5th T20I | ಮಳೆ ಇಲ್ಲದಿದ್ರೂ ಭಾರತ vs ಇಂಗ್ಲೆಂಡ್ ನಡುವಿನ ಪಂದ್ಯ 45 ನಿಮಿಷ ವಿಳಂಬ – ಕಾರಣ ಏನು?
ಸೌತಾಂಪ್ಟನ್: ಇಲ್ಲಿನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ – ಇಂಗ್ಲೆಂಡ್ (Ind vs Eng) ಟಿ20 ಸರಣಿಯ 5ನೇ ಹಾಗೂ ಕೊನೆಯ ಪಂದ್ಯವು ನಿಗದಿತ ಸಮಯಕ್ಕಿಂತ 45 ನಿಮಿಷಗಳ ಕಾಲ ತಡವಾಗಿದೆ. ಈಗಾಗಲೇ ಸರಣಿ ಕಳೆದುಕೊಂಡಿರುವ ಭಾರತ ಇಂದು ಸಾಂಕೇತಿಕವಾಗಿ 5ನೇ ಪಂದ್ಯ ಪಂದ್ಯ ಆಡಲಿದೆ. ಪಂದ್ಯಕ್ಕೂ ಮುನ್ನ ಟಾಸ್ 45 ನಿಮಿಷಗಳ ಕಾಲ ವಿಳಂಬವಾಗಿದೆ, ಇದು ಸ್ಟೇಡಿಯಂನಲ್

ಸೌತಾಂಪ್ಟನ್: ಇಲ್ಲಿನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ – ಇಂಗ್ಲೆಂಡ್ (Ind vs Eng) ಟಿ20 ಸರಣಿಯ 5ನೇ ಹಾಗೂ ಕೊನೆಯ ಪಂದ್ಯವು ನಿಗದಿತ ಸಮಯಕ್ಕಿಂತ 45 ನಿಮಿಷಗಳ ಕಾಲ ತಡವಾಗಿದೆ. ಈಗಾಗಲೇ ಸರಣಿ ಕಳೆದುಕೊಂಡಿರುವ ಭಾರತ ಇಂದು ಸಾಂಕೇತಿಕವಾಗಿ 5ನೇ ಪಂದ್ಯ ಪಂದ್ಯ ಆಡಲಿದೆ. ಪಂದ್ಯಕ್ಕೂ ಮುನ್ನ ಟಾಸ್ 45 ನಿಮಿಷಗಳ ಕಾಲ ವಿಳಂಬವಾಗಿದೆ, ಇದು ಸ್ಟೇಡಿಯಂನಲ್ಲಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಹೀನಾಯ ಸೋತು 3 ಕೆಟ್ಟ ಸಾಧನೆ ಬರೆದ ಭಾರತ ಟಾಸ್ ವಿಳಂಬಕ್ಕೆ ಹವಾಮಾನ ವೈಪರೀತ್ಯ ಕಾರಣವಲ್ಲ, ಟೀಂ ಇಂಡಿಯಾ ಬರುತ್ತಿದ್ದ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ನಿಂದಾಗಿ ಮೆನ್ ಇನ್ ಬ್ಲೂ ತಂಡವು ಸಮಯಕ್ಕೆ ಸರಿಯಾಗಿ ರೋಸ್ ಬೌಲ್ ಮೈದಾನ ತಲುಪುವಲ್ಲಿ ವಿಫಲವಾಗಿದೆ. ತಡವಾಗಿ ಬಂದ ಕಾರಣ, 45 ನಿಮಿಷಗಳ ಕಾಲ ಪಂದ್ಯ ವಿಳಂಬವಾಗಿದೆ. ಐರ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಸೋತು ಮುಖಭಂಗ ಅನುಭವಿಸಿದ್ದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧವೂ ಹೀನಾಯ ಸೋಲು ಕಂಡಿದೆ. ಇದೀಗ ತಂಡದ ಎದುರು ವೈಟ್ವಾಶ್ ಭೂತ ಬಂದುನಿಂತಿದ್ದು, ಇದರಿಂದ ತಪ್ಪಿಸಿಕೊಳ್ಳುತ್ತಾ ಭಾರತ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: Viral Video: ಫಿಫಾ ವಿಶ್ವಕಪ್ನಲ್ಲಿ ಮೊರಾಕ್ಕೊ ಸೋತಿದ್ದಕ್ಕೆ ಕಣ್ಣೀರಿಟ್ಟ ನೋರಾ ಫತೇಹಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಪಂದ್ಯವು ಭಾರತದ ಬ್ಯಾಟಿಂಗ್ ಬಳಿಕ ಮಳೆಯಿಂದಾಗಿ ರದ್ದಾಗಿತ್ತು. ಆ ಬಳಿಕ ಸತತ ಮೂರು ಪಂದ್ಯಗಳಲ್ಲೂ ಭಾರತ ಹೀನಾಯ ಸೋಲನುಭವಿಸಿತು. ಇಂದು ನಡೆಯುತ್ತಿರುವ ಸರಣಿಯ ಕೊನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ 4-0 ಅಂತರದಲ್ಲಿ ಸರಣಿ ಗೆಲ್ಲುವ ಛಲದಲ್ಲಿದ್ದರೆ, ಭಾರತ ತಂಡ ವೈಟ್ವಾಶ್ನಿಂದ ಪಾರಾಗುವ ತವಕದಲ್ಲಿದೆ.