IAFನಿಂದ ವಿಶ್ವ ದಾಖಲೆ: ಲಡಾಖ್ನಲ್ಲಿ 13,629 ಅಡಿ ಎತ್ತರದಲ್ಲಿ IL-76MD ವಿಮಾನ ಲ್ಯಾಂಡಿಂಗ್
ನವದೆಹಲಿ: ಭಾರತೀಯ ವಾಯುಪಡೆಯ (IAF) IL-76MD ಭಾರೀ ಸರಕು ಸಾಗಣೆ ವಿಮಾನವು ಲಡಾಖ್ನ (Ladakh) 13,629 ಅಡಿ ಎತ್ತರದಲ್ಲಿರುವ ನ್ಯೋಮಾ ವಾಯುನೆಲೆಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ, ವಾಯುಯಾನ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಬರೆದಿದೆ. ಭಾರತೀಯ ವಾಯುಪಡೆಯು ತನ್ನ ಎಕ್ಸ್ ಪೋಸ್ಟ್ನಲ್ಲಿ ಈ ಸಾಧನೆಯನ್ನು ಪ್ರಕಟಿಸಿದೆ. ಇದರಲ್ಲಿ, ಅತಿ ಎತ್ತರದ ಪ್ರದೇಶದಲ್ಲಿರುವ

ನವದೆಹಲಿ: ಭಾರತೀಯ ವಾಯುಪಡೆಯ (IAF) IL-76MD ಭಾರೀ ಸರಕು ಸಾಗಣೆ ವಿಮಾನವು ಲಡಾಖ್ನ (Ladakh) 13,629 ಅಡಿ ಎತ್ತರದಲ್ಲಿರುವ ನ್ಯೋಮಾ ವಾಯುನೆಲೆಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ, ವಾಯುಯಾನ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಬರೆದಿದೆ. ಭಾರತೀಯ ವಾಯುಪಡೆಯು ತನ್ನ ಎಕ್ಸ್ ಪೋಸ್ಟ್ನಲ್ಲಿ ಈ ಸಾಧನೆಯನ್ನು ಪ್ರಕಟಿಸಿದೆ. ಇದರಲ್ಲಿ, ಅತಿ ಎತ್ತರದ ಪ್ರದೇಶದಲ್ಲಿರುವ ವಾಯುನೆಲೆಯಲ್ಲಿನ ವಿಮಾನದ ಛಾಯಾಚಿತ್ರಗಳು ಮತ್ತು ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಜಗತ್ತಿನಾದ್ಯಂತ IL-76MD ವಿಮಾನವೊಂದು ಇಳಿದಿರುವ ಅತ್ಯಂತ ಎತ್ತರದ ಸ್ಥಳ ಇದಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: 12 ವರ್ಷಗಳಲ್ಲಿ ಮೋದಿ ಸರ್ಕಾರದಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಭಾರೀ ಡ್ಯಾಮೇಜ್: ಸೋನಿಯಾ ಗಾಂಧಿ ‘13,629 ಅಡಿ. ವಾಯುಯಾನ ಇತಿಹಾಸದಲ್ಲಿ ಒಂದು ಹೊಸ ಎತ್ತರ’ ಎಂದು ಭಾರತೀಯ ವಾಯುಪಡೆಯು ತನ್ನ ಪೋಸ್ಟ್ನಲ್ಲಿ ತಿಳಿಸಿದೆ. ಇದು ವಿಮಾನದ ಸಾಮರ್ಥ್ಯ ಮತ್ತು ಅದರ ಸಿಬ್ಬಂದಿಯ ಪರಿಣತಿಯನ್ನು ತೋರಿಸುವ ಒಂದು ಗಮನಾರ್ಹ ನಿದರ್ಶನವಾಗಿದೆ ಎಂದು ಐಎಎಫ್ ಬಣ್ಣಿಸಿದೆ. 13,629 FEET. A NEW HEIGHT IN AVIATION HISTORY. An Indian Air Force IL-76MD has scripted history with a successful landing at Nyoma, marking the highest-altitude landing ever achieved by the aircraft anywhere in the world. A remarkable demonstration of the aircraft’s enduring capability, backed by the exceptional skill, precision, and professionalism of its crew. A milestone that reinforces India’s strategic airlift capability. Pushing boundaries. Redefining limits. Making history. #IndianAirForce #IAF #Nyoma #AviationHistory #IndianDefence @DefenceMinIndia @SpokespersonMoD @HQ_IDS_India @adgpi @indiannavy @CareerinIAF @air_veterans — Indian Air Force (@IAF_MCC) November 7, 2026 ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಯ ಕೌಶಲ, ನಿಖರತೆ ಮತ್ತು ವೃತ್ತಿಪರತೆಯನ್ನು ವಾಯುಪಡೆ ಶ್ಲಾಘಿಸಿದೆ. ಈ ಮಹತ್ವದ ಮೈಲಿಗಲ್ಲು ಭಾರತದ ಕಾರ್ಯತಂತ್ರದ ವೈಮಾನಿಕ ಸಾಗಣೆ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಕರ್ನಾಟಕ ಸೇರಿ ಐದು ದಕ್ಷಿಣ ರಾಜ್ಯಗಳಿಗೆ ಹೆಚ್ಚು ಭಾರತ್ ರೈಸ್: ಜೋಶಿ ಮಾಹಿತಿ ಪೂರ್ವ ಲಡಾಖ್ನಲ್ಲಿರುವ ನ್ಯೋಮಾ, ಚೀನಾದೊಂದಿಗಿನ ‘ಲೈನ್ ಆಫ್ ಆಕ್ಚುವಲ್ ಕಂಟ್ರೋಲ್’ (LAC) ಗೆ ಹತ್ತಿರದಲ್ಲಿರುವುದರಿಂದ ಆಯಕಟ್ಟಿನ ದೃಷ್ಟಿಯಿಂದ ಮಹತ್ವದ್ದಾಗಿದೆ. ಈ ವಾಯುನೆಲೆಯು ಅತ್ಯಂತ ಎತ್ತರದ ಪ್ರದೇಶದಲ್ಲಿರುವುದರಿಂದ, ಇಲ್ಲಿ ವಿಮಾನ ಕಾರ್ಯಾಚರಣೆಗಳನ್ನು ನಡೆಸುವುದು ಸವಾಲಿನ ಸಂಗತಿಯಾಗಿದೆ. ಇದಕ್ಕೆ ಎಚ್ಚರಿಕೆಯ ಯೋಜನೆ ಮತ್ತು ನಿಖರವಾದ ಅನುಷ್ಠಾನದ ಅಗತ್ಯವಿರುತ್ತದೆ. IL-76MDಯು ರಷ್ಯಾ ಮೂಲದ ನಾಲ್ಕು ಎಂಜಿನ್ಗಳನ್ನು ಹೊಂದಿರುವ ಭಾರೀ ಸಾರಿಗೆ ವಿಮಾನವಾಗಿದೆ. ಇದನ್ನು ಸೈನಿಕರು, ಉಪಕರಣಗಳು ಮತ್ತು ಸರಕುಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ. ಭಾರತೀಯ ವಾಯುಪಡೆಯು ಸಿಬ್ಬಂದಿ ಹಾಗೂ ಅಗತ್ಯ ಸಾಮಗ್ರಿಗಳನ್ನು ದೂರದ ಮತ್ತು ಆಯಕಟ್ಟಿನ ದೃಷ್ಟಿಯಿಂದ ಪ್ರಮುಖವಾದ ಸ್ಥಳಗಳಿಗೆ ಸಾಗಿಸುವ ಸಾಮರ್ಥ್ಯದಲ್ಲಿ ಈ ವಿಮಾನವು ಪ್ರಮುಖ ಪಾತ್ರ ವಹಿಸುತ್ತದೆ.