Bengaluru Horror | ಕೊಲೆ ಬಳಿಕ ಅತ್ತೆ, ನಾದಿನಿಯರ ಮೃತದೇಹದಿಂದ ಚಿನ್ನಾಭರಣ ದೋಚಿದ್ದ ಹಂತಕ!
– ಸಪ್ತ ನರಮೇಧ ಹಂತಕ ಇಂದುಶೇಖರ್ಗಿತ್ತು ಹಣದ ದಾಹ ಬೆಂಗಳೂರು: ಒಂದೇ ಕುಟುಂಬದ 7 ಜನರನ್ನ ಅತ್ಯಂತ ಭೀಕರವಾಗಿ ಪಾಪಿ ಅಳಿಯ ಹತ್ಯೆ (Bengaluru Murder) ಮಾಡಿ ಮುಗಿಸಿದ್ದಾನೆ. ಈ ಸರಣಿ ಕೊಲೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. 7 ಜನರಲ್ಲಿ ಮೂವರ ಶವ ಪತ್ತೆಯಾಗಿದೆ. ಇನ್ನೂ ನಾಲ್ವರ ಶವಗಳು ಸಿಗಬೇಕಿದೆ. ಈ ಮಧ್ಯೆ ಹಂತಕ ಇಂದುಶೇಖರ್ ಬಗ್ಗೆ ಒಂದೊಂದೇ ರಹಸ್ಯಗಳನ್ನ

– ಸಪ್ತ ನರಮೇಧ ಹಂತಕ ಇಂದುಶೇಖರ್ಗಿತ್ತು ಹಣದ ದಾಹ ಬೆಂಗಳೂರು: ಒಂದೇ ಕುಟುಂಬದ 7 ಜನರನ್ನ ಅತ್ಯಂತ ಭೀಕರವಾಗಿ ಪಾಪಿ ಅಳಿಯ ಹತ್ಯೆ (Bengaluru Murder) ಮಾಡಿ ಮುಗಿಸಿದ್ದಾನೆ. ಈ ಸರಣಿ ಕೊಲೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. 7 ಜನರಲ್ಲಿ ಮೂವರ ಶವ ಪತ್ತೆಯಾಗಿದೆ. ಇನ್ನೂ ನಾಲ್ವರ ಶವಗಳು ಸಿಗಬೇಕಿದೆ. ಈ ಮಧ್ಯೆ ಹಂತಕ ಇಂದುಶೇಖರ್ ಬಗ್ಗೆ ಒಂದೊಂದೇ ರಹಸ್ಯಗಳನ್ನ ಪೊಲೀಸರು ಬಯಲಿಗೆಳೆಯುತ್ತಿದ್ದಾರೆ. ಹೌದು. ಹಂತಕ ಇಂದು ಶೇಖರ್ಗೆ ಹಣದ ದಾಹ ಇತ್ತು ಅನ್ನೋದನ್ನ ಪೊಲೀಸರು ಬಯಲಿಗೆಳೆದಿದ್ದಾರೆ. ಕೊಲೆ ಮಾಡಿದ ಬಳಿಕ ಅತ್ತೆ, ನಾದಿನಿಯರ ಬಳಿಯಿದ್ದ ಚಿನ್ನಾಭರರಣವನ್ನ ಹಂತಕ ದೋಚಿದ್ದಾನೆ. ರಕ್ತದ ಮೆತ್ತಿಕೊಂಡಿದ್ದ ಚಿನ್ನದ ಸರ, ಕಿವಿಯೋಲೆ, ಉಂಗುರ ಸೇರಿದಂತೆ ಕೆಲ ಚಿನ್ನಾಭರಣಗಳನ್ನ ಕಿತ್ತುಕೊಂಡಿದ್ದಾನೆ. ಆ ಒಡವೆಗಳನ್ನ ಪೂರ್ತಿ ತೊಳೆದು ಕೆಲ ಚಿನ್ನಾಭರಣವನ್ನ ಮಾರಾಟ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಚಿನ್ನಾಭರಣ ಮಾರಾಟ ಮಾಡಿದ ಹಣವನ್ನ ಖರ್ಚು ಮಾಡಿದ್ದಾನೆ. ಉಳಿದ ಒಡವೆಗಳನ್ನ ಜೇಬಿನಲ್ಲೇ ಇಟ್ಟುಕೊಂಡಿದ್ದ. ಆ ಒಡವೆಗಳನ್ನ ಗಿರವಿ ಇಟ್ಟು ಅದೇ ಹಣದಲ್ಲಿ ಡೀಸೆಲ್ ಹಾಕಿಸಿಕೊಂಡು ಟ್ರಾವೆಲ್ ಮಾಡಿದ್ದಾನೆ. ಬೆಂಗಳೂರು To ಮಂಗಳೂರು ಟ್ರಾವೆಲ್, ಬೆಂಗಳೂರು To ಚೆನ್ನೈ ಟ್ರಾವೆಲ್ ಹಾಗೂ ಬೆಂಗಳೂರು To ನಂದಿ ಹಿಲ್ಸ್ ಅಂತಾ ಟ್ರಾವೆಲ್ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಮಗಳಿಗೆ ಒಡವೆಯನ್ನ ಕೊಟ್ಟಿದ್ದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಅಪ್ರಾಪ್ತ ಮಗಳು ತಂದೆ ಹೇಳಿದ್ದ ಕೆಲಸ ಮಾಡ್ತಿದ್ದೆ ಅಂತಾ ಹೇಳಿದ್ದಾಳೆ. ಇನ್ನು ಸಿಗಬೇಕಿದೆ ನಾಲ್ವರ ಶವ ಆರೋಪಿ ಇಂದೂಶೇಖರ್ ಪತ್ನಿ ಸೇರಿದಂತೆ, 7 ಮಂದಿಯನ್ನು ಕೊಂದಿದ್ದು, ಇದರಲ್ಲಿ ಮೂವರ ಶವಗಳು ಪತ್ತೆಯಾಗಿದೆ. ನಂದಿ ಬೆಟ್ಟದಲ್ಲಿ 7 ವರ್ಷದ ಬಾಲಕ ಹಾಗೂ ಶಂಕರ್ ಪುತ್ರ ಪುನೀತ್ ಶವ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರ ಮಾಡಲಾಗಿದೆ. ತಮಿಳುನಾಡಿನ ಎರ್ಕಾಡ್ ಅರಣ್ಯ ಪ್ರದೇಶದಲ್ಲಿ ಮತ್ತಿಬ್ಬರ ಶವ ಸಿಕ್ಕಿದೆ. ಶೀಘ್ರದಲ್ಲೇ ಕುಟುಂಬಸ್ಥರು ಎರ್ಕಾಡ್ಗೆ ತೆರಳುತ್ತಿದ್ದು, ಮೃತದೇಹಗಳನ್ನು ಗುರುತಿಸಬೇಕಿದೆ.