿರಿಯ ಸಿಖ್ ನಾಯಕರು ಸೇರಿದಂತೆ ಹಲವಾರು ಪ್ರಮುಖ ಬಿಜೆಪಿ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ಕಬ್ಬು ಬೆಳೆಗಾರರ ಹೋರಾಟಕ್ಕೆ ಜಿಲ್ಲಾಡಳಿತ ಬ್ರೇಕ್ – ರಾಷ್ಟ್ರೀಯ ಹೆದ್ದಾರಿ, ಟೋಲ್ ಪ್ಲಾಜಾಗಳ ಬಂದ್ಗೆ ನಿಷೇಧಾಜ್ಞೆ ಜಾರಿ ಕಾಂಗ್ರೆಸ್ ತನ್ನ ರ್ಯಾಲಿ ಮೂಲಕ ದೇಶದ ಗಮನ ಸೆಳೆಯಲು ಮುಂದಾಗಿರುವಾಗ 1984ರ ಸಿಖ್ ವಿರೋಧಿ ಗಲಭೆಯ ಹಿಂಸಾಚಾರವನ್ನು ನೆನಪಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರ್ಯಾಲಿ ನ.1ರಂದು ಕಾಂಗ್ರೆಸ್ ಕೈಗೊಂಡಿರುವ ರ್ಯಾಲಿಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಈ ಪ್ರತಿಭಟನಾ ಮೆರವಣಿಗೆಯನ್ನು ಕೈಗೊಳ್ಳಲಾಗಿದೆ. ರಾಹುಲ್ ಗಾಂಧಿ ಕರೆ ನೀಡಿರುವ ಬೆನ್ನಲ್ಲೇ, ಈ ರ್ಯಾಲಿಯಲ್ಲಿ ಹಲವು ರಾಜ್ಯ ಮುಖ್ಯಮಂತ್ರಿಗಳು ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಸಹ ಭಾಗವಹಿಸುವ ನಿರೀಕ್ಷೆಯಿದೆ.ಇದನ್ನೂ ಓದಿ: ಅಕ್ಷರ ಕಲಿಯದ ಕೈಗಳಲ್ಲಿ ಅರಳಿದ ಕಲೆ; ಕೌದಿ ಕಸೂತಿ ಕಲಾವಿದೆ ರುಕ್ಮಿಣಿಬಾಯಿಗೆ ರಾಜ್ಯೋತ್ಸವ ಪ್ರಶಸ್ತಿ