IND vs ZIM| ಸೂರ್ಯವಂಶಿ ಸ್ಪೋಟಕ ಆಟ; ಜಿಂಬಾಬ್ವೆಗೆ 193 ರನ್ ಗುರಿ
ಹರಾರೆ: ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಪೋಟಕ ಅರ್ಧಶತಕದ ನೆರವಿನಿಂದ ಭಾರತ ತಂಡವು 20 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು 20 ರನ್ ಗಳಿಸಿದ್ದ ವೇಳೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ(2 ರನ್) ವಿಕೆಟ್ ಕಳೆದುಕೊಂಡಿತು.ಆರಂಭದಲ್ಲಿ ಎಂದಿಗಿಂತ ಸ್ವಲ್ಪ ನಿಧಾನಗತಿಯ ಆಟ ಆಡ

ಹರಾರೆ: ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಪೋಟಕ ಅರ್ಧಶತಕದ ನೆರವಿನಿಂದ ಭಾರತ ತಂಡವು 20 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು 20 ರನ್ ಗಳಿಸಿದ್ದ ವೇಳೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ(2 ರನ್) ವಿಕೆಟ್ ಕಳೆದುಕೊಂಡಿತು.ಆರಂಭದಲ್ಲಿ ಎಂದಿಗಿಂತ ಸ್ವಲ್ಪ ನಿಧಾನಗತಿಯ ಆಟ ಆಡಿದ ವೈಭವ್ ಸೂರ್ಯವಂಶಿ, 49 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ 81 ರನ್ ಗಳಿಸಿದರು. ಇಶಾನ್ ಕಿಶನ್(29 ರನ್), ಶ್ರೇಯಸ್ ಅಯ್ಯರ್(27 ರನ್) ಉಪಯುಕ್ತ ಆಟವಾಡಿದರು. ಡೆತ್ ಓವರ್ನಲ್ಲಿ ರಿಂಕು ಸಿಂಗ್ ಅವರು 14 ಎಸೆತಗಳಲ್ಲಿ 25 ರನ್ಗಳಿಸುವ ಮೂಲಕ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು. ತಿಲಕ್ ವರ್ಮಾ ಅಜೇಯ 11 ರನ್ ಗಳಿಸಿದರು.ಜಿಂಬಾಬ್ವೆ ಪರ ಬ್ರಾಡ್ ಇವಾನ್ಸ್ 2 ವಿಕೆಟ್ ಹಾಗೂ ಸಿಕಂದರ್ ರಝಾ, ವೆಸ್ಲಿ ಮಾಧೆವೆರೆ ಮತ್ತು ಬ್ಲೆಸಿಂಗ್ ಮುಝರಬಾನಿ ತಲಾ 1 ವಿಕೆಟ್ ಪಡೆದರು. ಜಿಂಬಾಬ್ವೆ ತಂಡದ ಗೆಲುವಿಗೆ 193 ರನ್ಗಳ ಅಗತ್ಯವಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸುಲಭ ಜಯ ಸಾಧಿಸಿರುವ ಭಾರತ ತಂಡವು ಸರಣಿಯನ್ನು ಕ್ಲೀನ್ಸ್ಲೀಪ್ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದೆ.T20: ಭಾರತಕ್ಕೆ 90 ರನ್ಗಳ ಭರ್ಜರಿ ಜಯ; ಜಿಂಬಾಬ್ವೆ ವಿರುದ್ಧ ಸರಣಿ ಕೈವಶ