Karnataka Rains: ಕೊಡಗಲ್ಲೂ ಮಳೆ ಚೇತರಿಕೆ, 24 ಗಂಟೆಯಲ್ಲಿ ಹೆಚ್ಚು ಎಲ್ಲೆಲ್ಲಿ?
ಬೆಂಗಳೂರು: ಕರ್ನಾಟಕದಲ್ಲಿ ಮೂರು ದಿನದಿಂದ ಮುಂಗಾರು ಮಳೆ ಚೇತರಿಸಿಕೊಂಡಿದ್ದು ಕೊಡಗಿನಲ್ಲೂ ಹೆಚ್ಚು ಮಳೆಯಾಗುತ್ತಿದೆ.ಕಳೆದ 24 ಗಂಟೆ ಅವಧಿಯಲ್ಲಿ ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳುವಿನಲ್ಲಿ ಹಾಗೂ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಿರುನಾಣಿಯಲ್ಲಿ 178.5 ಮಿ.ಮೀ ಅತ್ಯಧಿಕ ಮಳೆಯ

ಬೆಂಗಳೂರು: ಕರ್ನಾಟಕದಲ್ಲಿ ಮೂರು ದಿನದಿಂದ ಮುಂಗಾರು ಮಳೆ ಚೇತರಿಸಿಕೊಂಡಿದ್ದು ಕೊಡಗಿನಲ್ಲೂ ಹೆಚ್ಚು ಮಳೆಯಾಗುತ್ತಿದೆ.ಕಳೆದ 24 ಗಂಟೆ ಅವಧಿಯಲ್ಲಿ ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳುವಿನಲ್ಲಿ ಹಾಗೂ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಿರುನಾಣಿಯಲ್ಲಿ 178.5 ಮಿ.ಮೀ ಅತ್ಯಧಿಕ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಸೋವಿನಕೊಪ್ಪದಲ್ಲಿ 177 ಮಿ.ಮೀ, ಚಿಕ್ಕಮಗಳೂರು ಜಿಲ್ಲೆ ಮೂಡಿಗರೆ ತಾಲ್ಲೂಕಿನ ಬೆಟ್ಟಗೆರೆಯಲ್ಲಿ 160.5 ಮಿ.ಮೀ, ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ 141 ಮಿ.ಮೀ, ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕ್ಯಾಮನಹಳ್ಳಿಯಲ್ಲಿ 139 ಮಿ.ಮೀ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆಯಲ್ಲಿ 130 ಮಿ.ಮೀ, ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಮಡಮಕ್ಕಿಯಲ್ಲಿ 102.5 ಮಿ.ಮೀ, ಮಳೆಯಾಗಿದೆ.ಧಾರವಾಡ ಜಿಲ್ಲೆ ಅಳ್ನಾವರದಲ್ಲಿ 38, ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಬೈಚವಳ್ಳಿ 37, ಕೊಪ್ಪಳ ತಾಲ್ಲೂಕಿನ ಕನ್ನಾಳದಲ್ಲಿ 24 ಮಿ.ಮೀ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನಲ್ಲೂರಿನಲ್ಲಿ 23, ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಪುನಬಘಟ್ಟದಲ್ಲಿ ತಲಾ 22 ಮಿ.ಮೀ ಮಳೆಯಾಗಿದೆ. Boom! We had an amazing surge of the season! Most likely, the only super surge of this monsoon! pic.twitter.com/0Zh1GbmjFK— Gurumoorti hegde (@guru3ti) July 7, 2026