Commonwealth Games 2026: ಭಾರತಕ್ಕೆ ‘ಬೆಳ್ಳಿ’ ತಂದುಕೊಟ್ಟ ರಿಷಿಕಾಂತ್ ಸಿಂಗ್
ಗ್ಲಾಸ್ಗೊ: ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 60 ಕೆ.ಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ, ಭಾರತದ ರಿಷಿಕಾಂತ್ ಸಿಂಗ್ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.'ಕ್ಲೀನ್ ಅಂಡ್ ಜರ್ಕ್' ವಿಭಾಗದ ಎರಡು ಪ್ರಯತ್ನಗಳು ವಿಫಲವಾದದ್ದು ಭಾರತದ ರಿಷಿಕಾಂತ್ ಸಿಂಗ್ ಅವರಿಗೆ ದುಬಾರಿಯಾಗಿ ಪರಿಣಮಿಸಿತು. ಅಂತಿಮವಾಗಿ 264 ಕೆ.ಜಿ.ಯೊಂದಿಗೆ(121 ಕೆ.ಜಿ+ 143 ಕೆ.ಜಿ) ಬೆಳ್ಳ
ಗ್ಲಾಸ್ಗೊ: ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 60 ಕೆ.ಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ, ಭಾರತದ ರಿಷಿಕಾಂತ್ ಸಿಂಗ್ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.'ಕ್ಲೀನ್ ಅಂಡ್ ಜರ್ಕ್' ವಿಭಾಗದ ಎರಡು ಪ್ರಯತ್ನಗಳು ವಿಫಲವಾದದ್ದು ಭಾರತದ ರಿಷಿಕಾಂತ್ ಸಿಂಗ್ ಅವರಿಗೆ ದುಬಾರಿಯಾಗಿ ಪರಿಣಮಿಸಿತು. ಅಂತಿಮವಾಗಿ 264 ಕೆ.ಜಿ.ಯೊಂದಿಗೆ(121 ಕೆ.ಜಿ+ 143 ಕೆ.ಜಿ) ಬೆಳ್ಳಿ ಪದಕ ಗೆಲ್ಲುವಲ್ಲಿ ಮಣಿಪುರದ ವೇಟ್ಲಿಫ್ಟರ್ ಯಶಸ್ವಿಯಾದರು. Heartiest congratulations to Rishikanta Singh Chanambam on winning the Silver Medal in Weightlifting Men's 60kg.The entire nation is proud of you!#Cheer4Bharat #CWG2026 pic.twitter.com/Vl55NGafEu— Dr Mansukh Mandaviya (@mansukhmandviya) July 26, 2026 ಒಟ್ಟು ಪ್ರಯತ್ನಗಳಲ್ಲಿ 273 ಕೆ.ಜಿ. ಎತ್ತುವ ಮೂಲಕ ಮಲೇಷ್ಯಾದ ಮೊಹಮದ್ ಅನಿಕ್ ಕಸ್ದನ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕೀನ್ಯಾದ ಅಮುಂಗಾ ಎಂಬೊಯಾ ಕಂಚಿನ ಪದಕ ಗೆದ್ದರು. ಗ್ಲಾಸ್ಗೊ ಕಾಮನ್ವೆಲ್ತ್ ಕ್ರೀಡಾಕೂಟದ ದೈಹಿಕವಾಗಿ ಸಮರ್ಥರಿರುವ ಸ್ಪರ್ಧೆಗಳಲ್ಲಿ ಇದು ಮೊದಲ ಪದಕವಾಗಿದೆ. ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಝಂಡು ಕುಮಾರ್ ಕಂಚಿನ ಪದಕ ಗೆದ್ದಿದ್ದರು. ಕಾಮನ್ವೆಲ್ತ್ನಲ್ಲಿ ಖಾತೆ ತೆರೆದ ಭಾರತ: ಪೋಲಿಯೊ ಪೀಡಿತ ಝಂಡು ಕುಮಾರ್ಗೆ ಕಂಚುಪೋಲಿಯೊ ಮೆಟ್ಟಿ ನಿಂತು ಪದಕ ಗೆದ್ದ ಝಂಡು: ತರಕಾರಿ ಮಾರುತ್ತಿದ್ದವನು ‘ಕಂಚು’ ಗೆದ್ದ