Dasara LIVE: ಸಿಂಹಾಸನವೇರಿದ ಯದುವೀರ್, 12ನೇ ಖಾಸಗಿ ದರ್ಬಾರ್
ದಸರಾ ಮಹೋತ್ಸವ ಪ್ರಯುಕ್ತ ‘ಪ್ರಜಾಪ್ರಭುತ್ವದ ಹಬ್ಬ’ ಪರಿಕಲ್ಪನೆಯಲ್ಲಿ ಕುಪ್ಪಣ್ಣ ಪಾರ್ಕ್ನಲ್ಲಿ ಆಯೋಜಿಸಿರುವ ದಸರಾ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.Mysuru Dasara: ಸಿಂಹಾಸನವೇರಿದ ಯದುವೀರ್, 12ನೇ ಖಾಸಗಿ ದರ್ಬಾರ್ ಇಲ್ಲಿನ ಅಂಬಾವಿಲಾಸ ಅರಮನೆಯ ದರ್ಬಾರ್ ಅಂಗಳದಲ್ಲಿ ಭಾನುವಾರ ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಕೃಷ್

ದಸರಾ ಮಹೋತ್ಸವ ಪ್ರಯುಕ್ತ ‘ಪ್ರಜಾಪ್ರಭುತ್ವದ ಹಬ್ಬ’ ಪರಿಕಲ್ಪನೆಯಲ್ಲಿ ಕುಪ್ಪಣ್ಣ ಪಾರ್ಕ್ನಲ್ಲಿ ಆಯೋಜಿಸಿರುವ ದಸರಾ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.Mysuru Dasara: ಸಿಂಹಾಸನವೇರಿದ ಯದುವೀರ್, 12ನೇ ಖಾಸಗಿ ದರ್ಬಾರ್ ಇಲ್ಲಿನ ಅಂಬಾವಿಲಾಸ ಅರಮನೆಯ ದರ್ಬಾರ್ ಅಂಗಳದಲ್ಲಿ ಭಾನುವಾರ ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು 12ನೇ ಬಾರಿ ಖಾಸಗಿ ದರ್ಬಾರ್ ನಡೆಸಿದರು.ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಅರಮನೆಯಲ್ಲಿ ನವರಾತ್ರಿಯ ಪೂಜಾ ವಿಧಾನಗಳು ಮುಂಜಾನೆ 5.30ರಿಂದಲೇ ಆರಂಭವಾದವು. 6 ರಿಂದ 7ರವರೆಗೆ ಸಿಂಹಾಸನಕ್ಕೆ ಸಿಂಹದ ಮೂರ್ತಿ ಜೋಡಿಸಿ, ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು.ಮೈಸೂರು ದಸರಾ: ಅಂಬಾವಿಲಾಸ ಅರಮನೆಯಲ್ಲಿ ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು 12ನೇ ಬಾರಿ ಖಾಸಗಿ ದರ್ಬಾರ್ ನಡೆಸಿದರು.#mysurudasara #mysurudasara2026 #Dasara2026 #Mysuru pic.twitter.com/FTlxnpCY0E— Prajavani (@prajavani) October 11, 2026 ಡಿಕೆಶಿ ಮಾತನಾಡಿ, ಸರ್ಕಾರದ ಆಹ್ವಾನದ ಮೇರೆಗೆ ಆಗಮಿಸಿದ ಎಲ್ಲ ಧರ್ಮಗುರುಗಳಿಗೂ ಭಕ್ತಿ ಪೂರ್ವಕ ನಮಸ್ಕಾರ ಸಲ್ಲಿಸುತ್ತೇನೆ.ನಾವು ಜನರ ಪ್ರತಿನಿಧಿಗಳು. ನೀವು (ಮಠಾಧೀಶರು) ಭಕ್ತರು ಹಾಗೂ ಸಮಾಜದ ಪ್ರತಿನಿಧಿಗಳು. ಸರ್ಕಾರಕ್ಕೆ ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ಬಂದಿರುವ ನಿಮಗೆ ನಮಸ್ಕರಿಸುತ್ತೇನೆ ಎಂದರು.ದಸರಾ ಉದ್ಘಾಟಿಸುವಷ್ಟು ದೊಡ್ಡವನು ನಾನಲ್ಲ: ಗವಿಮಠ ಶ್ರೀದಸರಾ ಉದ್ಘಾಟಿಸುವಷ್ಟು ದೊಡ್ಡವನು ನಾನಲ್ಲ. ನಾನು ಬಂದಿದ್ದು ಉದ್ಘಾಟಿಸಲು ಅಲ್ಲ. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಾರ್ಥಿಸಲು ಬಂದಿದ್ದೇನೆ. ಇಲ್ಲಿ ಹಚ್ಚಿದ ಕನ್ನಡದ ದೀಪ , ಆಶಯದ ದೀಪ ಆರದಿರಲಿ ಎಂದು ಪ್ರಾರ್ಥಿಸಲು ಬಂದವನಷ್ಟೆ. ಎಷ್ಟೆಲ್ಲ ದೊಡ್ಡ ಮಹಾನುಭಾವರು ಉದ್ಘಾಟಿಸಿದ್ದಾರೆ. ನಾನೊಬ್ಬ ಸನ್ಯಾಸಿ. ನಾನು ಪ್ರಾರ್ಥಿಸಬಹುದಷ್ಟೆ. ಅನುದಾನ ಘೋಷಿಸಿ ಹೋಗಿಬಿಡುತ್ತಿದ್ದೆವು. ಕನ್ನಡದ ಹೃದಯಗಳ ಪರವಾಗಿ ಕೈಚಾಚಿ ದೀಪ ಹಚ್ಚಿದ್ದೇನೆ. ನಾಡಿಗಾಗಿ ಪ್ರಾರ್ಥನೆ ಸಲ್ಲಿಸಲಷ್ಟೆ ಬಂದೆ. ಅಲ್ಲೇ ಸಲ್ಲಿಸಬಹುದಿತ್ತಲ್ಲವೇ ಎನ್ನಬಹುದು. ಶಕ್ತಿ ದೇವತೆ ಟವರ್ ಆಫ್ ದಿ ಪವರ್ ಆಗಿದ್ದಾಳೆ. ಹೀಗಾಗಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ ಎಂದು ಹೇಳಿದರು.ಕರ್ನಾಟಕದ ಪ್ರಗತಿಗಾಗಿ ಪ್ರತಿಯೊಬ್ಬರೂ ಸಂಕಲ್ಪ ತೊಟ್ಟು ಹೆಜ್ಜೆ ಹಾಕಬೇಕು: ಗವಿಮಠ ಶ್ರೀಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಮೈಸೂರು ಕರ್ನಾಟಕ ಸಂಸ್ಕೃತಿಯ ಆತ್ಮ. ಅರಿವಿನ ಮನೆಗಳ, ಗುರುಮನೆಗಳ ನಗರ, ಸ್ವಚ್ಛ ನಗರ, ಶಿಸ್ತಿನ ನಗರ ಎಂದು ಶ್ಲಾಘಿಸಿದರು.ದಸರಾದಲ್ಲಿ ಕಾಣುವ ವೈಭವದ ಹಿಂದೆ ಕಾಣದ ಬಹಳಷ್ಟು ಕೈಗಳಿಗೆ ಶರಣಾರ್ಥಿ ಸಲ್ಲಿಸುತ್ತೇನೆ. ದಸರಾ ಹಬ್ಬವು ತುಂಗಭದ್ರೆಯ ತೀರದಿಂದ ಕಾವೇರಿ ತೀರಕ್ಕೆ ಹರಿದುಬಂದಿದೆ. ಮಹಾನವಮಿ ದಿಬ್ಬದಿಂದ ಮೈಸೂರಿಗೆ ಹಬ್ಬವಾಗಿ ಹರಿದುಬಂದಿದೆ. ಒಂದು ಕಾಲಕ್ಕೆ ದೊರೆಯ ಹಬ್ಬವಾಗಿದ್ದ ಹಬ್ಬ ಈಗ ಧರೆಯ ಹಬ್ಬವಾಗಿ ವಿಶ್ವವಿಖ್ಯಾತಿಯಾಗಿದೆ ಎಂದರು.ದಸರಾ ಹಬ್ಬಕ್ಕೆ ವಿಧ್ಯುಕ್ತ ಚಾಲನೆಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಗೆ ಶುಭ ಧನುರ್ ಲಗ್ನದಲ್ಲಿ ಅಗ್ರಪೂಜೆ ಸಲ್ಲಿಸುವ ಮೂಲಕ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ–2026ಕ್ಕೆ ಕೊಪ್ಪಳದ ಗವಿಮಠದ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿ ಅವರು ಭವ್ಯ ಚಾಲನೆ ನೀಡಿದರು.ಈ ಶುಭಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ… pic.twitter.com/qqvqnkMCxE— CM of Karnataka (@CMofKarnataka) October 11, 2026 ನಾಡಹಬ್ಬ ಮೈಸೂರು ದಸರಾ 2026ರ ಉದ್ಘಾಟನಾ ಸಮಾರಂಭದಲ್ಲಿ ಗಣ್ಯರನ್ನು ಸನ್ಮಾನಿಸಿ ಗೌರವಿಸಿದ ವಿಶೇಷ ಕ್ಷಣಗಳು.ನಾಡಹಬ್ಬ ಮೈಸೂರು ದಸರಾ 2026ರ ಉದ್ಘಾಟನಾ ಸಮಾರಂಭದಲ್ಲಿ ಗಣ್ಯರನ್ನು ಸನ್ಮಾನಿಸಿ ಗೌರವಿಸಿದ ವಿಶೇಷ ಕ್ಷಣಗಳು.Moments from the felicitation of distinguished dignitaries during the grand inauguration of Mysuru Dasara 2026.#mysurudasara2026 #dasara2026 #mysurudasara@Dr_Yathindra_S @SPmysuru… pic.twitter.com/tZwFgeM8yD— MysuruDasara (@Mysuru_Dasara26) October 11, 2026 ವಿಶ್ವವಿಖ್ಯಾತ ಮೈಸೂರು ದಸರಾ 2026ರ ಉದ್ಘಾಟನಾ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿ. ನಾಡಹಬ್ಬದ ವೈಭವಯುತ ಆರಂಭದ ವಿಶೇಷ ಕ್ಷಣಗಳು.Distinguished dignitaries graced the inauguration of Mysuru Dasara 2026, marking a memorable beginning to the grand celebrations.#mysurudasara2026 #dasara2026… pic.twitter.com/2Ld1Z6HgBa— MysuruDasara (@Mysuru_Dasara26) October 11, 2026 ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ನಾಡಿನ ಒಳಿತಿಗಾಗಿ ಧರ್ಮಪತ್ನಿಯೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಪ್ರಾರ್ಥನೆಚಾಮುಂಡಾ ಮಾಹಾಮಾಯಾ ಶ್ರೀಮತ್ಸಿಂಹಾಸನೇಶ್ವರೀ | ಶ್ರೀವಿದ್ಯಾವೇದ್ಯಮಹಿಮಾ ಶ್ರೀಚಕ್ರಪುರವಾಸಿನೀ ||ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಶುಭ ಉದ್ಘಾಟನೆಗೂ ಮುನ್ನ, ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಧರ್ಮಪತ್ನಿಯೊಂದಿಗೆ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು, ನಾಡಿನ… pic.twitter.com/IhpGS88RSj— DK Shivakumar (@DKShivakumar) October 11, 2026 ಎಲ್ಲ ಧರ್ಮದ ಗುರುಗಳಿಗೂ ಆಹ್ವಾನ: ಸಚಿವ ಶಿವರಾಜ್ ತಂಗಡಗಿಸಚಿವ ಶಿವರಾಜ್ ತಂಗಡಗಿ ಮಾತನಾಡಿ, ನಾಡಿನ ಎಲ್ಲ ಶ್ರೀಗಳನ್ನೂ ನಾಡಹಬ್ಬಕ್ಕೆ ಕರೆಸಬೇಕು ಎಂದು ಗವಿಸಿದ್ಧೇಶ್ವರ ಸ್ವಾಮೀಜಿಯವರು ನಮಗೆ ಆಹ್ವಾನಿಸಲು ಹೋಗಿದ್ದಾಗ ಹೇಳಿದ್ದರು. ಅದರಂತೆ ಇಲ್ಲಿ ಎಲ್ಲ ಧರ್ಮದ ಗುರುಗಳನ್ನೂ ಇಲ್ಲಿಗೆ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.ಮೂಲಸೌಲಭ್ಯಗಳ ಕೊರತೆ ಇದೆ: ಜಿ.ಟಿ. ದೇವೇಗೌಡಮೈಸೂರು ನಗರ ಸುಂದರವಾಗಿದೆ. ಆದರೆ, ಹೊರವಲಯದಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ. ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ನೀರು ಕೊಡಿ, ರಸ್ತೆ ಮಾಡಿಸಿಕೊಡಿ, ಕೆರೆಗಳನ್ನು ತುಂಬಿಸಿ ಈ ಭಾಗದ ಜನರನ್ನು ರಕ್ಷಿಸಬೇಕು ಎಂದು ಮುಖ್ಯಮಂತ್ರಿ ಶಿವಕುಮಾರ್ ಅವರನ್ನು ಜಿ.ಟಿ. ದೇವೇಗೌಡ ಒತ್ತಾಯಿಸಿದರು.ಬಸವಣ್ಣನವರ ಕಾಲದ ಅನುಭವ ಮಂಟಪದಂತೆ ಕಾಣುತ್ತಿದೆ: ಶಾಸಕ ಜಿ.ಟಿ.ದೇವೇಗೌಡಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಮುಖ್ಯಮಂತ್ರಿಯವರು ಗವಿಸಿದ್ಧೇಶ್ವರ ಸ್ವಾಮೀಜಿ ಅವರನ್ನು ಆಯ್ಕೆ ಮಾಡಿದ್ದು ನಮ್ಮೆಲ್ಲರ ಸೌಭಾಗ್ಯ ಎಂದರು. ಡಿಕೆಶಿ ಮೈಸೂರಿನ ಅಳಿಯ. ಇಲ್ಲಿಯವರೇ ಆದ ಸಿದ್ದರಾಮಯ್ಯ ಅವರು ನೀಡಿದ ಜನಪರ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಶ್ಲಾಘಿಸಿದರು.ಮುಖ್ಯಮಂತ್ರಿಯವರು ಗುರುಗಳು, ಹಿರಿಯರು ಹಾಗೂ ಧಾರ್ಮಿಕ ನಂಬಿಕೆಯ ಮೇಲೆ ಗೌರವ ಇಟ್ಟುಕೊಂಡಿದ್ದಾರೆ. ಎಲ್ಲ ಧರ್ಮಗುರುಗಳನ್ನೂ ಅಹ್ವಾನಿಸಿರುವುದು ಬಸವಣ್ಣನವರ ಕಾಲದ ಅನುಭವ ಮಂಟಪದಂತೆ ಕಾಣುತ್ತಿದೆ ಎಂದರು.ಮೈಸೂರು ದಸರಾ ಸಂಭ್ರಮ ಚಿತ್ರಗಳಲ್ಲಿ ನೋಡಿPHOTOS: ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ, ಕಂಗೊಳಿಸುತ್ತಿರುವ ಅರಮನೆದಸರಾ: ಪೂಜೆಯ ವೇಳೆ ಮುರಿದು ಬಿದ್ದ ನಂದಿ ಧ್ವಜ View this post on Instagram ದಸರಾ ಹಬ್ಬದ ಸಂಭ್ರಮದಸರಾ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಮೈಸೂರು ಅರಮನೆ... ಪ್ರಜಾವಾಣಿ ಚಿತ್ರ / ಅನೂಪ್ ರಾಘ ಟಿ.ದುರ್ಗಾದೇವಿ ಮೂರ್ತಿ ಕೊಂಡೊಯ್ಯುತ್ತಿದ್ದ ವಾಹನಕ್ಕೆ ಟ್ರಕ್ ಡಿಕ್ಕಿ: ಮೂವರ ಸಾವುದುರ್ಗಾದೇವಿ ಮೂರ್ತಿ ಕೊಂಡೊಯ್ಯುತ್ತಿದ್ದ ವಾಹನಕ್ಕೆ ಟ್ರಕ್ ಡಿಕ್ಕಿ: ಮೂವರ ಸಾವುದಸರಾ ಟಿಕೆಟ್ ಬುಕ್ ಮಾಡಿhttps://mysoredasara.gov.in/ticketsಮೈಸೂರು ದಸರಾಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಿರಿ https://mysoredasara.gov.in/ಮೈಸೂರು ದಸರಾ - ಅಲಂಕಾರಗೊಂಡಿರುವ ಚಾಮುಂಡೇಶ್ವರಿ ಅಮ್ಮನವರ ಅಂಬಾರಿ ಉತ್ಸವ ಮೂರ್ತಿದಸರಾ ಉದ್ಘಾಟನೆ ಸಮಾರಂಭMysuru Dasara 2026 Inauguration | ಮೈಸೂರು ದಸರಾ ೨೦೨೬ರ ಉದ್ಘಾಟನೆ https://t.co/Q3xMXvQknn— DK Shivakumar (@DKShivakumar) October 11, 2026 ನಾಡಹಬ್ಬ ದಸರಾ:ಇಂದಿನ ಕಾರ್ಯಕ್ರಮಗಳ ವಿವರಎಲ್ಲರನ್ನೂ ಬೆಳೆಯುವಂತಹ ಹಬ್ಬ: ಡಾ.ಯತೀಂದ್ರಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಎಲ್ಲರನ್ನೂ ಬೆಳೆಯುವಂತಹ ಹಬ್ಬವಾದ್ದರಿಂದ ಇದು ನಾಡಹಬ್ಬವಾಗಿದೆ. ಕನ್ನಡಿಗರೆಲ್ಲರೂ ಸಂಭ್ರಮದಿಂದ ಆಚರಿಸುವಂಥದ್ದು. ಸೌಹಾರ್ದವನ್ನು ಸಾರುವಂಥದು ಎಂದರು.ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯವರು ವಿಶೇಷವಾಗಿ ಜಲದಾಸೋಹ, ಪರಿಸರ ಸಂರಕ್ಷಣೆಯ ಕಾಳಜಿಯಿಂದ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನಪರ ಯೋಜನೆಗಳನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀಡಿದ್ದಾರೆ ಎಂದು ಹೊಗಳಿದರು.ತಮಗೆ ನೀಡಿದ ಮೈಸೂರು ಪೇಟ, ಮಲ್ಲಿಗೆ ಹೂವಿನ ಹಾರ ಹಾಗೂ ಶಾಲನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೇ ಹಾಕಿದ ಗವಿಸಿದ್ಧೇಶ್ವರ ಸ್ವಾಮೀಜಿ. ಉದ್ಘಾಟನೆಗೆ ಆಗಮಿಸಿದ ಗಣ್ಯರುದಸರಾ ಉದ್ಘಾಟನೆಗೆಂದು ಚಾಮುಂಡಿ ಬೆಟ್ಟಕ್ಕೆ ಕೊಪ್ಪಳ ಗವಿಸಿದ್ಧೇಶ್ವರ ಸ್ವಾಮೀಜಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಈಶ್ವರ ಖಂಡ್ರೆ, ಶಿವರಾಜ್ ತಂಗಡಗಿ, ಕೆ.ಎಸ್. ಬಸವಂತಪ್ಪ, ರಾಮಲಿಂಗಾ ರೆಡ್ಡಿ ಸೇರಿದಂತೆ ಗಣ್ಯರು ಆಗಮಿಸಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 200ಕ್ಕೂ ಹೆಚ್ಚು ವಿವಿಧ ಧರ್ಮಗುರು ಪಾಲ್ಗೊಂಡಿರುವುದು ವಿಶೇಷ.ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಶಿವರಾಜ್ ತಂಗಡಗಿ, ಕೆ.ಎಸ್. ಬಸವಂತಪ್ಪ, ಈಶ್ವರ ಖಂಡ್ರೆ, ಸಿ.ಪುಟ್ಟರಂಗಶೆಟ್ಟಿ, ರಿಜ್ವಾನ್ ಅರ್ಷದ್, ಅಜಯ್ ಸಿಂಗ್, ರಾಮಲಿಂಗಾರೆಡ್ಡಿ, ಸಂಸದ ಸುನೀಲ್ ಬೋಸ್, ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ, ಟಿ.ಎಸ್. ಶ್ರೀವತ್ಸ, ಡಾ.ಎಚ್.ಸಿ. ಮಹದೇವಪ್ಪ, ಅನಿಲ್ ಚಿಕ್ಕಮಾದು, ಎ.ಆರ್.ಕೃಷ್ಣಮೂರ್ತಿ, ಕೆ.ವೆಂಕಟೇಶ್, ಕೆ.ಹರೀಶ್ ಗೌಡ, ರಾಘವೇಂದ್ರ ಹಿಟ್ನಾಳ, ವಿಧಾನಪರಿಷತ್ ಸದಸ್ಯರಾದ ಕೆ.ಶಿವಕುಮಾರ್, ರಘು ಆರ್. ಕೌಟಿಲ್ಯ, ಕೆ.ವಿವೇಕಾನಂದ, ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಗೋವಿಂದರಾಜ್, ದಿನೇಶ್ ಗೂಳಿಗೌಡ, ಬಸನಗೌಡ ಬಾದರ್ಲಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್ಕುಮಾರ್, ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಎಡಿಸಿ ಆರ್. ಐಶ್ವರ್ಯಾ ಪಾಲ್ಗೊಂಡಿದ್ದರು.ದಸರಾ ಲೈವ್ ವೀಕ್ಷಿಸಿದಸರಾ ಉದ್ಘಾಟನೆಗೆ ಸಿದ್ಧತೆ: ಪೂಜೆಯ ವೇಳೆ ಮುರಿದು ಬಿದ್ದ ನಂದಿ ಧ್ವಜಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ನಡೆಯುತ್ತಿದ್ದ ವೇಳೆ, ಪೂಜೆಗೆಂದು ತರಲಾಗಿದ್ದ ಎರಡು ನಂದಿ ಧ್ವಜಗಳ ಪೈಕಿ ಒಂದು ಮುರಿದುಬಿದ್ದಿದೆ.ದಸರಾ ಉದ್ಘಾಟನೆಗೆ ಸಿದ್ಧತೆ: ಪೂಜೆಯ ವೇಳೆ ಮುರಿದು ಬಿದ್ದ ನಂದಿ ಧ್ವಜ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ವಂದೇಮಾತರಂದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ವಂದೇಮಾತರಂ ಹಾಡಲಾಯಿತು. ನಾಡಗೀತೆಯನ್ನು ನಂತರ ಹಾರಿಸಲಾಯಿತು. ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಇಂದು (ಭಾನುವಾರ) ವಿಧ್ಯುಕ್ತ ಚಾಲನೆ ದೊರೆಯಿತು.