Karnataka Politics: ಕುತೂಹಲ ಮೂಡಿಸಿದ ಸಿದ್ದರಾಮಯ್ಯ–ರಮೇಶ ಜಾರಕಿಹೊಳಿ ಭೇಟಿ
ಮೈಸೂರು: ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಅವರನ್ನು ಬುಧವಾರ ಇಲ್ಲಿನ ಟಿ.ಕೆ. ಲೇಔಟ್ ಮನೆಯಲ್ಲಿ ಭೇಟಿಯಾಗಿ ಚರ್ಚಿಸಿದರು.ಸ್ಟಿಂಗ್ ಆಪರೇಷನ್ ಸದ್ದು ಮಾಡುತ್ತಿರುವ ಈ ಸಂದರ್ಭದಲ್ಲಿ ಇಬ್ಬರ ಭೇಟಿ ಕುತೂಹಲ ಮೂಡಿಸಿದೆ. ಹೆಚ್ಚಿನ ಪ್ರತಿಕ್ರಿಯೆಗೆ ನಿರಾಕರಿಸಿದ ಜಾರಕಿಹೊಳಿ, ‘ಇದೊಂದು ಸೌಜನ್ಯದ ಹಾಗೂ ಖಾಸಗ

ಮೈಸೂರು: ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಅವರನ್ನು ಬುಧವಾರ ಇಲ್ಲಿನ ಟಿ.ಕೆ. ಲೇಔಟ್ ಮನೆಯಲ್ಲಿ ಭೇಟಿಯಾಗಿ ಚರ್ಚಿಸಿದರು.ಸ್ಟಿಂಗ್ ಆಪರೇಷನ್ ಸದ್ದು ಮಾಡುತ್ತಿರುವ ಈ ಸಂದರ್ಭದಲ್ಲಿ ಇಬ್ಬರ ಭೇಟಿ ಕುತೂಹಲ ಮೂಡಿಸಿದೆ. ಹೆಚ್ಚಿನ ಪ್ರತಿಕ್ರಿಯೆಗೆ ನಿರಾಕರಿಸಿದ ಜಾರಕಿಹೊಳಿ, ‘ಇದೊಂದು ಸೌಜನ್ಯದ ಹಾಗೂ ಖಾಸಗಿ ಭೇಟಿ. ಮಾರುವೇಷದ ಕಾರ್ಯಾಚರಣೆ ಮೊದಲಾದವುಗಳ ಕುರಿತು ನಾನು ಈಗ ಮಾತನಾಡುವುದಿಲ್ಲ. ನಾನು ಬೇರೆ ವಿಷಯ ಚರ್ಚಿಸಲು ಬಂದಿದ್ದೆ’ ಎಂದರು.‘ಸಿದ್ದರಾಮಯ್ಯ ಯಾವುದೇ ಪಕ್ಷದಲ್ಲಿದ್ದರೂ ನಮ್ಮ ನಾಯಕರು. ಅವರು ನಿರ್ಬಂಧಕಾಜ್ಞೆ ತೆಗೆದುಕೊಳ್ಳಬಾರದಿತ್ತು’ ಎಂದು ಹೇಳಿದರು.ಮುಜರಾಯಿ ಸಚಿವ ಕೆ.ಎಸ್.ಬಸವಂತಪ್ಪ ಅವರೂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಜೊತೆಗಿದ್ದರು.ಸಿದ್ದರಾಮಯ್ಯ ಸಿಡಿಮಿಡಿ: ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿದ್ದರಾಮಯ್ಯ ಅವರು, ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಸಿಡಿಮಿಡಿಗೊಂಡರು. ‘ನಾನು ನಿರ್ಬಂಧಕಾಜ್ಞೆ ತಂದಿರುವುದನ್ನು ನೀವೇ ಬರೆದಿದ್ದೀರಲ್ಲಾ’ ಎಂದರು. ರಮೇಶ ಜಾರಕಿಹೊಳಿ ಮೊದಲಾದವರು ಭೇಟಿಯಾಗಿದ್ದಾರಲ್ಲಾ ಎಂಬ ಪ್ರಶ್ನೆಗೆ, ‘ಬರ್ತಾರಯ್ಯಾ ಭೇಟಿ ಮಾಡಕ್ಕೆ. ಇದ್ಕೆಲ್ಲಾ ವಿಶೇಷ ಅರ್ಥ ಕಲ್ಪಿಸಿದರೆ ಹೇಗೆ? ಬಂದ್ರು, ಭೇಟಿಯಾದ್ರು, ಊಟ ಮಾಡುದ್ರು ಹೋದ್ರು’ ಎಂದು ಏರುಧ್ವನಿಯಲ್ಲಿ ಹೇಳಿ ಹೊರಟರು.