ರಾಜ್ಯದ ಹವಾಮಾನ ವರದಿ 27-07-2026
ರಾಜ್ಯದಲ್ಲಿ ಜುಲೈ ಅಂತ್ಯದವರೆಗೂ ಮುಂಗಾರು ಅಬ್ಬರಿಸಲಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ 14 ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಭಾಗದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಮನ್ಸೂಚನೆ ಇದೆ. ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್

ರಾಜ್ಯದಲ್ಲಿ ಜುಲೈ ಅಂತ್ಯದವರೆಗೂ ಮುಂಗಾರು ಅಬ್ಬರಿಸಲಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ 14 ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಭಾಗದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಮನ್ಸೂಚನೆ ಇದೆ. ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕಳೆದ ಒಂದು ವಾರದಿಂದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಮುಂದುವರಿಯಲಿದೆ. ಈ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಮಳೆ ಅಭಾವ ಇದೆ. ಈ ಭಾಗಗಳಲ್ಲಿ ಜುಲೈ ಅಂತ್ಯದವರೆಗೂ ಮಳೆ ಮುನ್ಸೂಚನೆ ಇಲ್ಲ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಬಳ್ಳಾರಿ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಹಗುರ ಮಳೆ ಬೀಳುವ ಸಾಧ್ಯತೆ ಇದೆ. ನಗರಗಳ ಹವಾಮಾನ ವರದಿ: ಬೆಂಗಳೂರು: 28-22 ಮಂಗಳೂರು: 28-25 ಶಿವಮೊಗ್ಗ: 27-23 ಬೆಳಗಾವಿ: 24-22 ಮೈಸೂರು: 28-23 ಮಂಡ್ಯ: 29-23 ಮಡಿಕೇರಿ: 24-21 ರಾಮನಗರ: 29-23 ಹಾಸನ: 25-21 ಚಾಮರಾಜನಗರ: 30-23 ಚಿಕ್ಕಬಳ್ಳಾಪುರ: 28-22 ಕೋಲಾರ: 29-22 ತುಮಕೂರು: 28-22 ಉಡುಪಿ: 28-25 ಕಾರವಾರ: 27-27 ಚಿಕ್ಕಮಗಳೂರು: 23-19 ದಾವಣಗೆರೆ: 29-23 ಹುಬ್ಬಳ್ಳಿ: 27-23 ಚಿತ್ರದುರ್ಗ: 28-23 ಹಾವೇರಿ: 27-23 ಬಳ್ಳಾರಿ: 32-25 ಗದಗ: 27-23 ಕೊಪ್ಪಳ: 29-24 ರಾಯಚೂರು: 31-26 ಯಾದಗಿರಿ: 31-25 ವಿಜಯಪುರ: 29-24 ಕಲಬುರಗಿ: 30-24 ಬಾಗಲಕೋಟೆ: 29-24