BlockBuster Entertainment Of The Week – ಸೌಂದರ್ಯ, ತಾಂಡವ್ಗೆ ಈ ವಾರದ ಕಿಚ್ಚನ ಚಪ್ಪಾಳೆ
ಅಹಂ ಬದಿಗಿಟ್ಟು ಒಟ್ಟೊಟ್ಟಾಗಿ ಆಡಿ ತಂಡದ ಗೆಲುವಿಗೆ ಕಾರಣರಾದ ತಾಂಡವ್ (Tandav Ram) ಹಾಗೂ ಸೌಂದರ್ಯಗೆ (Soundarya Shetty) ಕಿಚ್ಚ ಸುದೀಪ್ ಈ ವಾರದ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ವಾಹಿನಿ ಪ್ರೋಮೋವೊಂದನ್ನು ರಿಲೀಸ್ ಮಾಡಿದೆ. ಅದರಲ್ಲಿ ಈ ವಾರ ಅದ್ಭುತವಾಗಿ ಆಡಿದ ತಾಂಡವ್ ಹಾಗೂ ಸೌಂದರ್ಯಗೆ ಕಿಚ್ಚ ಸುದೀಪ್ ಈ ವಾರದ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ಇದನ್ನೂ

ಅಹಂ ಬದಿಗಿಟ್ಟು ಒಟ್ಟೊಟ್ಟಾಗಿ ಆಡಿ ತಂಡದ ಗೆಲುವಿಗೆ ಕಾರಣರಾದ ತಾಂಡವ್ (Tandav Ram) ಹಾಗೂ ಸೌಂದರ್ಯಗೆ (Soundarya Shetty) ಕಿಚ್ಚ ಸುದೀಪ್ ಈ ವಾರದ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ವಾಹಿನಿ ಪ್ರೋಮೋವೊಂದನ್ನು ರಿಲೀಸ್ ಮಾಡಿದೆ. ಅದರಲ್ಲಿ ಈ ವಾರ ಅದ್ಭುತವಾಗಿ ಆಡಿದ ತಾಂಡವ್ ಹಾಗೂ ಸೌಂದರ್ಯಗೆ ಕಿಚ್ಚ ಸುದೀಪ್ ಈ ವಾರದ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ಇದನ್ನೂ ಓದಿ: ಚಾಣಾಕ್ಷತನದ ಆಟಕ್ಕೆ ಒಲಿದ ಡಬಲ್ ಧಮಾಕಾ – ಈ ವಾರದ ಉತ್ತಮ, ಕ್ಯಾಪ್ಟನ್ ಪಟ್ಟ ಸೌಂದರ್ಯ ಶೆಟ್ಟಿಗೆ ಹಿಂದಿನ ವಾರದಲ್ಲಿ ಸೌಂದರ್ಯ ಶೆಟ್ಟಿ ಅವರು ತಾಂಡವ್ಗೆ Dumb ಎಂದು ಹೇಳಿದ್ದರು. ಇದರಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಅದೇ ಜಗಳ ಈ ವಾರ ನಾಮಿನೇಷನ್ ತನಕ ತಲುಪಿತ್ತು. ಬಿಗ್ಬಾಸ್ ಟಾಸ್ಕ್ವೊಂದನ್ನು ನೀಡಿದ್ದರು. ಈ ಟಾಸ್ಕ್ನಲ್ಲಿ ತಾಂಡವ್ ರಾಮ್ ಸೌಂದರ್ಯ ಅವರನ್ನು ನಾಮಿನೇಟ್ ಮಾಡಲೇಬೇಕು ಎಂದು ಜಿದ್ದು ಹಿಡಿದು ಕುಳಿತಿದ್ದರು. ಇತ್ತ ಸೌಂದರ್ಯ ಕೂಡ ತಾವು ನಾಮಿನೇಟ್ ಆಗಬಾರದು ಎಂದು ಜೈಲಿನಲ್ಲೇ ಕುಳಿತಿದ್ದರು. ಕೊನೆಗೆ ಗಗನ್ ತಾಂಡವ್ ಅವರನ್ನು ಸೇಫ್ ಮಾಡಿದ್ದರು. ಆದರೆ ಕೊನೆಗೆ ಸೌಂದರ್ಯ ಹಾಗೂ ತಾಂಡವ್ ಇಬ್ಬರು ನಾಮೀನೇಟ್ ಆಗಿ ಒಂದೇ ತಂಡ ಸೇರಿದ್ದರು. Blockbuster ವಾರದ ಕೊನೆಗೆ ಡಬಲ್ ಧಮಾಕಾ! ಬಿಗ್ ಬಾಸ್ – ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9 ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq #BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/BJ0xoeBDcy — Colors Kannada (@ColorsKannada) October 24, 2026 ಅದಾದ ಬಳಿಕ ಲೂಟಿಕೋರರು ಹಾಗೂ ರಕ್ಷಕರು ಟಾಸ್ಕ್ನಲ್ಲಿ ಸೌಂದರ್ಯ ಹಾಗೂ ತಾಂಡವ್ ತಮ್ಮ ಅಹಂ ಬದಿಗಿಟ್ಟು ಚಾಲಾಕಿತನ ಹಾಗೂ ಚಾಣಾಕ್ಷತನ ಬಳಸಿ, ವಜ್ರ ಹಾಗೂ ಕಿರೀಟ ಕದಿಯುವಲ್ಲಿ ಸಫಲರಾಗಿದ್ದರು. ಅಲ್ಲದೇ ಅದನ್ನು ಬಚ್ಚಿಡುವಲ್ಲಿಯೂ ಸಫಲರಾಗಿದ್ದರು. ಕೊನೆಗೆ ಲೂಟಿಕೋರರ ತಂಡವೇ ವಿಜಯ ಸಾಧಿಸಿತ್ತು. ವಾರದ ಉತ್ತಮ ಆಯ್ಕೆಯಲ್ಲಿಯೂ ಸೌಂದರ್ಯ ಹಾಗೂ ತಾಂಡವ್ ಅವರ ಹೆಸರನ್ನೇ ಹೆಚ್ಚು ಸ್ಪರ್ಧಿಗಳು ತೆಗೆದುಕೊಂಡಿದ್ದರು. ಇದೆಲ್ಲದರ ಆಧಾರದ ಮೇಲೆ ಕಿಚ್ಚ ಸುದೀಪ್ BlockBuster Entertainment Of The Week ಎಂದು ಹೇಳಿ ಸೌಂದರ್ಯ ಹಾಗೂ ತಾಂಡವ್ ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ಇದನ್ನೂ ಓದಿ: ಆಸಿಯಾ Vs ಸೌಂದರ್ಯ; ಯಾರಾಗ್ತಾರೆ ಕ್ಯಾಪ್ಟನ್?