Asian Para Games | 10 ಮೀ ಏರ್ ರೈಫಲ್ ಅರ್ಹತಾ ಸುತ್ತಿನಲ್ಲಿ ಭಾರತಕ್ಕೆ ಚಿನ್ನ – ಮೋನಾ ಅಗರ್ವಾಲ್ ದಾಖಲೆ
-ಬೆಳ್ಳಿ ಬಾಚಿಕೊಂಡ ಅವನಿ ಲೇಖರಾ ನಗೋಯಾ: 2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಮೋನಾ ಅಗರ್ವಾಲ್ (Mona Agarwal) ಅವರು ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದು, ಈ ಮೂಲಕ ಭಾರತ ತನ್ನ ಖಾತೆಯನ್ನು ತೆರೆದಿದೆ. ಐಚಿ-ನಗೋಯಾದಲ್ಲಿ ನಡೆಯುತ್ತಿದ್ದ 5ನೇ ಏಷ್ಯನ್ ಪ್ಯಾರಾ ಗೇಮ್ಸ್ನ 10 ಮೀಟರ್ ಏರ್ ರೈಫಲ್ (10m Air Rifle final) ವಿಭಾಗದ ಅರ್ಹತಾ ಸುತ್ತಿನಲ್ಲಿ ಭಾ

-ಬೆಳ್ಳಿ ಬಾಚಿಕೊಂಡ ಅವನಿ ಲೇಖರಾ ನಗೋಯಾ: 2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಮೋನಾ ಅಗರ್ವಾಲ್ (Mona Agarwal) ಅವರು ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದು, ಈ ಮೂಲಕ ಭಾರತ ತನ್ನ ಖಾತೆಯನ್ನು ತೆರೆದಿದೆ. ಐಚಿ-ನಗೋಯಾದಲ್ಲಿ ನಡೆಯುತ್ತಿದ್ದ 5ನೇ ಏಷ್ಯನ್ ಪ್ಯಾರಾ ಗೇಮ್ಸ್ನ 10 ಮೀಟರ್ ಏರ್ ರೈಫಲ್ (10m Air Rifle final) ವಿಭಾಗದ ಅರ್ಹತಾ ಸುತ್ತಿನಲ್ಲಿ ಭಾರತದ ಮೋನಾ ಅಗರ್ವಾಲ್ ಮತ್ತು ಅವನಿ ಲೇಖರಾ (Avani Lekhara) ಅತ್ಯುತ್ತಮ ಪ್ರದರ್ಶನ ನೀಡಿ, ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಇಬ್ಬರೂ ಶೂಟರ್ಗಳು ಭಾರತಕ್ಕೆ ಚಿನ್ನ ಹಾಗೂ ಬೆಳ್ಳಿಯನ್ನು ತಂದುಕೊಟ್ಟಿದ್ದಾರೆ. ಅಂತಿಮ ಹಂತದಲ್ಲಿ ಮೋನಾ ಅವರು ಅಂಕಟ್ಟಿಯಲ್ಲಿ 629.1 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡರು. ಈ ಮೂಲಕ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಚೀನಾದ ಜಾಂಗ್ ಕ್ಯೂಪಿಂಗ್ ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಅವನಿ ಲೇಖರಾ ಅವರು 629.4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ತಮ್ಮದಾಗಿಸಿಕೊಂಡರು. GOLD & SILVER MEDAL FOR INDIA IN SHOOTING AT ASIAN PARA GAMES! Mona Agarwal wins the Gold Medal Avani Lekhara wins the Silver Medal Top 2 finish for India in the Women’s 10m Air Rifle Standing SH1 event!!!! WELL DONE GIRLS! https://t.co/Agw9zSV2si — The Khel India (@TheKhelIndia) October 19, 2026