Heavy Rain: ಕೊಡಗಿನಲ್ಲಿ ಹೆಚ್ಚಿದ ಬಿರುಸಿನ ಗಾಳಿ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ಮಳೆ ಕೊಂಚ ನಿಯಂತ್ರಣಕ್ಕೆ ಬಂದಿದೆ. ಆದರೆ, ಗಾಳಿಯ ವೇಗ ಹೆಚ್ಚಾಗಿದೆ. ನಸುಕಿನಿಂದಲೂ ಮಡಿಕೇರಿ ಸೇರಿದಂತೆ ಜಿಲ್ಲೆಯಾದ್ಯಂತ ಬಿರುಸಿನ ಗಾಳಿ ಬೀಸುತ್ತಿದೆ.ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕೊಡಗಿನಲ್ಲೇ ಅಧಿಕ ಮಳೆ ಸುರಿದಿದೆ.ಭಾಗಮಂಡಲದಲ್ಲಿ 16.07 ಸ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ಮಳೆ ಕೊಂಚ ನಿಯಂತ್ರಣಕ್ಕೆ ಬಂದಿದೆ. ಆದರೆ, ಗಾಳಿಯ ವೇಗ ಹೆಚ್ಚಾಗಿದೆ. ನಸುಕಿನಿಂದಲೂ ಮಡಿಕೇರಿ ಸೇರಿದಂತೆ ಜಿಲ್ಲೆಯಾದ್ಯಂತ ಬಿರುಸಿನ ಗಾಳಿ ಬೀಸುತ್ತಿದೆ.ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕೊಡಗಿನಲ್ಲೇ ಅಧಿಕ ಮಳೆ ಸುರಿದಿದೆ.ಭಾಗಮಂಡಲದಲ್ಲಿ 16.07 ಸೆಂ.ಮೀನಷ್ಟು ಭಾರಿ ಮಳೆ ಸುರಿದಿದೆ. ಉಳಿದಂತೆ, ವಿರಾಜಪೇಟೆಯ ಅರ್ವತ್ತೊಕ್ಲು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 12.04 ಸೆಂ.ಮೀ, ಪೊನ್ನಪ್ಪಸಂತೆ 12, ಬಿರುನಾಣಿ 11, ಬಿ.ಶೆಟ್ಟಿಗೇರಿ 9, ಶಾಂತಳ್ಳಿ 8, ಸಂಪಾಜೆ 7, ನಾಪೋಕ್ಲು, ವಿರಾಜಪೇಟೆ, ಕೊಡ್ಲಿಪೇಟೆ 6, ಮಡಿಕೇರಿಯಲ್ಲಿ 5 ಸೆಂ.ಮೀನಷ್ಟು ಮಳೆಯಾಗಿದೆ.
Read the complete story at Prajavani