Karnataka Cauvery Protest Live Updates | ಕಾವೇರಿ ಕಿಚ್ಚು – KRS ಡ್ಯಾಮ್ ಬಳಿ ತೀವ್ರಗೊಂಡ ಪ್ರತಿಭಟನೆ
1 min agoJuly 31, 2026 1:19 pm ಕರ್ನಾಟಕ ಬಂದ್ಗೆ ಕರವೇ ನಾರಾಯಣ ಗೌಡರ ಬೆಂಬಲ ಇಲ್ಲ ಬಂದ್ಗೆ ಕರವೇ ಬೆಂಬಲ ಇಲ್ಲ. ಬಂದ್ನಲ್ಲಿ ಭಾಗವಹಿಸೋದಿಲ್ಲ. ಬಂದ್ ಬದಲಾಗಿ ದೆಹಲಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೆ ಸಿದ್ಧತೆ. ನಮ್ಮ ಕೂಗು ದೆಹಲಿಯ ದೊರೆಗಳಿಗೆ ಮುಟ್ಟಬೇಕು ಹಾಗಾಗಿ ದೆಹಲಿಯಲ್ಲಿ ಪ್ರತಿಭಟನೆ. ಕಾವೇರಿ ನಷ್ಟ ಆಗಿದೆ ಬಂದ್ ಮಾಡಿದ್ರೆ ನಮ್ಮ ಜನಕ್ಕೆ ನಷ್ಟ. ದೆ

1 min agoJuly 31, 2026 1:19 pm ಕರ್ನಾಟಕ ಬಂದ್ಗೆ ಕರವೇ ನಾರಾಯಣ ಗೌಡರ ಬೆಂಬಲ ಇಲ್ಲ ಬಂದ್ಗೆ ಕರವೇ ಬೆಂಬಲ ಇಲ್ಲ. ಬಂದ್ನಲ್ಲಿ ಭಾಗವಹಿಸೋದಿಲ್ಲ. ಬಂದ್ ಬದಲಾಗಿ ದೆಹಲಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೆ ಸಿದ್ಧತೆ. ನಮ್ಮ ಕೂಗು ದೆಹಲಿಯ ದೊರೆಗಳಿಗೆ ಮುಟ್ಟಬೇಕು ಹಾಗಾಗಿ ದೆಹಲಿಯಲ್ಲಿ ಪ್ರತಿಭಟನೆ. ಕಾವೇರಿ ನಷ್ಟ ಆಗಿದೆ ಬಂದ್ ಮಾಡಿದ್ರೆ ನಮ್ಮ ಜನಕ್ಕೆ ನಷ್ಟ. ದೆಹಲಿ ಪ್ರತಿಭಟನೆ ದಿನಾಂಕ ಶೀಘ್ರದಲ್ಲೇ ಘೋಷಣೆ ಮಾಡುವುದಾಗಿ ʻಪಬ್ಲಿಕ್ ಟಿವಿʼಗೆ ಕರವೇ ನಾರಾಯಣ ಗೌಡ ಅವರು ಮಾಹಿತಿ ನೀಡಿದ್ದಾರೆ. 14 min agoJuly 31, 2026 1:07 pm ತಮಿಳುನಾಡಿಗೆ ನೀರು ಬಿಟ್ಟರೆ ಕೆಆರ್ಎಸ್ ಬರಿದಾಗಿ ಸ್ಟೇಡಿಯಂ ರೀತಿ ಆಗಲಿದೆ: ವಾಟಾಳ್ ನಾಗರಾಜ್ ಸುಪ್ರೀಂ ಕೋರ್ಟ್ ಏನಾದ್ರೂ ಹೇಳಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ಏನಾದ್ರೂ ಹೇಳಲಿ ತಮಿಳುನಾಡು ಸಿಎಂ ಹತ್ರ ಏನು ಮಾತಾಡ್ತೀರಿ? ವಾಟಾಳ್ ನಾಗರಾಜ್ ಪ್ರಶ್ನೆ ಸಿಎಂ ವಿಜಯ್ ಜೊತೆ ಕಿವಿಯಲ್ಲಿ ಮಾತಾಡ್ತೀರಾ? ಹೇಗೆ ಮಾತಾಡ್ತೀರಿ? ರಾಜಕೀಯದ ವಿರೋಧ ಪಕ್ಷದ ಸಭೆ ನಾವು ಒಪ್ಪಲ್ಲ. ಕನ್ನಡ ಪರ ಸಂಘಟನೆಗಳು ಬೆಂಬಲಿಸಲ್ಲ. ನೀರು ಬೇಡ ಎಂದು ತೀರ್ಮಾನ ಮಾಡಿ ವಿಜಯ್ ಇಲ್ಲಿಗೆ ಬರಲಿ. ಇಲ್ಲದಿದ್ದರೆ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕ್ತೀವಿ ಎಂದು ಎಚ್ಚರಿಕೆ. ನಾವು ಹೋರಾಟ ಕಡ್ಲೇ ಕಾಯಿ ತಿನ್ನೋಕೆ ಕರೆದಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ತೀರ್ಪು ವಿರೋಧಿಸಿ ಕರೆದಿದ್ದೇವೆ. 19 min agoJuly 31, 2026 1:02 pm ಇಡೀ ಕರ್ನಾಟಕ ಬಂದ್ ದಿನ ಸ್ತಬ್ಧವಾಗಲೇಬೇಕು: ಪ್ರವೀಣ್ ಶೆಟ್ಟಿ ಕಾವೇರಿ ನಿರ್ವಹಣಾ ಮಂಡಳಿ ಕೇಂದ್ರ ರಾಜ್ಯ ಎಲ್ಲವೂ ಕನ್ನಡಿಗರಿಗೆ ಮರಣ ಶಾಸನ ಬರೆದಿದ್ದಾರೆ. ಹೀಗಾಗಿ ಬಂದ್ ಘೋಷಣೆ ಮಾಡುತ್ತೇವೆ. ನಮಗೆ ಕಾವೇರಿ ನೀರು ಮುಖ್ಯ. ಇಡೀ ಕರ್ನಾಟಕ ಬಂದ್ ದಿನ ಸ್ತಬ್ಧವಾಗಲೇಬೇಕು. 22 min agoJuly 31, 2026 12:58 pm ಎಲ್ಲಿಯವರೆಗೆ ದಬ್ಬಾಳಿಕೆ? ಕರ್ನಾಟಕಕ್ಕೆ ಯಾಕೆ ಈ ಕಡಗಣನೆ: ಸಾರಾ ಗೋವಿಂದು ಪ್ರಶ್ನೆ ನಮಗೆ ನ್ಯಾಯ ಸಿಗಲ್ಲ ಅಂತ ಗೊತ್ತು. ಹೀಗಾಗಿ ಹೋರಾಟ ರೂಪಿಸುತ್ತೇವೆ ಎಂದು ಸಾರಾ ಗೋವಿಂದು ಹೇಳಿದ್ದಾರೆ. 27 min agoJuly 31, 2026 12:53 pm ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದಿಂದ ಖಾಲಿ ಕೊಡ ಹಿಡಿದು ಪ್ರತಿಭಟನೆ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘ ಹೋರಾಟ ನಡೆಸಿದೆ. ಖಾಲಿ ಕೊಡಗಳನ್ನ ಹಿಡಿದು, ನಮಗೆ ಕುಡಿಯಲು ನೀರಿಲ್ಲ, ಅವ್ರಿಗೆ ಮೂರನೇ ಬೆಳೆಗೆ ನೀರು ಕೇಳ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕನ್ನಡ ಸಿನಿ ರಂಗದ ಪೋಷಕ ಕಲಾವಿದರು ಭಾಗಿಯಾಗಿದ್ದಾರೆ. 41 min agoJuly 31, 2026 12:39 pm ಕರ್ನಾಟಕ ಬಂದ್ ಮಾಡಿದ್ರೆ ರಾಜ್ಯಕ್ಕೆ ನಷ್ಟ, ತಮಿಳುನಾಡಿನವರಿಗೆ ಏನು ನಷ್ಟ ಇಲ್ಲ: ಹೆಚ್ಡಿಕೆ ಕರ್ನಾಟಕ ಬಂದ್ ಮಾಡಿದ್ರೆ ರಾಜ್ಯಕ್ಕೆ ನಷ್ಟ, ತಮಿಳುನಾಡಿನವರಿಗೆ ನಷ್ಟ ಆಗಲ್ಲ. ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ನೀರು ಬಿಡಲೇಬೇಕು. ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸುಗ್ರೀವಾಜ್ಞೆ ತಂದರು, ಆ ಸುಗ್ರೀವಾಜ್ಞೆ ಏನಾಯ್ತು ಇವಾಗ? ನೀರಿನ ಹಂಚಿಕೆ ವಿಷಯದಲ್ಲಿ ರಾಜ್ಯದ ರೈತರ ಹಿತದೃಷ್ಟಿಯಿಂದ ಹೋರಾಟ ಮಾಡಬೇಕು. ಸರ್ವ ಪಕ್ಷ ಸಭೆಯಲ್ಲಿ ನಮಗೆ ಇರುವ ಮಾಹಿತಿ, ಸಲಹೆಯನ್ನು ಕೊಡುವ ಕರ್ತವ್ಯ ನಮ್ಮ ಮೇಲಿದೆ. 59 min agoJuly 31, 2026 12:22 pm ಕಾವೇರಿ ಕಿಚ್ಚು – ಆ.13 ಇಲ್ಲವೇ 18 ರಂದು ಅಖಂಡ ಕರ್ನಾಟಕ ಬಂದ್ಗೆ ಸಿದ್ಧತೆ ಆಗಸ್ಟ್ 7ಕ್ಕೆ ಬಂದ್ ಮಾಡಲು ಪ್ರವೀಣ್ ಶೆಟ್ಟಿ ಬಣ ಸಲಹೆ ಕೆಲವೇ ಕ್ಷಣದಲ್ಲಿ ಬಂದ್ ಡೇಟ್ ಫಿಕ್ಸ್ ಇಡೀ ಕರ್ನಾಟಕದ ಬಂದ್ಗೆ ಬೆಂಬಲಕ್ಕೆ ಬರಬೇಕು. ಹೋರಾಟಗಾರರ ಮನವಿ ಬಂದ್ ವಿಚಾರವಾಗಿ ವಾಟಾಳ್ ನಾಗರಾಜ್ ಸೇರಿದಂತೆ ಅನೇಕ ಮುಖಂಡರ ಸಮ್ಮುಖದಲ್ಲಿ ಸಭೆ 1 hr 7 min agoJuly 31, 2026 12:13 pm ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಆಗೋವರೆಗೆ ನೀರು ಬಿಡಲ್ಲ: ರಾಮಲಿಂಗಾರೆಡ್ಡಿ ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಆಗೋವರೆಗೂ ತಮಿಳುನಾಡಿಗೆ ನೀರು ಬಿಡಲ್ಲ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಖಡಕ್ಕಾಗಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ 15 ದಿನಗಳ ಕಾಲ 3,500 ಕ್ಯೂಸೆಕ್ ನೀರು ಹರಿಸಬೇಕೆಂಬ CWMA ಆದೇಶ ಕುರಿತು ಪ್ರತಿಕ್ರಿಯಿಸಿದರು. CWMA ನೀರು ಬಿಡೋಕೆ ಹೇಳಿದೆ. ಕಳೆದ 30 ವರ್ಷಗಳಿಂದ ವಾದ ಮಾಡಿದ್ದವರೇ ಈಗಲೂ ವಾದ ಮಾಡಿದ್ದಾರೆ. ಇನ್ನೂ ಭಾನುವಾರ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದಾರೆ. ವಿಪಕ್ಷಗಳ ಸಲಹೆ ಪಡೆದು ಮುಂದಿನ ತೀರ್ಮಾನ ಮಾಡ್ತೀವಿ. ಸಭೆ ಆಗೋವರೆಗೂ ನೀರು ಬಿಡಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. 1 hr 14 min agoJuly 31, 2026 12:06 pm ಕರ್ನಾಟಕ ಭೇಟಿಗೂ ಮುನ್ನ ಉನ್ನತ ಅಧಿಕಾರಿಗಳು, ಸಚಿವರೊಂದಿಗೆ ಸಿಎಂ ವಿಜಯ್ ಸಭೆ ಕರ್ನಾಟಕ ಭೇಟಿಗೂ ಮುನ್ನ ತಮಿಳುನಾಡು ಸಿಎಂ ಉನ್ನತಮಟ್ಟದ ಸಭೆ ಸಭೆಯ ಬಳಿಕ ಕರ್ನಾಟಕ ಭೇಟಿ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಉನ್ನತ ಮಟ್ಟದ ಸಭೆಯಲ್ಲಿ ಕಾವೇರಿ ಜಲ ವಿವಾದ ಕುರಿತು ಚರ್ಚಿಸುವ ಸಾಧ್ಯತೆ 1 hr 19 min agoJuly 31, 2026 12:01 pm ಎಲ್ಲಾ ನೀರು ಬಿಟ್ಟು ಈಗ ಸರ್ವ ಪಕ್ಷ ಸಭೆ ಯಾಕೆ: ಬಿವೈವಿ ಎರಡು ತಿಂಗಳಲ್ಲಿ ಎಲ್ಲಾ ನೀರು ಬಿಟ್ಟು ಈಗ ಸರ್ವಪಕ್ಷ ಸಭೆ ಯಾಕೆ ಕರೆಯುತ್ತೀರಾ? ನೀರು ಹೋದ ಮೇಲೆ ವಿರೋಧ ಪಕ್ಷಗಳ ಸಲಹೆ ಯಾವುದಕ್ಕೆ ಉಪಯೋಗಕ್ಕೆ ಬರುತ್ತದೆ. ಏಪ್ರಿಲ್, ಮೇ ತಿಂಗಳಲ್ಲೇ ನೀರು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಬೇಕಿತ್ತು. ಕುರ್ಚಿ ಜಗ್ಗಾಟದಲ್ಲಿ ಮುಳುಗಿದ ಸರ್ಕಾರಕ್ಕೆ ನೀರಿನ ಬಗ್ಗೆ ಯೋಚನೆಯೇ ಬರಲಿಲ್ಲ. ಆಗ ಎಲ್ಲಾ ನೀರು ಬಿಟ್ಟು ಈಗ ಸಂಕಷ್ಟ ಸೃಷ್ಟಿ ಮಾಡಿಕೊಂಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮಾಡುವುದರಲ್ಲೇ ಸಿಎಂ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಅವರಿಗೆ ಅವರ ರಾಜಕಾರಣ ಬಿಟ್ಟು ನೀರಿನ ವಿಚಾರದಲ್ಲಿ ವಕೀಲರಲ್ಲ ಭೇಟಿ ಮಾಡಲು ಅವರಿಗೆ ಸಮಯ ಸಿಗುತ್ತಿಲ್ಲ. ಹೀಗಾಗಿ ಇಂದು ಈ ಸಂಕಷ್ಟ ಸೃಷ್ಟಿಯಾಗಿದೆ. 1 hr 26 min agoJuly 31, 2026 11:54 am ತಮಿಳುನಾಡು ಸಿಎಂ ಜೊತೆ ಸ್ಟಾರ್ ಹೋಟೆಲ್ನಲ್ಲಿ ಸಭೆ ಮಾಡಿದ್ರೆ ವಾಸ್ತವ ಗೊತ್ತಾಗಲ್ಲ: ಸಿ.ಟಿ ರವಿ ರಾತ್ರೋರಾತ್ರಿ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ನಾವು ತಮಿಳುನಾಡಿನ ವಿರೋಧಿಗಳಲ್ಲ. ತಮಿಳುನಾಡಿನಲ್ಲಿ ಕಾಂಗ್ರೆಸ್ನ ಮಿತ್ರ ಪಕ್ಷ ಅಧಿಕಾರದಲ್ಲಿದೆ. ತಮಿಳುನಾಡು ಸಿಎಂ ಜೊತೆ ಸ್ಟಾರ್ ಹೋಟೆಲ್ನಲ್ಲಿ ಸಭೆ ಮಾಡಿದ್ರೆ ವಾಸ್ತವ ಗೊತ್ತಾಗಲ್ಲ. ಕೆಆರ್ಎಸ್ ಡ್ಯಾಮ್ಗೆ ಸಿಎಂ ವಿಜಯ್ ಅವರನ್ನು ಕರೆದುಕೊಂಡು ಬರಲು ಆಗ್ರಹ. ಡ್ಯಾಂನಲ್ಲಿ ನೀರು ಎಷ್ಟಿದೆ ಎಂದು ತೋರಿಸಿ. ಕಣ್ಣಾರೆ ಪರಿಸ್ಥಿತಿ ನೋಡಿದ್ರೆ ಅವರಿಗೆ ವಾಸ್ತವ ಸ್ಥಿತಿ ತಿಳಿಯುತ್ತೆ. ರಾಜ್ಯದ ಜನರ ಜೊತೆ ಬಂಡೆ ರೀತಿ ನಿಲ್ಲಿ. ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಸಿಎಂ ಹಾಗೂ ನೀರಾವರಿ ಸಚಿವರು ಮೈಮರೆತಿದ್ದಾರೆ. ನೀರಾವರಿ ಸಚಿವರಿಗೆ ಇನ್ನೂ ಆ ಖಾತೆ ಮೇಲೆ ಆಸಕ್ತಿ ಬಂದಿಲ್ಲ. ಬೆಂಗಳೂರಿನ ಮೇಲೆ ಅವರಿಗೆ ಆಸ್ತಕ್ತಿ ಇದ್ದಾಗೆ ಕಾಣುತ್ತಿದೆ. ಬೆಂಗಳೂರು ಜನರಿಗೆ ಇದೇ ಕಾವೇರಿ ನೀರು ಬೇಕು. ಈ ನೀರನ್ನ ಉಳಿಸಿಕೊಳ್ಳಬೇಕು. 2 hr 42 min agoJuly 31, 2026 11:38 am ರಾಮನಗರದಲ್ಲಿ ಹಳೇ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ಸಿಡಬ್ಯುಎಂಎ ಆದೇಶ ಖಂಡಿಸಿ ರಾಮನಗರದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ. ರಾಮನಗರದ ಐಜೂರು ವೃತ್ತದ ಹಳೆ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರಿಂದ ಪ್ರತಿಭಟನೆ. ಕಾವೇರಿ ವಿಚಾರದಲ್ಲಿ ಪದೇ ಪದೇ ನಮ್ಮ ರಾಜ್ಯಕ್ಕೆ ಅನ್ಯಾಯ ಆಗ್ತಿದೆ ಎಂದು ಆಕ್ರೋಶ. ಕೂಡಲೇ ಮೇಕೆದಾಟು ಅಣೆಕಟ್ಟು ನಿರ್ಮಿಸುವಂತೆ ಒತ್ತಾಯ. 2 hr 54 min agoJuly 31, 2026 11:26 am ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು: ಬಿಎಸ್ವೈ ಚಾಮುಂಡಿ ಬೆಟ್ಟದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ. ಸರ್ಕಾರ ತಕ್ಷಣವೇ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕು. ರೈತರ ಹಿತ ಕಾಯಲು ಸರ್ಕಾರ ಬದ್ಧರಾಗಬೇಕು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. 2 hr 46 min agoJuly 31, 2026 11:35 am ಪಡಿತರ ವಿತರಕರ ಸಂಘದಿಂದ ಕಾವೇರಿ ಹೋರಾಟಕ್ಕೆ ಬೆಂಬಲ ಪಡಿತರ ವಿತರಕರ ಸಂಘದಿಂದ ಕಾವೇರಿ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ಮಂಡ್ಯದ ಸಂಜಯ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ. ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ. ಸಿಡಬ್ಯುಎಂಎ ಆದೇಶ ಅವೈಜ್ಞಾನಿಕ ಎಂದು ಘೋಷಣೆ. ಕಾವೇರಿ ನಮ್ಮದು, ಯಾವುದೇ ಕಾರಣಕ್ಕೂ ನೀರು ಬಿಡದಂತೆ ಒತ್ತಾಯ 2 hr 59 min agoJuly 31, 2026 11:21 am CWRC, CWMA ಆದೇಶ ಒಪ್ಪೋದಕ್ಕೆ ಆಗಲ್ಲ: ಛಲವಾದಿ ನಾರಾಯಣಸ್ವಾಮಿ ಸಿಡಬ್ಲ್ಯೂಎಂಎ ಆದೇಶ ಒಪ್ಪಲಿಕ್ಕೆ ಆಗೋದಿಲ್ಲ. ಮಂಡ್ಯದಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ಸಿಡಬ್ಯುಆರ್ಸಿ, ಸಿಡಬ್ಯುಎಂಎ ಆದೇಶಕ್ಕೆ ನಮ್ಮ ವಿರೋಧವಿದೆ. ಸರ್ಕಾರ ಮತ್ತೆ ಅರ್ಜಿ ಹಾಕಿ ವಾಸ್ತವ ಸ್ಥಿತಿ ಮನವರಿಕೆ ಮಾಡಬೇಕು. ಕೋರ್ಟ್ ನ ಮೊರೆ ಹೋಗಬೇಕು. ಯಡಿಯೂರಪ್ಪ, ಆರ್.ಅಶೋಕ್, ವಿಜಯೇಂದ್ರ, ಸಿ.ಟಿ.ರವಿ ಎಲ್ಲರೂ ಪ್ರತಿಭಟನೆಗೆ ಬರ್ತಾರೆ. ಅಧಿಕಾರಕ್ಕಾಗಿ ದೆಹಲಿಗೆ ಹೋಗಿ ಕುಳಿತಿದ್ದಾರೆ. ತಿಂಗಳಾನುಗಟ್ಟಲೇ ದೆಹಲಿಯಲ್ಲಿ ಉಳಿದಿದ್ದಾರೆ. ಅವರಿಗೆ ಜನರ ಬಗ್ಗೆ ಯಾವ ಕಾಳಜಿಯೂ ಇಲ್ಲ. ಸರ್ವಪಕ್ಷದ ಬಗ್ಗೆ ನಮಗೆ ಯಾರು ಹೇಳಿಲ್ಲ. ಅದು ಸುದ್ದಿಯಾಗಿದೇ ಅಷ್ಟೇ. 2 hr 4 min agoJuly 31, 2026 11:16 am ಬತ್ತಿದ್ದ ಭೀಮಾನದಿ ಭರ್ತಿ – ಪ್ರವಾಹ ಭೀತಿ ಒಂದೆ ದಿನದಲ್ಲಿ ಉಕ್ಕಿ ಹರಿಯುತ್ತಿರುವ ಭೀಮಾನದಿ ಒಡಲು, ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರೀ ಮಳೆ ಭೀಮಾನದಿಗೆ ಹರಿದು ಬರುತ್ತಿರುವ ಭಾರೀ ಪ್ರಮಾಣದ ನೀರು, ಭೀಮಾನದಿಗೆ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ, ಗುರುಸಣಗಿ ಬ್ಯಾರೇಜ್ ನಿಂದ 50 ಸಾವಿರ ಕ್ಯೂಸೆಕ್ ನೀರು ಭೀಮಾನದಿಗೆ ಬಿಡುಗಡೆ, ಭೀಮಾನದಿ ತೀರದಲ್ಲಿ ಪ್ರವಾಹ ಭೀತಿ, ನದಿ ತೀರದ ದೇಗುಲಗಳು ಜಲಾವೃತ ವೀರಾಂಜನೇಯ, ಕಂಗಳೇಶ್ವರ ದೇಗುಲಗಳಿಗೆ ಜಲದಿಗ್ಬಂಧನ, ದೇಗುಲಗಳ ಮುಳುಗಡೆ ಹಿನ್ನಲೆ ಭಕ್ತರಿಗೆ ದರ್ಶನ ಭಾಗ್ಯ ಮರಿಚಿಕೆ, ನದಿ ತೀರದ ದೂರದಿಂದಲೇ ದರ್ಶನ ಪಡೆಯುತ್ತಿರುವ ಭಕ್ತರು, ಭೀಮಾನದಿ ಜೀವಕಳೆಯಿಂದ ಬೆಳೆ ಬೆಳೆಯಲು ಅನ್ನದಾತರಿಗೆ ವರದಾನ. 2 hr 9 min agoJuly 31, 2026 11:11 am ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ಫಿಕ್ಸ್..? 2 hr 10 min agoJuly 31, 2026 11:10 am ಸಿಎಂ ತಮಿಳುನಾಡಿನ ವಾಟರ್ಮ್ಯಾನ್ ಕೆಲಸ ಮಾಡಬಾರದು: ಸಿಟಿ ರವಿ ಮುಖ್ಯಮಂತ್ರಿಗಳು ತಮಿಳುನಾಡಿನ ವಾಟರ್ ಮ್ಯಾನ್ ಕೆಲಸ ಮಾಡಬಾರದು. ಮಂಡ್ಯದಲ್ಲಿ ಸಿ.ಟಿ ರವಿ ಹೇಳಿಕೆ ನಮ್ಮ ಜನರ ಹಿತ ಕಾಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡಬಾರದು. ಸರ್ಕಾರಕ್ಕೆ ನೈತಿಕ ಬೆಂಬಲ ಸೂಚಿಸಲು ನಾವು ಪ್ರತಿಭಟನೆ ಮಾಡ್ತಾ ಇದೀವಿ. ಈ ಕಾವೇರಿ ವಿವಾದ ಶತಮಾನದಲ್ಲೂ ಇದೆ. ಈಗ ನಮಗೆ ನೀರಿಲ್ಲ ಅಂದ್ರೆ ಅವರಿಗೆ ಬಿಡಲು ಹೇಗೆ ಸಾಧ್ಯ? ನಮ್ಮ ಇಂದಿನ ಪ್ರತಿಭಟನೆ ನೀರು ಹರಿಸಬಾರದು ಎಂದು. ನಮ್ಮ ನಿಲುವು ಒಂದೇ ಇರಬೇಕು. ಪ್ರತಿಪಕ್ಷ ಸಭೆಯಲ್ಲೂ ಇದೇ ಹೇಳುತ್ತೇವೆ. 2 hr 13 min agoJuly 31, 2026 11:07 am ಕೆಆರ್ಎಸ್ ಡ್ಯಾಂಗೆ ಮುತ್ತಿಗೆ ಹಾಕಲು ಸಜ್ಜಾದ ಬಿಜೆಪಿ ಮಂಡ್ಯದಲ್ಲಿ ಹೆಚ್ಚಾದ ಕಾವೇರಿ ಕಿಚ್ಚು. ಕೆಲ ಹೊತ್ತಲ್ಲಿ ಕೆ.ಆರ್.ಎಸ್ ನಲ್ಲಿ ಬಿಜೆಪಿ ಪ್ರತಿಭಟನೆ ಕೆಆರ್ಎಸ್ ಡ್ಯಾಂಗೆ ಮುತ್ತಿಗೆ ಹಾಕಲಿರುವ ಬಿಜೆಪಿ ನಾಯಕರು ಡ್ಯಾಂ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಭದ್ರತೆ ಪರಿಶೀಲನೆ ನಡೆಸಿದ ದಕ್ಷಿಣ ವಲಯದ ಐಜಿ ಡಾ.ಬೋರಲಿಂಗಯ್ಯ. ಭದ್ರತೆ ನಿಯೋಜನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಲಹೆ ಸೂಚನೆ. 2 hr 27 min agoJuly 31, 2026 10:53 am ಕರಾವಳಿ-ಮಲೆನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ – ರಾಜ್ಯದ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಕರಾವಳಿ-ಮಲೆನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ… ಮೂರು ದಿನ ಮಳೆ ಅಬ್ಬರಿಸುವ ಮುನ್ಸೂಚನೆ… ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಣೆ… ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಭಾರೀ ಮಳೆ ಸಾಧ್ಯತೆ.. ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿಗೂ ಭಾರೀ ಮಳೆ ಎಚ್ಚರಿಕೆ.. ಬೀದರ್, ಕಲಬುರಗಿಗೂ ಆರೆಂಜ್ ಅಲರ್ಟ್ ಘೋಷಣೆ.. ಕೊಡಗು, ಹಾಸನ, ಧಾರವಾಡ, ಗದಗ, ವಿಜಯಪುರಕ್ಕೆ ಯೆಲ್ಲೋ ಅಲರ್ಟ್.. ಕರಾವಳಿಯಲ್ಲಿ ಗಂಟೆಗೆ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ.. ಬೆಂಗಳೂರು ಸೇರಿ 14 ಜಿಲ್ಲೆಗಳಲ್ಲಿ ಮುಂದಿನ 5 ದಿನ ಸಾಧಾರಣ ಮಳೆ.. ರಾಜಧಾನಿ ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ.. ಮೀನುಗಾರರು, ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚನೆ.. 3 hr 3 min agoJuly 31, 2026 10:18 am ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗಿಳಿದು ರೈತರ ಆಕ್ರೋಶ ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗಿಳಿದು ರೈತರ ಆಕ್ರೋಶ ನೀರು ಬಿಡುವಂತೆ ಆದೇಶ ನೀಡಿದ CWMA, CWRC ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಹರಿಸದಂತೆ ಆಗ್ರಹ ಒತ್ತಡಕ್ಕೆ ಮಣಿದು ನೀರು ಹರಿಸಿದ್ರೆ ರಾಜ್ಯದ್ಯಂತ ಉಗ್ರ ಪ್ರತಿಭಟನೆ ಎಚ್ಚರಿಕೆ 3 hr 7 min agoJuly 31, 2026 10:14 am CWRC, CWMA ಶಿಫಾರಸ್ಸಿಗೆ ಖಂಡನೆ – ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ ಕರವೇ ಪ್ರವೀಣ್ ಶೆಟ್ಟಿ ಬಣ ಹಾಗೂ ರೈತಪರ ಸಂಘಟನೆಗಳ ಜಂಟಿ ಪ್ರತಿಭಟನೆ ಮಂಡ್ಯದ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಪ್ರತಿಭಟನೆ ಕಾವೇರಿ ಭವನದ ಮುಂದೆ ಕುಳಿತು ಧಿಕ್ಕಾರ ಕೂಗಿ ಆಕ್ರೋಶ 3 hr 11 min agoJuly 31, 2026 10:09 am ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ – ವಿಜಯ್ ʻಜನನಾಯಗನ್ʼ ಸಿನಿಮಾ ಬ್ಯಾನ್ಗೆ ಆಗ್ರಹ ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು ಆದೇಶ – ಮಂಡ್ಯದಲ್ಲಿ ಭುಗಿಲೆದ್ದ ಪ್ರತಿಭಟನೆ ಕನ್ನಡಪರ ಸಂಘಟನೆಗಳಿಂದ ಚಿತ್ರಮಂದಿರ ಮುತ್ತಿಗೆ ಯತ್ನ ತಮಿಳುನಾಡು ಸಿಎಂ ವಿಜಯ್ ನಟಿಸಿರುವ ಜನನಾಯಗನ್ ಚಿತ್ರ ಮಂಡ್ಯದ ಗುರುಶ್ರೀ ಥಿಯೇಟರ್ನಲ್ಲಿ ಚಿತ್ರ ಪ್ರದರ್ಶನ ಥಿಯೇಟರ್ಗೆ ಮುತ್ತಿಗೆ ಹಾಕಲು ಕನ್ನಡಪರ ಸಂಘಟನೆಗಳ ಯತ್ನ ಕಾವೇರಿ ವಿಚಾರದಲ್ಲಿ ತಮಿಳುನಾಡು ಖ್ಯಾತೆ ತೆಗೆದಿದೆ ತಮಿಳುನಾಡು ಸಿಎಂ ಸಿನಿಮಾ ಹಾಕಿದ್ದೀರಾ ಎಂದು ಆಕ್ರೋಶ ಕೂಡಲೇ ಸಿನಿಮಾ ಪ್ರದರ್ಶನ ರದ್ದು ಮಾಡಲು ಆಗ್ರಹ 3 hr 12 min agoJuly 31, 2026 10:08 am ರಾಷ್ಟ್ರಮಟ್ಟದಲ್ಲಿ ಹೋರಾಟಕ್ಕಿಳಿದ ಕನ್ನಡ ರಕ್ಷಣಾ ವೇದಿಕೆ 3 hr 13 min agoJuly 31, 2026 10:08 am ರೈಲ್ವೆ ನಿಲ್ದಾಣ ಮುತ್ತಿಗೆಗೆ ಕರವೇ ಸ್ವಾಭಿಮಾನಿ ಸೇನೆ ನಿರ್ಧಾರ 3 hr 16 min agoJuly 31, 2026 10:04 am KRS ಡ್ಯಾಂ ಬಳಿ 1,500ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ: ಎಸ್ಪಿ ಶೋಭಾರಾಣಿ 3 hr 18 min agoJuly 31, 2026 10:02 am ತೀವ್ರಗೊಂಡ ಕಾವೇರಿ ಹೋರಾಟ – ರೈತ ಹಿತರಕ್ಷಣಾ ಸಮಿತಿಯಿಂದ ಹೆದ್ದಾರಿ ತಡೆ ರೈತ ಹಿತರಕ್ಷಣಾ ಸಮಿತಿಯಿಂದ ಹೆದ್ದಾರಿ ತಡೆ. ವಿಶ್ವೇಶ್ವರಯ್ಯ ಪ್ರತಿಮೆ ಸಮೀಪ ಮೈಸೂರು – ಬೆಂಗಳೂರು ಹಳೇ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ರಸ್ತೆಯಲ್ಲಿ ಕುಳಿತು ಪ್ರತಿಭಟಿಸುತ್ತಿರುವ ರೈತರು ರೈತರ ಹೋರಾಟಕ್ಕೆ ಕನ್ನಡಪರ ಹೋರಾಟಗಾರರ ಸಾಥ್ ತಮಿಳುನಾಡು, CWMA ವಿರುದ್ಧ ಘೋಷಣೆ ಕೂಗಿ ಆಕ್ರೋಶ ಪ್ರತಿಭಟನಾ ಸ್ಥಳದಲ್ಲಿ ಹೈ ಡ್ರಾಮ. ಪ್ರತಿಭಟನಾಕಾರರನ್ನು ರಸ್ತೆಯಿಂದ ಎದ್ದೇಳಿಸುತ್ತಿರುವ ಪೊಲೀಸರು ಬಲವಂತವಾಗಿ ರಸ್ತೆಯಿಂದ ಎದ್ದೇಳಿಸಿದ ಪೊಲೀಸರು ಮಹಿಳಾ ಹೋರಾಟಗಾರರಿಂದ ಉರುಳು ಸೇವೆ ಮಾಡಿ ಪ್ರತಿಭಟನೆ ಕೆಆರ್ಎಸ್ ಡ್ಯಾಮ್ (KRS Dam) ಬಳಿ ಪ್ರತಿಭಟನೆ ತೀವ್ರಗೊಂಡಿದೆ. ಇದರಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಕೆಆರ್ಎಸ್ ಗೇಟ್ ಬಳಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ತಮಿಳುನಾಡು, CWRC, CWMA ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಕೆಆರ್ಎಸ್ ಡ್ಯಾಂ ಗೇಟ್ ಮುಂದೆ ಮಹಿಳಾ ಹೋರಾಟಗಾರರು ಉರುಳು ಸೇವೆ ಮಾಡಿ ವಿನೂತನ ಪ್ರತಿಭಟನೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸದಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಹೋರಾಟ ತೀವ್ರಗೊಂಡ ಹಿನ್ನೆಲೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ಯುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಇಂದು ಕೆಆರ್ಎಸ್ಗೆ ಮುತ್ತಿಗೆ – ಪೊಲೀಸರಿಂದ ಭಾರೀ ಬಿಗಿ ಭದ್ರತೆ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಮಂಡ್ಯ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿ, ಕೆಆರ್ಎಸ್ ಸೇರಿದಂತೆ ಸೂಕ್ಷ್ಮ ಪ್ರದೇಶದಲ್ಲಿ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತೆಗಾಗಿ 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಕ್ರಮವಹಿಸಿದ್ದೇವೆ ಎಂದರು. ಇಬ್ಬರು ಎಸ್ಪಿ, 9 ಮಂದಿ ಡಿವೈಎಸ್ಪಿ, 27 ಇನ್ಸ್ಪೆಕ್ಟರ್, 45 ಸಬ್ ಇನ್ಸ್ಪೆಕ್ಟರ್, 78 ಎಎಸ್ಐ ಸೇರಿದಂತೆ 1500 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಕಾವೇರಿ ವ್ಯಾಪ್ತಿಯಲ್ಲಿ ತೀವ್ರಗೊಂಡ ಪ್ರತಿಭಟನೆ – ಮಂಡ್ಯದಲ್ಲಿ ಜನನಾಯಗನ್ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ