CJP Protest Live Updates | ಹೆಚ್ಚಿದ ಪ್ರತಿಭಟನೆ ಕಿಚ್ಚು – ಪ್ರಧಾನ್ ರಾಜೀನಾಮೆಗೆ ʻಕಾಕ್ರೋಚ್ʼ ಬಿಗಿ ಪಟ್ಟು
10 min agoJuly 25, 2026 12:39 pm ʻಕಾಕ್ರೋಚ್ʼ ಪ್ರತಿಭಟನೆ ಹಿನ್ನೆಲೆ ದೆಹಲಿಯಲ್ಲಿ 18 ಮೆಟ್ರೋ ನಿಲ್ದಾಣಗಳ ಸೇವೆ ಸ್ಥಗಿತ 19 min agoJuly 25, 2026 12:30 pm ಮೆಟ್ರೋ, ರಸ್ತೆ, ಇಂಟರ್ನೆಟ್, ಅಂಗಡಿ, ಆಹಾರ ಎಲ್ಲವನ್ನೂ ನಿರ್ಬಂಧಿಸಿದ ಮೋದಿ ಜೀಗೆ ಪೇಪರ್ ಲೀಕ್ ನಿರ್ಬಂಧಿಸಲು ಆಗಲಿಲ್ಲ: ರಾಹುಲ್ ಲೇವಡಿ ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿ

10 min agoJuly 25, 2026 12:39 pm ʻಕಾಕ್ರೋಚ್ʼ ಪ್ರತಿಭಟನೆ ಹಿನ್ನೆಲೆ ದೆಹಲಿಯಲ್ಲಿ 18 ಮೆಟ್ರೋ ನಿಲ್ದಾಣಗಳ ಸೇವೆ ಸ್ಥಗಿತ 19 min agoJuly 25, 2026 12:30 pm ಮೆಟ್ರೋ, ರಸ್ತೆ, ಇಂಟರ್ನೆಟ್, ಅಂಗಡಿ, ಆಹಾರ ಎಲ್ಲವನ್ನೂ ನಿರ್ಬಂಧಿಸಿದ ಮೋದಿ ಜೀಗೆ ಪೇಪರ್ ಲೀಕ್ ನಿರ್ಬಂಧಿಸಲು ಆಗಲಿಲ್ಲ: ರಾಹುಲ್ ಲೇವಡಿ ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿ ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಸರ್ಕಾರದ ವಿರುದ್ದ CJP ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಗಳು ಬೃಹತ್ ರೂಪ ಪಡೆದುಕೊಳ್ಳುತ್ತಿದ್ದಂತೆ ದೆಹಲಿಯಲ್ಲಿ ಮೆಟ್ರೋ, ಇಂಟರ್ನೆಟ್, ಅಂಗಡಿ ಮುಂಗಟ್ಟುಗಳ, ರಸ್ತೆ, ಆಹಾರ ಎಲ್ಲದರ ಮೇಲೂ ನಿರ್ಬಂಧ ವಿಧಿಸಿದ ಪ್ರದಾನಿ ಮೋದಿ ಜೀ ಅವರಿಗೆ ಪೇಪರ್ ಲೀಕ್ ನಿರ್ಬಂಧಿಸಲು ಆಗಲಿಲ್ಲ ಎಂದು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ. ಈ ಕುರಿತು X ಪೋಸ್ಟ್ ಹಂಚಿಕೊಂಡಿದ್ದು, ತಮ್ಮ ಹಕ್ಕುಗಳನ್ನು ಕೇಳುತ್ತಿರುವ ವಿದ್ಯಾರ್ಥಿಗಳನ್ನು ಹತ್ತಿಕ್ಕಲು ಸರ್ಕಾರ ಅತ್ಯಂತ ಕ್ರೂರ ಕ್ರಮಗಳನ್ನ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮೆಟ್ರೋ ಬಂದ್, ರಸ್ತೆ ಬಂದ್, ಅಂಗಡಿ ಬಂದ್, ಇಂಟರ್ನೆಟ್ ಬಂದ್, ಆಹಾರ ಬಂದ್ ಮಾಡುತ್ತಿದೆ. ಆದರೆ ಅವರು ಮುಚ್ಚಲು ಸಾಧ್ಯವಾಗದ ಒಂದೇ ಒಂದು ವಿಷಯವಿದೆ, ಶ್ರೀ ಮೋದಿ – ʻಪತ್ರಿಕೆ ಸೋರಿಕೆʼ. ಎಂದು ಬರೆದುಕೊಂಡಿದ್ದಾರೆ. मेट्रो बंद करो।रास्ते बंद करो।दुकानें बंद करो।Internet बंद करो।खाना बंद करो।अपना हक़ मांग रहे छात्रों के ख़िलाफ़ सरकार ने ये क्रूर कदम उठाए।बस एक चीज़ बंद नहीं कर पाए, मोदी जी – पेपर लीक।— Rahul Gandhi (@RahulGandhi) July 25, 2026 31 min agoJuly 25, 2026 12:18 pm ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯೋಕೆ ಮೋದಿ ಏಕೆ ಹೆದರುತ್ತಿದ್ದಾರೆ? – ಪ್ರಿಯಾಂಕ್ ಖರ್ಗೆ 33 min agoJuly 25, 2026 12:16 pm ʻನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನ್ ಸಂಬಂಧ?ʼ ಎಂದಿದ್ದ ಸಿ.ಟಿ.ರವಿ ವಿರುದ್ಧ FIR ʻನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನ್ ಸಂಬಂಧ?ʼ ಎಂದಿದ್ದ ಸಿ.ಟಿ.ರವಿ ವಿರುದ್ಧ FIR https://t.co/VCquFm9tXX#MuslimCommunity #NEETProtest #Chikkamagaluru #CTRavi— PublicTV (@publictvnews) July 25, 2026 50 min agoJuly 25, 2026 11:59 am ಪ್ರಧಾನಿ ಮೋದಿ ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು – ಮತ್ತೊಮ್ಮೆ 3 ಬೇಡಿಕೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ #WATCH | LoP, Lok Sabha, Rahul Gandhi says, "Second… this young lady is injured. Yesterday I showed you a young man who has been shot in the eye, and there are thousands and thousands of youngsters who have had lathis break their legs, lathis break their heads, pellets in their… https://t.co/5GgTcyryhq pic.twitter.com/c8YfTDOEB9— ANI (@ANI) July 25, 2026 55 min agoJuly 25, 2026 11:54 am `ಕಾಕ್ರೋಚ್ʼಗಳ 3 ಮುಖ್ಯ ಬೇಡಿಕೆಗಳೇನು? ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ಕೊಡಬೇಕು. ವಿದ್ಯಾರ್ಥಿಗಳ ಮೇಲಿನ ಎಫ್ಐಆರ್ ವಾಪಸ್ ಪಡೆದು, ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. 60 min agoJuly 25, 2026 11:49 am ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ: ಯದುವೀರ್ ಒಡೆಯರ್ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಮೈಸೂರಿನಲ್ಲಿ ಸಂಸದ ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ. ನೀಟ್ ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣವನ್ನ ಕೇಂದ್ರ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮರುಪರೀಕ್ಷೆ ನಡೆದು ಫಲಿತಾಂಶವೂ ಪ್ರಕಟವಾಗಿದೆ. ಆದರೂ ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಅರಾಜಕತೆ ಸೃಷ್ಟಿಸಲು ಹೊರಟಿದೆ. ಪ್ರತಿಭಟನೆ ಮೂಲಕ ದಿಕ್ಕು ತಪ್ಪಿಸುವ ಕೆಲಸವಾಗಿದೆ. ಇದು ಕಾಂಗ್ರೆಸ್ನ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ಕಿಡಿಕಾರಿದರು. 1 hr 10 min agoJuly 25, 2026 11:39 am ಕಾಕ್ರೋಚ್ಗಳ ಜೊತೆ ಪ್ರತಿಭಟನೆಗೆ ಧುಮುಕಿದ ಅಸ್ಸಾಂ ಸಚಿವರ ಪುತ್ರಿ ಕಾಕ್ರೋಚ್ ಜನತಾ ಪಾರ್ಟಿ ಆರಂಭಿಸಿರುವ ಪ್ರತಿಭಟನೆಯ ಕಿಚ್ಚು ದೇಶದೆಲ್ಲೆಡೆ ಹಬ್ಬಿದೆ. ಅಸ್ಸಾಂನ ಗುವಾಹಟಿಯ ಚಾಚಲ್ನಲ್ಲೂ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಪ್ರತಿಭಟನೆಯಲ್ಲಿ ಅಸ್ಸಾಂ ಕಂದಾಯ ಸಚಿವ ಕೇಶಬ್ ಮಹಾಂತ ಅವರ ಪುತ್ರಿ ದಿಬಿಸಾ ಮಹಾಂತ್ ಭಾಗವಹಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದರಲ್ಲಿ ಅವರು ಫಲಕಗಳನ್ನು ಹಿಡಿದು, ಶಿಕ್ಷಣ ಸಚಿವ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು ಸೆರೆಯಾಗಿದೆ. ಕೇಶಬ್ ಮಹಾಂತ್ ಅವರು ಅಸ್ಸಾಂ ಗಣ ಪರಿಷತ್ನ (ಎಜಿಪಿ) ಹಿರಿಯ ನಾಯಕರಾಗಿದ್ದಾರೆ. ಅಲ್ಲದೇ ಅಸ್ಸಾಂನಲ್ಲಿ ಎಜಿಪಿ – ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಹೀಗಿದ್ದು ಸಚಿವರ ಮಗಳು ಪ್ರತಿಭಟನೆಯಲ್ಲಿ ಭಾಗಿಯಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. 1 hr 11 min agoJuly 25, 2026 11:38 am ನನ್ನ ಪ್ರಾಮಾಣಿಕತೆಗೆ ಪ್ರಮಾಣಪತ್ರ ಬೇಕೇ? – ಟೀಕಾಕಾರರಿಗೆ ವಾಂಗ್ಚುಕ್ ತಿರುಗೇಟು ಸರ್ಕಾರದೊಂದಿಗೆ ಡೀಲ್ ಮಾಡಿಕೊಂಡಿಲ್ಲ, ನನ್ನ ಪ್ರಾಮಾಣಿಕತೆಗೆ ಪ್ರಮಾಣಪತ್ರ ಬೇಕೇ? – ಟೀಕಾಕಾರರಿಗೆ ವಾಂಗ್ಚುಕ್ ತಿರುಗೇಟು– ವಾಂಗ್ಚುಕ್ 11 ಕೆಜಿ ತೂಕ ಕಳೆದುಕೊಂಡಿದ್ದಾರೆ, ತಕ್ಷಣವೇ ಟೀಕಿಸಬೇಡಿ: ಪತ್ನಿ ಮನವಿ https://t.co/yU3ZulxX7q#SonamWangchuk #HungerStrike #GitanjaliJAngmo #CJP #NEETProtest— PublicTV (@publictvnews) July 25, 2026 1 hr 15 min agoJuly 25, 2026 11:34 am `ಕಾಕ್ರೋಚ್’ ಗಳ ಬೆಂಬಲಕ್ಕೆ ನಿಂತ ನಟಿ ಜ್ಯೋತಿಕಾ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಖ್ಯಾತ ತಮಿಳು ನಟಿ ಜ್ಯೋತಿಕಾ ಆಗ್ರಹಿಸಿದ್ದಾರೆ. ಈ ಕುರಿತು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಧರ್ಮೇಂದ್ರ ಪ್ರಧಾನ್ ಅವ್ರೇ, ಹುದ್ದೆಯಿಂದ ಕೆಳಗಿಳಿಯಿರಿ – ʻಕಾಕ್ರೋಚ್ʼಗಳ ಬೆಂಬಲಕ್ಕೆ ನಿಂತ ನಟಿ ಜ್ಯೋತಿಕಾ https://t.co/trTBKvU0HS#Jyotika #NEETProtest #TamilActress #AbhijeetDipke #DharmendraPradhan— PublicTV (@publictvnews) July 25, 2026 1 hr 26 min agoJuly 25, 2026 11:24 am ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ರೆ ಕಠಿಣ ನಿಲುವು: ರಂಕಾ ಇಂದು ಕೇಂದ್ರ ಸರ್ಕಾರದೊಂದಿಗೆ 3ನೇ ಸುತ್ತಿನ ಸಭೆ ನಡೆಸುವುದಕ್ಕೆ ಮುನ್ನ ಕಾಕ್ರೋಚ್ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಮತ್ತೆ ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸಿದ್ದಾರೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ರೆ ನಾವು ಕಠಿಣ ನಿಲುವು ತೆಗೆದುಕೊಳ್ಳಬೇಕಾಗುತ್ತದೆ. ಈ ರೀತಿಯ ಸಭೆಗಳನ್ನ ನಡೆಸುವುದರಲ್ಲಿ ಯಾವುದೇ ಅರ್ಥವೂ ಇಲ್ಲ ಎಂದೂ ಹೇಳಿದ್ದಾರೆ. #WATCH | Delhi | After meeting with the government, Cockroach Janta Party's National Spokesperson Ashutosh Ranka says, "…Yesterday's meeting yielded a positive response regarding compensation and legal matters. An in-principle agreement was reached. We hope to receive that… pic.twitter.com/utgBCmMeHW— ANI (@ANI) July 25, 2026 ನೀಟ್ ಪ್ರಶ್ನೆಪತ್ರಿಕೆ ಸೋರಿಕೆ (NEET Question Paper Leak) ಪ್ರಕರಣದಲ್ಲಿನ ಅವ್ಯವಹಾರ ಪ್ರಶ್ನಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ (CJP) ನೇತೃತ್ವದಲ್ಲಿ ಭಾರಿ ಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ಈಗಾಗಲೇ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, CJP ಜೊತೆಗೆ 2 ಸುತ್ತಿನ ಮಾತುಕತೆ ನಡೆಸಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗಲೇಬೇಕೆಂದು ಇಂದು ಸಿಜೆಪಿ ನೀಡಿರುವ ಡೆಡ್ಲೈನ್ ಅಂತ್ಯವಾಗಲಿದ್ದು, ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ಇನ್ನು, ದೆಹಲಿಯಲ್ಲಿ ಪ್ರತಿಭಟನೆಗಳು ಇನ್ನಷ್ಟು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಿಗಿ ಭದ್ರತೆಯ ಕ್ರಮ ಕೈಗೊಳ್ಳಲಾಗಿದೆ. ಮೆಟ್ರೋ ಸಂಪರ್ಕಗಳನ್ನು ಸಹ ಸ್ಥಗಿತಗೊಳಿಸಲಾಗಿದೆ, ಜೊತೆಗೆ ವೀಕೆಂಡ್ನಲ್ಲಿ ರಾತ್ರಿ 8 ಗಂಟೆ ಬಳಿಕ ಮದ್ಯದ ಅಂಗಡಿಗಳನ್ನ ಬಂದ್ ಮಾಡುವಂತೆ ಸ್ಥಳೀಯ ಆಡಳಿತ ಸೂಚಿಸಿದೆ.