23 ಅಕ್ಟೋಬರ್ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
23 ಅಕ್ಟೋಬರ್ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ಸೌದಿಯಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆತರಲು ಕ್ರಮ ವಹಿಸಿ: ಅಪ್ಸರ್ ಮನವಿ ಚಿಕ್ಕಮಗಳೂರು: ‘ಸೌದಿ ಅರೇಬಿಯಾದಲ್ಲಿ ಉಂಟಾಗಿರುವ ಪರಿಸ್ಥಿತಿ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ನಾಲ್ಕು ಸಾವಿರ ಕನ್ನಡಿಗರು ಮೆಕ್ಕಾದಲ್ಲಿ ಸಿಲುಕಿದ್ದೇವೆ’ ಎಂದು ಯಾತ್ರಾ

23 ಅಕ್ಟೋಬರ್ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ಸೌದಿಯಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆತರಲು ಕ್ರಮ ವಹಿಸಿ: ಅಪ್ಸರ್ ಮನವಿ ಚಿಕ್ಕಮಗಳೂರು: ‘ಸೌದಿ ಅರೇಬಿಯಾದಲ್ಲಿ ಉಂಟಾಗಿರುವ ಪರಿಸ್ಥಿತಿ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ನಾಲ್ಕು ಸಾವಿರ ಕನ್ನಡಿಗರು ಮೆಕ್ಕಾದಲ್ಲಿ ಸಿಲುಕಿದ್ದೇವೆ’ ಎಂದು ಯಾತ್ರಾರ್ಥಿ ಚಿಕ್ಕಮಗಳೂರಿನ ಉದ್ಯಮಿ ಅಪ್ಸರ್ ಹಿಂದುಸ್ಥಾನಿ ವಿಡಿಯೊ ಸಂದೇಶ ಕಳುಹಿಸಿದ್ದಾರೆ.ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿಪೋಕ್ಸೊ ಸಂತ್ರಸ್ತರಿಗೆ ನ್ಯಾಯಿಕ ಪ್ರಕ್ರಿಯೆ ಮುಳ್ಳಾಗದಿರಲಿ: ಹೈಕೋರ್ಟ್ ಬೆಂಗಳೂರು: 'ಪೋಕ್ಸೊ ನ್ಯಾಯ ಪಡೆಯಲು ನಡೆಯುವ ಕಾನೂನು ಪ್ರಕ್ರಿಯೆಯೇ ಸಂತ್ರಸ್ತರ ಮನಸ್ಸಿನ ಮೇಲೆ ಮತ್ತೊಂದು ಗಾಯ ಅಥವಾ ಘಾಸಿಯುಂಟು ಮಾಡುವ ಮುಳ್ಳಾಗಬಾರದು' ಎಂದು ಹೈಕೋರ್ಟ್ ವಿಚಾರಣಾ ನ್ಯಾಯಾಲಯಗಳಿಗೆ ಕಿವಿಮಾತು ಹೇಳಿದೆ.ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿದಸರಾದಲ್ಲಿ ಸರ್ಕಾರದಿಂದಲೇ ಅಸ್ಪೃಶ್ಯತೆ ಆಚರಣೆ: ಗೋವಿಂದ ಕಾರಜೋಳ ಆರೋಪ ಬೆಂಗಳೂರು: ‘ಅಸ್ಪೃಶ್ಯತೆ ಆಚರಣೆ ಕಾಂಗ್ರೆಸ್ ಸರ್ಕಾರದಲ್ಲಿ ಜೀವಂತವಾಗಿದೆ. ಮೈಸೂರು ದಸರಾ ವೇಳೆ ಸಚಿವರಾದ ಶಿವರಾಜ್ ತಂಗಡಗಿ, ಪಿ.ಎಂ. ನರೇಂದ್ರಸ್ವಾಮಿ ಹಾಗೂ ಕೆ.ಎಸ್. ಬಸವಂತಪ್ಪ ಅವರಿಗೆ ಮಾಡಿದ ಅವಮಾನವೇ ಇದಕ್ಕೆ ಉದಾಹರಣೆ’ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿಪರಿಷತ್ ಚುನಾವಣೆ: ರಹಸ್ಯ ಕ್ಯಾಮೆರಾ ಇದ್ದ ಪೆನ್ನು ಬಳಸಿದ ಬಿಜೆಪಿ– ಸುಪ್ರಿಯಾ ಸುಳೆ ಮುಂಬೈ: ಪುಣೆಯಲ್ಲಿ ನಡೆದ ವಿಧಾನ ಪರಿಷತ್ತಿನ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ ಪೆನ್ನುಗಳನ್ನು ಬಳಸಿ ಮತದಾನವನ್ನು ಚಿತ್ರೀಕರಿಸಿದೆ ಎಂದು ಎನ್ಸಿಪಿ (ಎಸ್ಪಿ) ನಾಯಕಿ ಸುಪ್ರಿಯಾ ಸುಳೆ ಗಂಭೀರ ಆರೋಪ ಮಾಡಿದ್ದಾರೆ.ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ‘ಸ್ಟಿಂಗ್’ ಹಿಂದೆ ರಾಜಕೀಯ ಉದ್ದೇಶ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು: ‘ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಪ್ರತಿಷ್ಠೆಗೆ ಧಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರುವ ರಾಜಕೀಯ ಉದ್ದೇಶದಿಂದ ‘ಸ್ಟಿಂಗ್’ ಕಾರ್ಯಾಚರಣೆ ನಡೆಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿರಾಕೇಶ್ ಶೆಟ್ಟಿ ರಕ್ಷಣೆಗೆ ಸರ್ಕಾರದಿಂದಲೇ ಯತ್ನ: ಎಚ್.ಡಿ.ಕುಮಾರಸ್ವಾಮಿ ಬೆಂಗಳೂರು: ‘ಸ್ಟಿಂಗ್ ಕಾರ್ಯಾಚರಣೆ ಸಂಚುಕೋರ ರಾಕೇಶ್ ಶೆಟ್ಟಿಯನ್ನು ರಕ್ಷಿಸಲು ಸರ್ಕಾರದ ಉನ್ನತ ವ್ಯಕ್ತಿಗಳೇ ಪ್ರಯತ್ನಿಸುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿವ್ಯಕ್ತಿಯೊಬ್ಬರ ವಿರುದ್ಧ ರೌಡಿ ಶೀಟ್ ತೆರೆಯಲು ಪೂರ್ವಾಪರ ಅವಲೋಕನ ಅಗತ್ಯ:ಹೈಕೋರ್ಟ್ ಬೆಂಗಳೂರು: 'ಕ್ರಿಮಿನಲ್ ಪ್ರಕರಣಗಳ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸದೆ ವ್ಯಕ್ತಿಯೊಬ್ಬರ ವಿರುದ್ಧ ರೌಡಿ ಶೀಟ್ ತೆರೆಯಲು ಅಥವಾ ಮುಂದುವರಿಸಲು ನೋಟಿಸ್ ನೀಡುವಂತಿಲ್ಲ' ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಪೊಲೀಸ್ ಇಲಾಖೆಗೆ ನಿರ್ದೇಶಿಸಿದೆ.ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ₹ 10 ಸಾವಿರದ ಶಾಂತಿ ಬಾಂಡ್ ನೋಟಿಸ್ ಪ್ರಶ್ನಿಸಿದ್ದ ನೇಹಾ ಬೋರಾ ಅರ್ಜಿ ವಜಾ ನವದೆಹಲಿ: ಶಾಂತಿ ಕಾಪಾಡಲು ₹ 10 ಸಾವಿರದ ವೈಯಕ್ತಿಕ ಬಾಂಡ್ ಹಾಗೂ ಒಬ್ಬ ಜಾಮೀನುದಾರರನ್ನು ಒದಗಿಸುವಂತೆ ಸೂಚಿಸಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (ಎಐಎಸ್ಎ) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿಎಫ್ಎಸ್ಎಲ್ ವರದಿ ವಿಳಂಬ ಮಾರಕವಲ್ಲ: ಹೈಕೋರ್ಟ್ ಬೆಂಗಳೂರು: 'ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ವರದಿ ಪಡೆಯುವಲ್ಲಿ ಉಂಟಾಗಿರುವ ವಿಳಂಬವೊಂದೇ ಅಪರಾಧ ಸಾಬೀತುಪಡಿಸುವುದರ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಮತ್ತು ಮಾರಕವೂ ಆಗುವುದಿಲ್ಲ' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿಏಷ್ಯನ್ ಟಿಟಿ: ಸೆಮಿಗೆ ಹರ್ಮೀತ್–ಯಶಸ್ವಿನಿ ಜೋಡಿ; 72 ವರ್ಷಗಳ ಬಳಿಕ ಭಾರತಕ್ಕೆ ಪದಕ ತಾಷ್ಕೆಂಟ್ (ಉಜ್ಬೇಕಿಸ್ತಾನ): ಹರ್ಮೀತ್ ದೇಸಾಯಿ ಮತ್ತು ಯಶಸ್ವಿನಿ ಘೋರ್ಪಡೆ ಅವರು ಶುಕ್ರವಾರ ಇಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನ ಮಿಶ್ರ ಡಬಲ್ಸ್ ವಿಭಾಗದಲ್ಲಿ 72 ವರ್ಷಗಳ ನಂತರ ಭಾರತಕ್ಕೆ ಮೊದಲ ಪದಕವನ್ನು ಖಚಿತಪಡಿಸಿದರು. ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ