2026ರ ಜುಲೈ 09: ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ, ಕ್ರೀಡೆ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..ರಾಜ್ಯದಿಂದ ಕಾಮಗಾರಿಗಳ ಬಳಕೆ ಪ್ರಮಾಣಪತ್ರ ಸಲ್ಲಿಕೆ ವಿಳಂಬ: ₹640 ಕೋಟಿಗೆ ತಡೆಸಾಗರಮಾಲಾ, ಕುಡಿಯುವ ನೀರು ಸೇರಿದಂತೆ ವಿವಿಧ ಯೋಜನೆಗಳ ಕಾಮಗಾರಿಗಳ ಬಳಕೆ ಪ್ರಮಾಣಪತ್ರವನ್ನು ಕರ್ನಾಟಕ ಸರ್ಕಾರ ಸಲ್ಲಿಸದ ಕಾರಣಕ್ಕೆ ಕೇಂದ್ರ ಸರ್ಕಾರವು ₹640 ಕೋಟಿ ಬಿಡುಗಡೆಗೆ ತಡೆ ಒಡ್

ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ, ಕ್ರೀಡೆ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..ರಾಜ್ಯದಿಂದ ಕಾಮಗಾರಿಗಳ ಬಳಕೆ ಪ್ರಮಾಣಪತ್ರ ಸಲ್ಲಿಕೆ ವಿಳಂಬ: ₹640 ಕೋಟಿಗೆ ತಡೆಸಾಗರಮಾಲಾ, ಕುಡಿಯುವ ನೀರು ಸೇರಿದಂತೆ ವಿವಿಧ ಯೋಜನೆಗಳ ಕಾಮಗಾರಿಗಳ ಬಳಕೆ ಪ್ರಮಾಣಪತ್ರವನ್ನು ಕರ್ನಾಟಕ ಸರ್ಕಾರ ಸಲ್ಲಿಸದ ಕಾರಣಕ್ಕೆ ಕೇಂದ್ರ ಸರ್ಕಾರವು ₹640 ಕೋಟಿ ಬಿಡುಗಡೆಗೆ ತಡೆ ಒಡ್ಡಿದೆ.ರಾಜ್ಯದಿಂದ ಕಾಮಗಾರಿಗಳ ಬಳಕೆ ಪ್ರಮಾಣಪತ್ರ ಸಲ್ಲಿಕೆ ವಿಳಂಬ: ₹640 ಕೋಟಿಗೆ ತಡೆಭಾರತ–ಪಾಕಿಸ್ತಾನ ಸಂಘರ್ಷದಲ್ಲಿ 11 ಯುದ್ಧ ವಿಮಾನ ನಾಶ: ಡೊನಾಲ್ಡ್ ಟ್ರಂಪ್ಭಾರತ ಮತ್ತು ಪಾಕಿಸ್ತಾನ ನಡುವೆ ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಸಂಘರ್ಷದಲ್ಲಿ 11 ಯುದ್ಧ ವಿಮಾನಗಳು ನಾಶವಾಗಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಈ ಯುದ್ಧ ವಿಮಾನಗಳು ಯಾವ ದೇಶಕ್ಕೆ ಸೇರಿದವು? ಎರಡೂ ಕಡೆ ಆದ ನಷ್ಟ ಎಷ್ಟು ಎಂಬುವುದರ ಬಗ್ಗೆ ಅವರು ಸ್ಪಷ್ಟಪಡಿಸಿಲ್ಲ.ಭಾರತ–ಪಾಕಿಸ್ತಾನ ಸಂಘರ್ಷದಲ್ಲಿ 11 ಯುದ್ಧ ವಿಮಾನ ನಾಶ: ಡೊನಾಲ್ಡ್ ಟ್ರಂಪ್ರಾಮಮಂದಿರ ದೇಣಿಗೆ ಕಳವು: ಸಂಬಂಧಿಕರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ ಆರೋಪಿಗಳುಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣದ ದುರುಪಯೋಗ ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳು, ಕದ್ದ ಹಣವನ್ನು ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿರುವ ಸಂಗತಿ ತನಿಖೆಯಲ್ಲಿ ಬಯಲಾಗಿದೆ. ರಾಮಮಂದಿರ ದೇಣಿಗೆ ಕಳವು: ಸಂಬಂಧಿಕರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ ಆರೋಪಿಗಳುಕಳ್ಳಾಡಿ ಸುರಂಗ ರಸ್ತೆ ನಿರ್ಮಾಣಕ್ಕೆ ನಿಯಮ ಪಾಲಿಸಿಯೇ ಅನುಮೋದನೆ: ಪಿಣರಾಯಿ ವಿಜಯನ್ಎಲ್ಡಿಎಫ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಳ್ಳಾಡಿಯಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿರುವ ಕುರಿತಂತೆ ಮಾಡಲಾಗಿರುವ ಆರೋಪಗಳನ್ನು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕ ಪಿಣರಾಯಿ ವಿಜಯನ್ ಗುರುವಾರ ತಳ್ಳಿ ಹಾಕಿದರು.ಕಳ್ಳಾಡಿ ಸುರಂಗ ರಸ್ತೆ ನಿರ್ಮಾಣಕ್ಕೆ ನಿಯಮ ಪಾಲಿಸಿಯೇ ಅನುಮೋದನೆ: ಪಿಣರಾಯಿ ವಿಜಯನ್ರಾಜ್ಯದ ದೇವಾಲಯಗಳಲ್ಲಿನ ಹುಂಡಿಗಳ ಮೇಲೆ ನಿಗಾ: ಡಿ.ಕೆ.ಶಿವಕುಮಾರ್ಡಿ.ಕೆ.ಶಿವಕುಮಾರ್‘ಅಯೋಧ್ಯೆಯ ರಾಮ ಮಂದಿರದಲ್ಲಿ ಕಾಣಿಕೆ ಹಣ ಕಳ್ಳತನವಾಗಿರುವ ಘಟನೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ರಾಜ್ಯದಲ್ಲಿ ಇಂಥ ಘಟನೆ ತಡೆಗಟ್ಟಲು ನಾವು ಅಗತ್ಯ ಕ್ರಮ ವಹಿಸಿದ್ದೇವೆ. ಹುಂಡಿ ಮತ್ತು ಅದರಲ್ಲಿ ಭಕ್ತರು ಹಾಕಿದ ಕಾಣಿಕೆ ಎಣಿಕೆ ಮೇಲೆ ನಿಗಾ ಇರಿಸುತ್ತೇವೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ರಾಜ್ಯದ ದೇವಾಲಯಗಳಲ್ಲಿನ ಹುಂಡಿಗಳ ಮೇಲೆ ನಿಗಾ: ಡಿ.ಕೆ.ಶಿವಕುಮಾರ್ಮಮತಾಗೆ ಮತ್ತೆ ಶಾಕ್: ಸುಷ್ಮಿತಾ ಸೇರಿ TMCಯ ಮೂವರು ಮಾಜಿ ಸಂಸದರು ಬಿಜೆಪಿ ಸೇರ್ಪಡೆತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಮಾಜಿ ರಾಜ್ಯಸಭಾ ಸಂಸದರಾದ ಸುಷ್ಮಿತಾ ದೇವ್, ಸುಖೇಂದು ಶೇಖರ್ ರೇ ಮತ್ತು ಪ್ರಕಾಶ್ ಚಿಕ್ ಬಾರಿಕ್ ಅವರು ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.ಪಕ್ಷದ ಸಾಲ್ಟ್ ಲೇಕ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ಟಿಎಂಸಿ ನಾಯಕರಿಗೆ ಪಕ್ಷದ ಧ್ವಜ ನೀಡುವ ಮೂಲಕ ಬರಮಾಡಿಕೊಂಡಿದ್ದಾರೆ.ಮಮತಾಗೆ ಮತ್ತೆ ಶಾಕ್: ಸುಷ್ಮಿತಾ ಸೇರಿ TMCಯ ಮೂವರು ಮಾಜಿ ಸಂಸದರು ಬಿಜೆಪಿ ಸೇರ್ಪಡೆ‘ಕರಾವಳಿ’ ವಿವಾದ: ಪ್ರಜ್ವಲ್ ದೇವರಾಜ್ ವಿಚಾರದಲ್ಲಿ ತಪ್ಪಾಗಿದೆ ಎಂದ ಪನ್ನಗಾಭರಣಪ್ರಜ್ವಲ್ ದೇವರಾಜ್ ನಾಯಕನಟನಾಗಿ, ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಕರಾವಳಿ’ ಸಿನಿಮಾ ವಿವಾದದ ಕುರಿತು ನಿರ್ದೇಶಕ, ನಟ ಪನ್ನಗಾಭರಣ ಮಾತನಾಡಿದ್ದಾರೆ.ಇನ್ಸ್ಟಾಗ್ರಾಂನಲ್ಲಿ ಹರಿದಾಡುತ್ತಿರುವ ವಿಡಿಯೊಗಳಿಂದ ‘ಕರಾವಳಿ’ ಕುರಿತ ವಿದ್ಯಮಾನಗಳ ಬಗ್ಗೆ ಗೊತ್ತಾಯಿತು ಎನ್ನುತ್ತಾ ಮಾತು ಆರಂಭಿಸಿರುವ ಪನ್ನಗಾಭರಣ, ‘ಪ್ರಜ್ವಲ್ ಅವರನ್ನು ಡಬ್ಬಿಂಗ್ಗೆ ಕರೆದಿಲ್ಲ. ಅವರಿಂದ ಡಬ್ಬಿಂಗ್ ಸಾಧ್ಯವಾಗದಿದ್ದಾಗ ಬೇರೆ ಪ್ರಯತ್ನ ಮಾಡಬಹುದಿತ್ತು. ಅವರನ್ನು ಕರೆಯಲೇ ಇಲ್ಲ. ಹಾಗಿರುವಾಗ ಅವರಿಂದ ಆಗುತ್ತಿರಲಿಲ್ಲ ಎನ್ನುವುದು ತಪ್ಪು. ಪ್ರತಿಯೊಬ್ಬ ಕಲಾವಿದನಿಗೂ ಗೌರವ ಸಿಗಬೇಕು’ ಎಂದು ಒತ್ತಿ ಹೇಳಿದ್ದಾರೆ.‘ಕರಾವಳಿ’ ವಿವಾದ: ಪ್ರಜ್ವಲ್ ದೇವರಾಜ್ ವಿಚಾರದಲ್ಲಿ ತಪ್ಪಾಗಿದೆ ಎಂದ ಪನ್ನಗಾಭರಣಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಸಮೀಪ ಅಮೆರಿಕ ದಾಳಿ: ಇರಾನ್ ಆರೋಪಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಬಳಿ ಅಮೆರಿಕ ಗುರುವಾರ ವೈಮಾನಿಕ ದಾಳಿ ನಡೆಸಿದೆ ಎಂದು ಇರಾನ್ ಆರೋಪಿಸಿದೆ.ಈ ಬಗ್ಗೆ ಬುಶೆಹರ್ ಪ್ರಾಂತ್ಯದ ಡೆಪ್ಯೂಟಿ ಗವರ್ನರ್ (deputy governor) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪರಮಾಣು ಸ್ಥಾವರದ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ, ಬುಶೆಹರ್ ಪ್ರಾಂತ್ಯದ ಹಲವಾರು ಸ್ಥಳಗಳು ಅಮೆರಿಕದ ದಾಳಿಗೆ ತುತ್ತಾಗಿವೆ ಎಂದು ಅವರು ತಿಳಿಸಿದ್ದಾರೆ.ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಸಮೀಪ ಅಮೆರಿಕ ದಾಳಿ: ಇರಾನ್ ಆರೋಪ ಪೋಕ್ಸೊ ಪ್ರಕರಣ: ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರನಿಗೆ ಜಾಮೀನು ಮಂಜೂರುಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಅವರ ಪುತ್ರ ಬಂಡಿ ಸಾಯಿ ಭಗೀರಥಗೆ ತೆಲಂಗಾಣ ಹೈಕೋರ್ಟ್ ಗುರುವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.ಭಗೀರಥ ಸಲ್ಲಿಸಿದ್ದ ಜಾಮೀನು ಅರ್ಜಿಯ ತೀರ್ಪನ್ನು ಹೈಕೋರ್ಟ್ ಜುಲೈ 6ರಂದು ಕಾಯ್ದಿರಿಸಿತ್ತು.ಪೋಕ್ಸೊ ಪ್ರಕರಣ: ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರನಿಗೆ ಜಾಮೀನು ಮಂಜೂರುವಿಜಯ್ ನಟನೆಯ 'ಜನ ನಾಯಗನ್’ ಚಿತ್ರಕ್ಕೆ 'A' ಪ್ರಮಾಣಪತ್ರತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನಟನೆಯ ಬಹುನಿರೀಕ್ಷಿತ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಕೊನೆಗೂ ಪ್ರಮಾಣಪತ್ರ ನೀಡಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.ಎಚ್.ವಿನೋತ್ ನಿರ್ದೇಶಿಸಿ, ಅನಿರುದ್ಧ್ ರವಿಚಂದರ್ ಸಂಗೀತ ನೀಡಿರುವ ಈ ಸಿನಿಮಾ, ಬರೋಬ್ಬರಿ ಏಳು ತಿಂಗಳ ಸುದೀರ್ಘ ಹೋರಾಟದ ಬಳಿಕ ಪ್ರಮಾಣಪತ್ರ ಪಡೆದುಕೊಂಡಿದೆ. ಜುಲೈ 24 ರಿಂದ ತಮಿಳುನಾಡಿನ ಸುಮಾರು 1,000 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳುವ ಸಾಧ್ಯತೆಯಿದೆ ಎಂದು ತಮಿಳುನಾಡು ಚಲನಚಿತ್ರ ವಿತರಕರ ಸಂಘದ ಮೂಲಗಳು ಹೇಳಿವೆ.ವಿಜಯ್ ನಟನೆಯ 'ಜನ ನಾಯಗನ್’ ಚಿತ್ರಕ್ಕೆ 'A' ಪ್ರಮಾಣಪತ್ರ: ಬಿಡುಗಡೆ ಯಾವಾಗ?