Karnataka Cabinet Expansion Live Update| ಮಂಕಾಳ ವೈದ್ಯ ಔಟ್, ಎಸ್ ಎಸ್. ಮಲ್ಲಿಕಾರ್ಜುನ್ ಎಂಟ್ರಿ
10 min agoAugust 3, 2026 1:39 pm ಮಂಕಾಳ ವೈದ್ಯ ಔಟ್, ಎಸ್ ಎಸ್. ಮಲ್ಲಿಕಾರ್ಜುನ್ ಎಂಟ್ರಿ ಡಿಕೆ ಶಿವಕುಮಾರ್ ಸಂಪುಟದಲ್ಲಿ ಕೊನೆ ಕ್ಷಣದಲ್ಲಿ ಬದಲಾವಣೆಯಾಗಿದೆ. ಎಐಸಿಸಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಮಂಕಾಳ ವೈದ್ಯ ಅವರ ಹೆಸರಿತ್ತು. ಆದರೆ ಈಗ ದಾವಣಗೆರೆ ಶಾಸಕ ಮಲ್ಲಿಕಾರ್ಜುನ್ ಹೆಸರು ಹೊಸದಾಗಿ ಎಂಟ್ರಿಯಾಗಿದೆ. 27 min agoAugust 3, 2026 1:23 pm

10 min agoAugust 3, 2026 1:39 pm ಮಂಕಾಳ ವೈದ್ಯ ಔಟ್, ಎಸ್ ಎಸ್. ಮಲ್ಲಿಕಾರ್ಜುನ್ ಎಂಟ್ರಿ ಡಿಕೆ ಶಿವಕುಮಾರ್ ಸಂಪುಟದಲ್ಲಿ ಕೊನೆ ಕ್ಷಣದಲ್ಲಿ ಬದಲಾವಣೆಯಾಗಿದೆ. ಎಐಸಿಸಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಮಂಕಾಳ ವೈದ್ಯ ಅವರ ಹೆಸರಿತ್ತು. ಆದರೆ ಈಗ ದಾವಣಗೆರೆ ಶಾಸಕ ಮಲ್ಲಿಕಾರ್ಜುನ್ ಹೆಸರು ಹೊಸದಾಗಿ ಎಂಟ್ರಿಯಾಗಿದೆ. 27 min agoAugust 3, 2026 1:23 pm ಬೇರೆಯವರಿಗೂ ಅವಕಾಶ ಸಿಗಲಿ ಎಂದ ದಿನೇಶ್ ಗುಂಡೂರಾವ್ ಸಚಿವ ಸ್ಥಾನದಲ್ಲಿ ದಿನೇಶ್ ಗುಂಡೂರಾವ್ ಹೆಸರು ಕೈ ಬಿಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್ ಅವರು, ನನಗೆ ಏನಾಗಿದೆ ಎಂದು ಗೊತ್ತಿಲ್ಲ. ನಾನು ನಿರೀಕ್ಷೆ ಇಟ್ಟಿರಲಿಲ್ಲ ಮಂತ್ರಿ ಮಂಡಲ ರಚನೆ ಆಗಿರೋದು ಖುಷಿ ವಿಚಾರ. ನಾನು ಮೂರು ವರ್ಷ ಸಚಿವನಾಗಿದ್ದೆ. ಬೇರೆಯವರಿಗೂ ಅವಕಾಶ ಸಿಗಲಿ. ಅನುಭವ ಆಗಲಿ ಎಂದು ನಗುಮೊಗದಲ್ಲೇ ಉತ್ತರಿಸಿದ್ದಾರೆ. 44 min agoAugust 3, 2026 1:05 pm ಜಿ.ಎಸ್ ಪಾಟೀಲ್ ಬೇಸರ ನಾನು ಸಚಿವ ಸ್ಥಾನದ ಅಕಾಂಕ್ಷಿಯಾಗಿದ್ದೆ. ನನಗೆ ಯಾರೂ ಸ್ಪೀಕರ್ ಅಂತ ಹೇಳಿಲ್ಲ. ಸ್ಪೀಕರ್ ಹುದ್ದೆ ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 53 min agoAugust 3, 2026 12:56 pm ಸಚಿವ ಸ್ಥಾನ ದೊರೆತಿದ್ದಕ್ಕೆ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಸಂತಸ ಸಚಿವ ಸ್ಥಾನ ದೊರೆತಿದ್ದಕ್ಕೆ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಸಂಜೆ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನನಗೆ ವಿಶ್ವಾಸ ಇತ್ತು, ಅದರಂತೆ ಅವಕಾಶ ಸಿಕ್ಕಿದೆ. ಯಾವ ಖಾತೆ ಸಿಗುತ್ತೆ ಎಂಬ ಬಗ್ಗೆ ನಿರೀಕ್ಷೆ ಇಲ್ಲ. ಯಾವುದೇ ಜವಬ್ದಾರಿ ಕೊಟ್ಟರು ನಿರ್ವಹಿಸುತ್ತೇನೆ. ಅವಕಾಶ ಕೊಟ್ಟ, ಸಿಎಂ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಸೋನಿಯಾಗಾಂಧಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. 59 min agoAugust 3, 2026 12:50 pm ಇಂದು ಸಂಜೆ ನೂತನ ಸಚಿವರ ಪ್ರಮಾಣ ವಚನ ನೂತನ ಸಂಪುಟ ಸದಸ್ಯರ ಪ್ರಮಾಣ ಸ್ವೀಕಾರ ಸಮಾರಂಭ ಇಂದು ಸಂಜೆ 4:05 ಕ್ಕೆ ಲೋಕಭವನದ ಆವರಣದಲ್ಲಿ ನಡೆಯಲಿದೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅಂತಿಮ ತಯಾರಿ ನಡೆಯುತ್ತಿದೆ. ಹೊರ ಭಾಗದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. 1 hr 8 min agoAugust 3, 2026 12:41 pm ಅಜ್ಜಯ್ಯನ ಮಠಕ್ಕೆ ಸಿಎಂ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ನೀಡಿದ ಬೆನ್ನಲ್ಲೇ ಬೆಂಗಳೂರಿನ ನಾಗರಬಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ (ನೊಣವಿನಕೆರೆ ಅಜ್ಜಯ್ಯ ಮಠ) ಆಗಮಿಸಿದ ಸಿಎಂ ಡಿಕೆ ಶಿವಕುಮಾರ್ 1 hr 15 min agoAugust 3, 2026 12:34 pm ನನಗೆ ಪಕ್ಷ ದೊಡ್ಡದು – ಜಮೀರ್ ಸಿದ್ದರಾಮಯ್ಯ ಸಂಪುಟದಲ್ಲಿ ನನಗೆ ಮಂತ್ರಿ ಸ್ಥಾನ ಸಿಕ್ಕಿತ್ತು. ಈ ಅವಧಿಯಲ್ಲಿ ಮಂತ್ರಿ ಸ್ಥಾನ ಸಿಗದಿದ್ದರೂ ಪಕ್ಷ ಸಂಘಟನೆ ಮಾಡು ಎಂದು ಹೇಳಿದರೂ ನಾನು ಆ ಕೆಲಸಕ್ಕೂ ಸಿದ್ದನಿದ್ದೆ. ಸಚಿವೆ ಸ್ಥಾನದ ನಿರೀಕ್ಷೆಯಲ್ಲಿದ್ದ ಲಕ್ಷ್ಮೀ ಹೆಬ್ಬಾಳ್ಕರ್ಗೆ ಶಾಕ್ 1 hr 22 min agoAugust 3, 2026 12:27 pm ವಿಶ್ವಾಸ ಇತ್ತು: ಟಿ ರಘುಮೂರ್ತಿ ಮಂತ್ರಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಅದರಂತೆ ಈಗ ಅವಕಾಶ ಸಿಕ್ಕಿದೆ. ಖಾತೆಯ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ. ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸುತ್ತೇನೆ. 1 hr 28 min agoAugust 3, 2026 12:21 pm ಡಿಕೆಶಿ ಸಂಪುಟ ಜಾತಿವಾರು ಲೆಕ್ಕಾಚಾರ ಒಕ್ಕಲಿಗರು – 5ಲಿಂಗಾಯತ -6ಕುರುಬ – 3ವಾಲ್ಮೀಕಿ – 3ಮುಸ್ಲಿಂ – 3ಕ್ರೈಸ್ತ -1ಪರಿಶಿಷ್ಟ ಜಾತಿ ಎಡ ಮತ್ತು ಬಲ – 7ಉಪ್ಪಾರ -1ಮರಾಠ – 1ಈಡಿಗ – 1ಮೊಗವೀರ – 1ರಜಪೂತ -1ರೆಡ್ಡಿ-1 2 hr 32 min agoAugust 3, 2026 12:18 pm ಮೈಸೂರು ಭಾಗಕ್ಕೆ ಅನ್ಯಾಯ: ತನ್ವೀರ್ ಸೇಠ್ ಯಾವ ಮಾನದಂಡ ಮೇಲೆ ಸಚಿವ ಸಂಪುಟ ರಚನೆ ಆಗಿದೆ ಗೊತ್ತಿಲ್ಲ. ಮೈಸೂರು ಭಾಗಕ್ಕೆ ಸಿಗಬೇಕಾದ ಶಕ್ತಿ ಸಿಕ್ಕಿಲ್ಲ. ನನಗೆ ಸಿಗಬೇಕಾದ ಗೌರವ ಸಿಗಲಿಲ್ಲ ನಿರಾಸೆಯಾಗಿದೆ. ರಾಹುಲ್ ಗಾಂಧಿ ವಿರುದ್ಧವಾಗಿ ಮಾತನಾಡಿದರು ಎಂಬ ಕಾರಣಕ್ಕೆ ರಾಜಣ್ಣ ಅವರ ರಾಜೀನಾಮೆ ಪಡೆಯಲಾಯಿತು. ಪಕ್ಷ ವಿರೋಧಿ ಚಟುವಟಿಕೆ ಬಹಿರಂಗವಾಗಿ ನಡೆಸಿದವರಿಗೆ ಸಚಿವ ಸ್ಥಾನ ಸಿಕ್ಕಿದೆ. 2 hr 39 min agoAugust 3, 2026 12:11 pm ಜವಾಬ್ದಾರಿ ಹೆಚ್ಚಾಗಿದೆ: ಮಾಗಡಿ ಬಾಲಕೃಷ್ಣ ನನ್ನ ಮೇಲೆ ವಿಶ್ವಾಸ ಇಟ್ಟು ಜವಾಬ್ದಾರಿ ಕೊಟ್ಟಿದ್ದೀರಿ. ಈ ಜವಾಬ್ದಾರಿಯನ್ನ ಉತ್ತಮವಾಗಿ ನಿರ್ವಹಿಸುತ್ತೇನೆ. ಕ್ಷೇತ್ರದ ಜನತೆ ಐದು ಬಾರಿ ನನ್ನನ್ನ ಗೆಲ್ಲಿಸಿದ್ದು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಮಾಗಡಿ ರಂಗನಾಥಸ್ವಾಮಿ ಕೃಪೆಯುಂದ ಸಚಿವ ಸ್ಥಾನ ಸಿಕ್ಕಿದೆ. ಸಿಎಂ ಹಾಗೂ ಹೈಕಮಾಂಡ್ ನಾಯಕರಿಗೆ ಧನ್ಯವಾದ. 2 hr 43 min agoAugust 3, 2026 12:06 pm ಗೆದ್ದ ಜಮೀರ್ – ಕ್ಷಮಾಪಣೆಯೇ ವರವಾಯ್ತಾ? ದಾವಣಗೆರೆ ದಕ್ಷಿಣ ಉಪಚುನಾವಣೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಬಂದ ನಂತರ ಜಮೀರ್ ಅಹಮದ್ ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಇದಾದ ಬಳಿಕ ವೇಣುಗೋಪಾಲ್, ಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು ಜಮೀರ್ ಪರ ಬ್ಯಾಟಿಂಗ್ ಮಾಡಿದ್ದಾರೆ ಎನ್ನಲಾಗುತ್ತಿದೆ. 2 hr 47 min agoAugust 3, 2026 12:02 pm ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ: ಚಲುವರಾಯಸ್ವಾಮಿ ಮಂಡ್ಯ ಜಿಲ್ಲೆಯ ರೈತರು, ಕಬ್ಬು ಬೆಳೆಗಾರರು ಮತ್ತು ಜನರ ಆಶೀರ್ವಾದವೇ ಈ ಸ್ಥಾನಕ್ಕೆ ಕಾರಣ. ನನ್ನನ್ನು ಆಯ್ಕೆ ಮಾಡಿದ ಹಿಂದೆ ಮಂಡ್ಯ ಜಿಲ್ಲೆಯ ಜನತೆ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಕೊಟ್ಟ ಬೆಂಬಲವಿದೆ. ಅವರೆಲ್ಲರಿಗೂ ನನ್ನ ನಮನಗಳು. ಸಂಪುಟ ವಿಸ್ತರಣೆಯಲ್ಲಿ ನನಗೆ ಅವಕಾಶ ನೀಡಿದ ಕಾಂಗ್ರೆಸ್ ಹೈಕಮಾಂಡ್, ಸಿಎಂ ಮತ್ತು ಹಿರಿಯ ನಾಯಕರಿಗೆ ಹೃದಯಪೂರ್ವಕ ಧನ್ಯವಾದಗಳು 2 hr 59 min agoAugust 3, 2026 11:51 am ನಿರೀಕ್ಷೆ ಮಾಡಿದ್ದೆ: ರಿಜ್ವಾನ್ ಅರ್ಷದ್ ಅರ್ಧ ಗಂಟೆ ಮೊದಲು ಕರೆ ಮಾಡಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ದರಾಗಿ ಎಂದರು. ನಾನು ಮಂತ್ರಿ ಸ್ಥಾನದ ನಿರೀಕ್ಷೆ ಮಾಡಿದ್ದೆ. ನಮ್ಮ ಅಲ್ಪಸಂಖ್ಯಾತ ಸಮುದಾಯಕ್ಕೆ ಮೂರು ಮಂತ್ರಿಸ್ಥಾನ ಸಿಕ್ಕಂತಾಗಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಹೈಕಮಾಂಡ್ ಈ ಸ್ಥಾನಕೊಟ್ಟಿದೆ. ನಮಗೆ ಖಾತೆ ವಿಚಾರವಾಗಿ ಯಾವುದೇ ನಿರೀಕ್ಷೆ ಇಲ್ಲ. ನನಗೆ ಯಾವುದೇ ಖಾತೆಯದ್ರೂ ಪರವಾಗಿಲ್ಲ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಶೀರ್ವಾದ ಪಡೆಯುತ್ತೇನೆ 2 hr 8 min agoAugust 3, 2026 11:41 am ಗಾಯತ್ರಿ ಶಾಂತೇಗೌಡಗೆ ಜಾಕ್ಪಾಟ್ ಮಹಿಳಾ ಕೋಟಾದಲ್ಲಿ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳು ಚುನಾವಣೆಯಲ್ಲಿ ಬಿಜೆಪಿಯ ಎಂಕೆ ಪ್ರಾಣೇಶ್ ವಿರುದ್ಧ ಮರು ಮತ ಎಣಿಕೆಯಲ್ಲಿ ಗೆಲುವು ಪಡೆದಿದ್ದ ಗಾಯತ್ರಿ ಶಾಂತೇಗೌಡ ಈಗ ಮಂತ್ರಿ ಸ್ಥಾನ ನೀಡುವ ಮೂಲಕ ಹೈಕಮಾಂಡ್ ದೊಡ್ಡ ಗಿಫ್ಟ್ ನೀಡಿದೆ.