Kannada Film: ‘ಒರಿಜಿನಲ್ ಮಾನ್ಸ್ಟರ್‘ ಸೇರಿದ ಶ್ರೀರಾಜನ್
ಹಲವು ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆ ವೀಕ್ಷಕರ ಗಮನಸೆಳೆದಿರುವ ಶ್ರೀರಾಜನ್ ಈಗ ಆರ್. ಚಂದ್ರು ನಿರ್ದೇಶನದ ‘ಒರಿಜಿನಲ್ ಮಾನ್ಸ್ಟರ್ (ಒ.ಜಿ)’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.ಚಿತ್ರತಂಡವು ಶ್ರೀರಾಜನ್ ಅವರ ವಿಭಿನ್ನ ಲುಕ್ನ ಪೋಸ್ಟರ್ ಬಿಡುಗಡೆ ಮಾಡಿ ಜನ್ಮದಿನದ ಶುಭಾಶಯ ಕೋರಿದೆ. ಶಿವರಾಜಕುಮಾರ್ ನಾಯಕನಾಗಿರುವ ಈ ಚಿತ್ರದ ಎರಡನೇ ಹಂತದ ಚಿ

ಹಲವು ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆ ವೀಕ್ಷಕರ ಗಮನಸೆಳೆದಿರುವ ಶ್ರೀರಾಜನ್ ಈಗ ಆರ್. ಚಂದ್ರು ನಿರ್ದೇಶನದ ‘ಒರಿಜಿನಲ್ ಮಾನ್ಸ್ಟರ್ (ಒ.ಜಿ)’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.ಚಿತ್ರತಂಡವು ಶ್ರೀರಾಜನ್ ಅವರ ವಿಭಿನ್ನ ಲುಕ್ನ ಪೋಸ್ಟರ್ ಬಿಡುಗಡೆ ಮಾಡಿ ಜನ್ಮದಿನದ ಶುಭಾಶಯ ಕೋರಿದೆ. ಶಿವರಾಜಕುಮಾರ್ ನಾಯಕನಾಗಿರುವ ಈ ಚಿತ್ರದ ಎರಡನೇ ಹಂತದ ಚಿತ್ರೀಕರಣ ಸದ್ಯ ನಡೆಯುತ್ತಿದೆ.ಆರ್.ಸಿ. ಸ್ಟುಡಿಯೋಸ್ ಬ್ಯಾನರ್ನಡಿ ಯಮುನಾ ಚಂದ್ರು ನಿರ್ಮಿಸುತ್ತಿರುವ ಈ ಚಿತ್ರ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬರುತ್ತಿದೆ. ಸುನೀಲ್, ಯೋಗಿಬಾಬು ಹಾಗೂ ವಸಿಷ್ಠ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.‘ಮಹಾಮಾಯಿ’, ‘ಕಾದಂಬರಿ’, ‘ಕನ್ಯಾದಾನ’, ‘ಅಪ್ಪ’ ಸೇರಿ ಹಲವು ಧಾರಾವಾಹಿಗಳಲ್ಲಿ ಶ್ರೀರಾಜನ್ ನಟಿಸಿದ್ದಾರೆ. ಅವರು ಅಭಿನಯಿಸಿರುವ ‘ಅನಾಥ ನಿಲಯ’ ಧಾರಾವಾಹಿ ಸದ್ಯ ಪ್ರಸಾರವಾಗುತ್ತಿದೆ. ‘ಅಭಿ’, ‘ಮೆಜೆಸ್ಟಿಕ್’ ಹಾಗೂ ‘ಚಿಗುರಿದ ಕನಸು’ ಸೇರಿದಂತೆ ಹಲವು ಚಿತ್ರಗಳಲ್ಲೂ ಅವರು ನಟಿಸಿದ್ದಾರೆ.261028-51-1249806107
Read the complete story at Prajavani