Commonwealth Games | ವೇಟ್ಲಿಫ್ಟರ್ ರಾಜ ಮುತ್ತುಪಾಂಡಿಗೆ ಬೆಳ್ಳಿ ಪದಕ
ಗ್ಲ್ಯಾಸ್ಗೋ: ಕಾಮನ್ವೆಲ್ತ್ ಗೇಮ್ಸ್ (Commonwealth Games) 2026ರ ಪುರುಷರ 65 ಕೆಜಿ ವಿಭಾಗದ ವೇಟ್ಲಿಫ್ಟಿಂಗ್ನಲ್ಲಿ ಭಾರತದ ರಾಜ ಮುತ್ತುಪಾಂಡಿ(Raja Muthupandi) ಬೆಳ್ಳಿ ಪದಕ ಗೆದ್ದಿದ್ದಾರೆ. ಪಂದ್ಯಾವಳಿಯ 4ನೇ ದಿನದಂದು ರಾಜ ಮುತ್ತುಪಾಂಡಿ ಒಟ್ಟು 286 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ (Silver Medal) ಕೊರಳೊಡ್ಡಿದರು. ಸ್ನ್ಯಾಚ್ ವಿಭಾಗದಲ್ಲಿ

ಗ್ಲ್ಯಾಸ್ಗೋ: ಕಾಮನ್ವೆಲ್ತ್ ಗೇಮ್ಸ್ (Commonwealth Games) 2026ರ ಪುರುಷರ 65 ಕೆಜಿ ವಿಭಾಗದ ವೇಟ್ಲಿಫ್ಟಿಂಗ್ನಲ್ಲಿ ಭಾರತದ ರಾಜ ಮುತ್ತುಪಾಂಡಿ(Raja Muthupandi) ಬೆಳ್ಳಿ ಪದಕ ಗೆದ್ದಿದ್ದಾರೆ. ಪಂದ್ಯಾವಳಿಯ 4ನೇ ದಿನದಂದು ರಾಜ ಮುತ್ತುಪಾಂಡಿ ಒಟ್ಟು 286 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ (Silver Medal) ಕೊರಳೊಡ್ಡಿದರು. ಸ್ನ್ಯಾಚ್ ವಿಭಾಗದಲ್ಲಿ 126 ಕೆಜಿ ಹಾಗೂ ಕ್ಲೀನ್ ಅಂಡ್ ಜೆರ್ಕ್ ವಿಭಾಗದಲ್ಲಿ 160 ಕೆಜಿ ಭಾರವನ್ನು ಅವರು ಯಶಸ್ವಿಯಾಗಿ ಎತ್ತಿದರು. ಪ್ರಸಕ್ತ ಗ್ಲ್ಯಾಸ್ಗೋ ಕಾಮನ್ವೆಲ್ತ್ ಕೂಟದಲ್ಲಿ ಭಾರತಕ್ಕೆ ಸಿಕ್ಕ ಎರಡನೇ ಬೆಳ್ಳಿ ಪದಕ ಇದಾಗಿದ್ದು, ಭಾರತದ ಒಟ್ಟು ಪದಕಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ವೇಟ್ಲಿಫ್ಟಿಂಗ್ ಒಂದರಲ್ಲೇ ಭಾರತಕ್ಕೆ ಸಿಕ್ಕ 3ನೇ ಪದಕ ಇದಾಗಿದೆ. ಮಲೇಷ್ಯಾದ ಮುಹಮ್ಮದ್ ಅಜ್ನಿಲ್ ಬಿದಿನ್ ಒಟ್ಟು 299 ಕೆಜಿ ಭಾರ ಎತ್ತುವ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಪಪುವಾ ನ್ಯೂ ಗಿನಿಯಾದ ಮೊರಿಯಾ ಬಾರು 282 ಕೆಜಿ ಎತ್ತಿ ಕಂಚಿನ ಪದಕ ಪಡೆದರು. ಇದನ್ನೂ ಓದಿ: ಮೀರಾಬಾಯಿ ಚಾನುಗೆ ಹ್ಯಾಟ್ರಿಕ್ ಚಿನ್ನ – ಹೊಸ ದಾಖಲೆಯೊಂದಿಗೆ ಭಾರತಕ್ಕೆ ಮೊದಲ ಸ್ವರ್ಣ! Another lift. Another medal. Raja Muthupandi muscles his way to Commonwealth Games silver in the Men’s 65kg event. Watch the Commonwealth Games 2026 TODAY, 2 PM onwards, LIVE & EXCLUSIVE on Sony Sports Network TV channels and Sony LIV #SonySportsNetwork #SonyLIV… pic.twitter.com/SUTs7cv1mH — Sony Sports Network (@SonySportsNetwk) July 26, 2026 ತಮಿಳುನಾಡಿನ ಕೋವಿಲ್ಪಟ್ಟಿ ಮೂಲದ 27 ವರ್ಷದ ರಾಜ ಮುತ್ತುಪಾಂಡಿ, 2018ರ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ಮೂಲಕ ಪಾದಾರ್ಪಣೆ ಮಾಡಿ 62 ಕೆಜಿ ವಿಭಾಗದಲ್ಲಿ 6ನೇ ಸ್ಥಾನ ಪಡೆದಿದ್ದರು. 2019ರ ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ ವೇಳೆ ಮೊಣಕೈ ನೋವಿಗೆ ತುತ್ತಾಗಿದ್ದರು. ಇದನ್ನೂ ಓದಿ: ವೇಟ್ಲಿಫ್ಟರ್ ಋಷಿಕಾಂತ್ ಸಿಂಗ್ಗೆ ಬೆಳ್ಳಿ ಪದಕ- ಸ್ನ್ಯಾಚ್ನಲ್ಲಿ ದಾಖಲೆ ಹಠ ಬಿಡದೇ ಕಂಬ್ಯಾಕ್ ಮಾಡಿದ ಅವರು ರಾಷ್ಟ್ರೀಯ ಚಾಂಪಿಯನ್ಷಿಪ್ ಗೆದ್ದು, 2025ರ ವಿಶ್ವ ಚಾಂಪಿಯನ್ಷಿಪ್ನಲ್ಲಿ 9ನೇ ಸ್ಥಾನ ಪಡೆದುಕೊಂಡಿದ್ದರು. ಇದೀಗ ಈ ಬೆಳ್ಳಿ ಪದಕವು ಅವರ ಕ್ರೀಡಾ ಜೀವನದ ದೊಡ್ಡ ಸಾಧನೆಯಾಗಿದೆ. 1 ಚಿನ್ನ, 2 ಬೆಳ್ಳಿ, 1 ಕಂಚಿನ ಪದಕದೊಂದಿಗೆ 4 ಪದಕ ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.