IFS Positng: ನಾಗರಹೊಳೆ, ಶಿವಮೊಗ್ಗ, ಮಡಿಕೇರಿ, ತುಮಕೂರಿಗೆ ನೂತನ ಡಿಸಿಎಫ್
ಬೆಂಗಳೂರು: ಕರ್ನಾಟಕ ಸರ್ಕಾರವು ಹಲವು ಐಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಪ್ರಸನ್ನ ಕೃಷ್ಣ ಪಟಗಾರ ಅವರನ್ನು ಮಡಿಕೇರಿಯ ಸಂಶೋಧನಾ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾವನದ ನಿರ್ದೇಶಕರಾಗಿದ್ದ ಪಿ.ಎ.ಸೀಮಾ ಅವರನ್ನು ತುಮಕ

ಬೆಂಗಳೂರು: ಕರ್ನಾಟಕ ಸರ್ಕಾರವು ಹಲವು ಐಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಪ್ರಸನ್ನ ಕೃಷ್ಣ ಪಟಗಾರ ಅವರನ್ನು ಮಡಿಕೇರಿಯ ಸಂಶೋಧನಾ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾವನದ ನಿರ್ದೇಶಕರಾಗಿದ್ದ ಪಿ.ಎ.ಸೀಮಾ ಅವರನ್ನು ತುಮಕೂರು ಉಪಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗ ಮಾಡಲಾಗಿದೆ.ಬಿಳಿಗಿರಿರಂಗನಬೆಟ್ಟ ಹುಲಿ ಧಾಮದ ಉಪಸಂರಕ್ಷಣಾಧಿಕಾರಿಯಾಗಿದ್ದು ಸದ್ಯ ಹುದ್ದೆ ನಿರೀಕ್ಷೆಯಲ್ಲಿದ್ದ ಬಿ.ಎಸ್.ಶ್ರೀಪತಿ ಅವರನ್ನು ಚಿಕ್ಕಮಗಳೂರು ಕಾರ್ಯಯೋಜನೆ ಉಪಸಂರಕ್ಷಣಾಧಿಕಾರಿಯಾಗಿ ನೇಮಿಸಲಾಗಿದೆ.ಹುದ್ದೆ ನಿರೀಕ್ಷಣೆಯಲ್ಲಿದ್ದ ಎನ್.ರಮೇಶ್ ಬಾಬು ಅವರನ್ನು ಬೆಂಗಳೂರಿನ ಬಜೆಟ್ ಹಾಗೂ ಆಡಿಟ್ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ.ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಸೌರಭ್ ಕುಮಾರ್ ಅವರನ್ನು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.ಚಿತ್ರದುರ್ಗ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಕೆ.ಹರೀಶ್ ಅವರನ್ನು ಹಾಸನ ಉಪಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ.ಶಿವಮೊಗ್ಗದ ಕೆಎಫ್ ಡಿಸಿ ವಿಭಾಗೀಯ ವ್ಯವಸ್ಥಾಪಕರಾಗಿದ್ದ ಎನ್.ಎಸ್.ರಾಘವೇಂದ್ರ ರಾವ್ ಅವರನ್ನು ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.ಮಡಿಕೇರಿ ವಿಚಕ್ಷಣಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಕೆ.ಪಿ.ಗೋಪಾಲ್ ಅವರನ್ನು ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನೇಮಕ ಮಾಡಲಾಗಿದೆ. ಕೊಪ್ಪಳ ಜಿಲ್ಲೆ ಮುನಿರಾಬಾದ್ ನ ತುಂಗಭದ್ರಾ ಕಾಡಾ ಉಪ ಆಡಳಿತಾಧಿಕಾರಿಯಾಗಿದ್ದ ಎಂ.ಸಿ.ಭಾಗ್ಯಲಕ್ಷ್ಮಿ ಅವರನ್ನು ಶಿವಮೊಗ್ಗದ ಕೆಎಫ್ಡಿಸಿ ಪ್ರಾದೇಶಿಕ ವ್ಯವಸ್ಥಾಪಕರನ್ನಾಗಿ ನೇಮಕ ಮಾಡಲಾಗಿದೆ. IAS Transfer: ಶಿಕ್ಷಣ, ಪಂಚಾಯತ್ ರಾಜ್, ಬೆಂಗಳೂರು ಪಾಲಿಕೆಗೆ ಹೊಸ ಆಯುಕ್ತರುIAS Transfer: ಐಎಎಸ್ ವರ್ಗಾವಣೆ, ತೋಟಗಾರಿಕೆ, ಸಕ್ಕರೆ ಇಲಾಖೆಗೆ ಹೊಸ ನಿರ್ದೇಶಕರುIAS Posting: ಐಎಎಸ್ ವರ್ಗಾವಣೆ, ಪಾಂಡೆ ಆರ್ಡಿಪಿಆರ್ ಇಲಾಖೆ ಪ್ರಧಾನಕಾರ್ಯದರ್ಶಿIAS Posting: ಐಎಎಸ್ ಅಧಿಕಾರಿಗಳ ವರ್ಗ, ತ್ರಿಲೋಕಚಂದ್ರ ಕೃಷಿ ಇಲಾಖೆ ಕಾರ್ಯದರ್ಶಿ