Handloom Day | ʻನನ್ನೊಂದಿಗೆ ವಿಡಿಯೋ ಮಾಡಲು ಸಿದ್ಧರಾಗಿʼ – ಫ್ರೆಂಡ್ಸ್ಗೆ ನಮೋ ಮತ್ತೊಂದು ಸಂದೇಶ
ನವದೆಹಲಿ: ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಯುವಕರು ಕೈಮಗ್ಗ ಉಡುಪುಗಳನ್ನ ಧರಿಸಿ ʻಗೆಟ್ ರೆಡಿ ವಿತ್ ಮೀʼ (Get Ready With Me – GRWM) ಶೈಲಿಯ ವಿಡಿಯೋಗಳನ್ನ ತಯಾರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ. ಈ ಮೂಲಕ ಭಾರತದ ಶ್ರೀಮಂತ ಕೈಮಗ್ಗ ಪರಂಪರೆಯನ್ನ ಜಗತ್ತಿಗೆ ಪರಿಚಯಿಸುವುದರ ಜೊತೆಗೆ

ನವದೆಹಲಿ: ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಯುವಕರು ಕೈಮಗ್ಗ ಉಡುಪುಗಳನ್ನ ಧರಿಸಿ ʻಗೆಟ್ ರೆಡಿ ವಿತ್ ಮೀʼ (Get Ready With Me – GRWM) ಶೈಲಿಯ ವಿಡಿಯೋಗಳನ್ನ ತಯಾರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ. ಈ ಮೂಲಕ ಭಾರತದ ಶ್ರೀಮಂತ ಕೈಮಗ್ಗ ಪರಂಪರೆಯನ್ನ ಜಗತ್ತಿಗೆ ಪರಿಚಯಿಸುವುದರ ಜೊತೆಗೆ ನೇಕಾರರ ಕುಟುಂಬಗಳಿಗೆ ಬೆಂಬಲ ನೀಡಬಹುದೆಂದು ಅವರು ಹೇಳಿದ್ದಾರೆ. ಆ.7 ರಂದು ಆಚರಿಸಲಿರುವ ರಾಷ್ಟ್ರೀಯ ಕೈಮಗ್ಗ ದಿನದ (National Handloom Day) ಹಿನ್ನೆಲೆಯಲ್ಲಿ ಗುರುವಾರ ತಮ್ಮ ಇನ್ಸ್ಟಾಗ್ರಾಮ್ ರೀಲ್ನಲ್ಲಿ ಮಾತನಾಡಿದ ಮೋದಿ, 1905ರ ಆಗಸ್ಟ್ 7ರಂದು ಸ್ವದೇಶಿ ಚಳವಳಿಗೆ ಚಾಲನೆ ದೊರೆತ ಐತಿಹಾಸಿಕ ದಿನವನ್ನ ಸ್ಮರಿಸಿದರು. ಬ್ರಿಟಿಷರ ಆಳ್ವಿಕೆಗೆ ವಿರುದ್ಧವಾಗಿ ದೇಶದ ಜನರು ಒಂದಾಗಿ ಸ್ವದೇಶಿ ಚಳವಳಿಯನ್ನ ಆರಂಭಿಸಿದ್ದ ದಿನವೇ ಆಗಸ್ಟ್ 7 ಎಂದು ಅವರು ನೆನಪಿಸಿದರು. View this post on Instagram A post shared by Narendra Modi (@narendramodi) ಕಳೆದ ವಾರ ನೀವು ಸ್ನೇಹಿತರ ದಿನವನ್ನ ಅತ್ಯಂತ ಸಂಭ್ರಮದಿಂದ ಆಚರಿಸಿದ್ದೀರಿ. ಅದೇ ಉತ್ಸಾಹ ಮತ್ತು ಮನೋಭಾವದೊಂದಿಗೆ ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನೂ ಆಚರಿಸಿ ಎಂದು ಪ್ರಧಾನಿ ಮನವಿ ಮಾಡಿದರು. ನೇಕಾರರ ಪರಿಶ್ರಮಕ್ಕೆ ಗೌರವ ರಾಷ್ಟ್ರೀಯ ಕೈಮಗ್ಗ ದಿನವು ಭಾರತದ ನೇಕಾರರ ಕುಟುಂಬಗಳ ಪರಿಶ್ರಮವನ್ನ ಗುರುತಿಸಿ ಅವರಿಗೆ ಬೆಂಬಲ ನೀಡುವ ದಿನವಾಗಿದೆ. ನಮ್ಮ ನೇಕಾರರ ಕುಟುಂಬಗಳು ತಮ್ಮ ಕೈಗಳಿಂದ ಅದ್ಭುತವಾದ ಬಟ್ಟೆಗಳನ್ನ ನೇಯ್ದು ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನ ಉಳಿಸಿಕೊಂಡಿವೆ. ನಮ್ಮ ದೇಶದಲ್ಲಿ ಕೈಮಗ್ಗ ಉತ್ಪನ್ನಗಳ ವೈವಿಧ್ಯತೆ ನಿಜಕ್ಕೂ ಅದ್ಭುತವಾಗಿದೆ ಎಂದು ಅವರು ಹೇಳಿದರು. ಕೈಮಗ್ಗ ಉಡುಪಿನಲ್ಲಿ ‘GRWM’ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ ‘Get Ready With Me (GRWM)’ ಟ್ರೆಂಡ್ ಅನ್ನು ಉಲ್ಲೇಖಿಸಿದ ಪ್ರಧಾನಿ, ಕೈಮಗ್ಗ ಉಡುಪು ಧರಿಸಿ ವಿಡಿಯೋ ಮಾಡಿ ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಯುವಕರಿಗೆ ಮನವಿ ಮಾಡಿದರು. ʻನನ್ನದೊಂದು ಸಣ್ಣ ವಿನಂತಿ… ಕೈಮಗ್ಗ ಉಡುಪನ್ನು ಧರಿಸಿ ‘ಗೆಟ್ ರೆಡಿ ವಿತ್ ಮೀ’ (GRWM) ವಿಡಿಯೋ ಮಾಡಿ ಜಗತ್ತಿನೊಂದಿಗೆ ಹಂಚಿಕೊಳ್ಳಿ. ಇದರಿಂದ ಇತರರೂ ಕೈಮಗ್ಗ ಉತ್ಪನ್ನಗಳನ್ನ ಖರೀದಿಸಲು ಪ್ರೇರಣೆ ಪಡೆಯುತ್ತಾರೆ, ಇದರಿಂದ ನಮ್ಮ ಕರಕುಶಲಗಾರರಿಗೂ ಬೆಂಬಲ ದೊರೆಯುತ್ತದೆ ಎಂದು ಹೇಳಿದರು.