IOCLನಲ್ಲಿ 1,626 ಅಪ್ರೆಂಟಿಸ್ ನೇಮಕಾತಿ: ಪಿಯುಸಿ, ಐಟಿಐ, ಪದವೀಧರರಿಗೆ ಅವಕಾಶ
ಭಾರತದ ಪ್ರಮುಖ ತೈಲ ಕಂಪನಿ ‘ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್’ (ಐಓಸಿಎಲ್) 1,626 ಟ್ರೇಡ್ ಅಪ್ರೆಂಟಿಸ್, ಟೆಕ್ನಿಷಿಯನ್ ಮತ್ತು ಗ್ರಾಜುಯೇಟ್ ಸೇರಿ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 28 ಕೊನೆಯ ದಿನಾಂಕವಾಗಿರುತ್ತದೆ.ಗುವಾಹಟಿ, ಬೊಂಗ್ರೆಗಾಂವ್, ಗುಜರಾತ್ ಮತ್ತು&nbs

ಭಾರತದ ಪ್ರಮುಖ ತೈಲ ಕಂಪನಿ ‘ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್’ (ಐಓಸಿಎಲ್) 1,626 ಟ್ರೇಡ್ ಅಪ್ರೆಂಟಿಸ್, ಟೆಕ್ನಿಷಿಯನ್ ಮತ್ತು ಗ್ರಾಜುಯೇಟ್ ಸೇರಿ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 28 ಕೊನೆಯ ದಿನಾಂಕವಾಗಿರುತ್ತದೆ.ಗುವಾಹಟಿ, ಬೊಂಗ್ರೆಗಾಂವ್, ಗುಜರಾತ್ ಮತ್ತು ಪ್ಯಾರದೀಪ್ ರಿಫೈನರಿ ಯೂನಿಟ್ನಲ್ಲಿ ಹುದ್ದೆಗಳು ಖಾಲಿ ಇವೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗಾದರೆ, ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು, ವಯೋಮಿತಿ ಸೇರಿ ಇತರೆ ಮಾಹಿತಿ ಇಲ್ಲಿದೆ.ವಿದ್ಯಾಭ್ಯಾಸಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪಿಯುಸಿ, ಐಟಿಐ, ಡಿಪ್ಲೊಮಾ ಅಥವಾ ಯಾವುದೇ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.ವಯೋಮಿತಿ18 ರಿಂದ 24 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಕಾನೂನು ಬದ್ಧವಾಗಿ ವರ್ಗವಾರು ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ.ಅರ್ಜಿ ಸಲ್ಲಿಸುವುದು ಹೇಗೆ? ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ನ ಅಧಿಕೃತ ವೆಬ್ಸೈಟ್ https://iocl.com/apprenticeships ಗೆ ಭೇಟಿ ನೀಡಿ. 'Careers' ವಿಭಾಗದಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅಗತ್ಯ ದಾಖಲೆಗಳುಎಸ್ಎಸ್ಎಲ್ಸಿ ಅಂಕಪಟ್ಟಿಶೈಕ್ಷಣಿಕ ಅಂಕಪಟ್ಟಿಆಧಾರ್ ಕಾರ್ಡ್ಪಾನ್ ಕಾರ್ಡ್ಜಾತಿ ಪ್ರಮಾಣಪತ್ರEWS ಪ್ರಮಾಣಪತ್ರ (ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ)ಅಂಗವಿಕಲತೆಯ ಪ್ರಮಾಣಪತ್ರ (ಅನ್ವಯಿಸುವ ಅಭ್ಯರ್ಥಿಗಳಿಗೆ ಮಾತ್ರ)ಆಯ್ಕೆ ಪ್ರಕ್ರಿಯೆಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.