Fact Check: ವಿದ್ಯಾರ್ಥಿಗಳು ತಪ್ಪಿತಸ್ದರೆಂದು ಹೇಳಲು ಪೊಲೀಸ್ಗೆ ಒತ್ತಡ ಸುಳ್ಳು
ದೆಹಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ತಪ್ಪಿತಸ್ಥರು ಎಂದು ಸುಳ್ಳು ಹೇಳುವಂತೆ ಒತ್ತಡ ಹಾಕುತ್ತಿದ್ದಾರೆ. ಹಾಗಾಗಿ, ತಾವು ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ರಾಜೀನಾಮೆ ನೀಡುತ್ತಿರುವುದಾಗಿ ದೆಹಲಿಯ ಡಿಸಿಪಿ ಸುಮಿತ್ ಝಾ ಹೇಳಿದ್ದಾರೆ ಎನ್ನಲಾದ ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲ

ದೆಹಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ತಪ್ಪಿತಸ್ಥರು ಎಂದು ಸುಳ್ಳು ಹೇಳುವಂತೆ ಒತ್ತಡ ಹಾಕುತ್ತಿದ್ದಾರೆ. ಹಾಗಾಗಿ, ತಾವು ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ರಾಜೀನಾಮೆ ನೀಡುತ್ತಿರುವುದಾಗಿ ದೆಹಲಿಯ ಡಿಸಿಪಿ ಸುಮಿತ್ ಝಾ ಹೇಳಿದ್ದಾರೆ ಎನ್ನಲಾದ ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುತ್ತಿದೆ. ಆದರೆ, ಇದು ಸುಳ್ಳು. ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಿದಾಗ, ಈ ಪ್ರತಿಪಾದನೆ ನಿಜ ಎಂದು ಸಾಬೀತುಪಡಿಸುವ ವಿಶ್ವಾಸಾರ್ಹ ವರದಿಗಳು ಸಿಗಲಿಲ್ಲ. 47 ಸೆಕೆಂಡುಗಳ ವಿಡಿಯೊ ತುಣುಕಿನ ಕೀಫ್ರೇಮ್ ಒಂದನ್ನು ರಿವರ್ಸ್ ಸರ್ಚ್ ವಿಧಾನದಲ್ಲಿ ಹುಡುಕಿದಾಗ, ದೆಹಲಿ ಪೊಲೀಸ್ ಇಲಾಖೆಯ ‘ಎಕ್ಸ್’ ಖಾತೆಯಲ್ಲಿ ಜುಲೈ 23ರಂದು ಅಪ್ಲೋಡ್ ಮಾಡಲಾಗಿದ್ದ ಮೂಲ ವಿಡಿಯೊ ಸಿಕ್ಕಿತು. ಅದು, ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುತ್ತಿರುವ ಪಾಕಿಸ್ತಾನ ಮೂಲದ ಖಾತೆಗಳ ಬಗ್ಗೆ ಝಾ ಅವರು ಎಚ್ಚರಿಕೆ ನೀಡಿದ್ದ ವಿಡಿಯೊ. ಅನುಮಾನ ಬಂದು ಡೀಪ್ಫೇಕ್ ಒ ಮೀಟರ್ನ ಎಐ ಪತ್ತೆ ಟೂಲ್ಗಳನ್ನು ಬಳಸಿ ವಿಡಿಯೊವನ್ನು ಪರಿಶೀಲನೆಗೆ ಒಳಪಡಿಸಿದಾಗ, ಅವರ ಧ್ವನಿಯನ್ನು ತಿರುಚಿ ಸೃಷ್ಟಿ ಮಾಡಲಾದ ಡೀಪ್ಫೇಕ್ ವಿಡಿಯೊ ಇದು ಎಂಬುದು ದೃಢಪಟ್ಟಿತು.