Asian Para Games: ಭಾರತಕ್ಕೆ 10ನೇ ಚಿನ್ನ ತಂದುಕೊಟ್ಟ ಆಯುಷ್ ವರ್ಮಾ – ಆರ್ಚರಿಯಲ್ಲಿ ಶೀತಲ್ & ಪಾಯಲ್ಗೆ ಬೆಳ್ಳಿ
ನಗೋಯಾ: ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ (Asian Para Games), ಭಾರತವು ಬುಧವಾರದಂದು ತನ್ನ ಪದಕಗಳ ಬೇಟೆ ಮುಂದುವರಿಸಿದೆ. ಎರಡನೇ ದಿನದ ಅಂತ್ಯಕ್ಕೆ 35 ಪದಕಗಳೊಂದಿಗೆ (ಒಂಬತ್ತು ಚಿನ್ನ, 11 ಬೆಳ್ಳಿ, 15 ಕಂಚು) ಆರನೇ ಸ್ಥಾನದಲ್ಲಿದ್ದ ಭಾರತ, ಮೂರನೇ ದಿನದ ಆರಂಭದಲ್ಲೇ ತನ್ನ ಪದಕ ಪಟ್ಟಿಗೆ ಮತ್ತೊಂದು ಪದಕವನ್ನು ಸೇರಿಸಿಕೊಂಡಿತು.

ನಗೋಯಾ: ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ (Asian Para Games), ಭಾರತವು ಬುಧವಾರದಂದು ತನ್ನ ಪದಕಗಳ ಬೇಟೆ ಮುಂದುವರಿಸಿದೆ. ಎರಡನೇ ದಿನದ ಅಂತ್ಯಕ್ಕೆ 35 ಪದಕಗಳೊಂದಿಗೆ (ಒಂಬತ್ತು ಚಿನ್ನ, 11 ಬೆಳ್ಳಿ, 15 ಕಂಚು) ಆರನೇ ಸ್ಥಾನದಲ್ಲಿದ್ದ ಭಾರತ, ಮೂರನೇ ದಿನದ ಆರಂಭದಲ್ಲೇ ತನ್ನ ಪದಕ ಪಟ್ಟಿಗೆ ಮತ್ತೊಂದು ಪದಕವನ್ನು ಸೇರಿಸಿಕೊಂಡಿತು. ಕಾಂಪೌಂಡ್ ಮಹಿಳೆಯರ ಡಬಲ್ಸ್ ಫೈನಲ್ನಲ್ಲಿ, ಭಾರತದ ಶೀತಲ್ ದೇವಿ ಮತ್ತು ಪಾಯಲ್ ನಾಗ್ ಅವರು ಚೀನಾದ ಝಾವೋ ಜಿಂಗ್ ಮತ್ತು ಕ್ಸು ಕ್ಸುಕ್ವಿಂಗ್ ವಿರುದ್ಧ ಬೆಳ್ಳಿ ಪದಕವನ್ನು ಗೆದ್ದುಕೊಂಡರು. ನಂತರ, ಪುರುಷರ ಶಾಟ್ ಪುಟ್ F53 ವಿಭಾಗದಲ್ಲಿ ಆಯುಷ್ ವರ್ಮಾ (Ayush Verma) 8.16 ಮೀಟರ್ ದೂರಕ್ಕೆ ಗುಂಡು ಎಸೆದು ಅಗ್ರಸ್ಥಾನವನ್ನು ಅಲಂಕರಿಸುವ ಮೂಲಕ ಭಾರತಕ್ಕೆ ಈ ಕ್ರೀಡಾಕೂಟದ ಹತ್ತನೇ ಚಿನ್ನದ ಪದಕವನ್ನು ತಂದುಕೊಟ್ಟರು. ನಿನ್ನೆ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗೆದ್ದಿದ್ದ ಆಯುಷ್ಗೆ, ಇದು ಎರಡನೇ ಪದಕವಾಗಿದೆ. ಭಾರತೀಯ ಕ್ರೀಡಾಪಟುಗಳು ಪ್ಯಾರಾ-ಅಥ್ಲೆಟಿಕ್ಸ್, ಪ್ಯಾರಾ-ಈಜು, ಪ್ಯಾರಾ-ಪವರ್ಲಿಫ್ಟಿಂಗ್, ಪ್ಯಾರಾ-ಸೈಕ್ಲಿಂಗ್, ಪ್ಯಾರಾ-ಜೂಡೋ, ಪ್ಯಾರಾ-ಬ್ಯಾಡ್ಮಿಂಟನ್ ಮತ್ತು ಪ್ಯಾರಾ-ಟೇಬಲ್ ಟೆನ್ನಿಸ್ ವಿಭಾಗಗಳಲ್ಲಿ ಪದಕಗಳಿಗಾಗಿ ಸ್ಪರ್ಧಿಸುವುದನ್ನು ಮುಂದುವರಿಸಿದ್ದಾರೆ.