Karnataka Rains: ಬೆಂಗಳೂರು ನಗರ, ಆಗುಂಬೆಯಲ್ಲಿ ಮಳೆ; ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು: ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೂ, ಬೆಂಗಳೂರು ನಗರ, ಶಿವಮೊಗ್ಗ ಜಿಲ್ಲೆಯ ಆಗುಂಬೆ, ಉತ್ತರ ಕನ್ನಡ ಜಿಲ್ಲೆಯ ದೊಡ್ಮನೆಯಲ್ಲಿ ಹೆಚ್ಚು ಮಳೆಯಾದ ವರದಿಯಾಗಿದೆ.ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಮಳೆ ಮಾಹಿತಿ ಪ್ರಕಾರ, ಬೆಂಗಳೂರು ನಗರದ ಚುಂಚನಕುಪ್ಪೆಯಲ್ಲಿ 78 ಮಿ.ಮೀ ಮಳೆಯಾಗಿದೆ. ಉತ್ತರ ಕನ

ಬೆಂಗಳೂರು: ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೂ, ಬೆಂಗಳೂರು ನಗರ, ಶಿವಮೊಗ್ಗ ಜಿಲ್ಲೆಯ ಆಗುಂಬೆ, ಉತ್ತರ ಕನ್ನಡ ಜಿಲ್ಲೆಯ ದೊಡ್ಮನೆಯಲ್ಲಿ ಹೆಚ್ಚು ಮಳೆಯಾದ ವರದಿಯಾಗಿದೆ.ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಮಳೆ ಮಾಹಿತಿ ಪ್ರಕಾರ, ಬೆಂಗಳೂರು ನಗರದ ಚುಂಚನಕುಪ್ಪೆಯಲ್ಲಿ 78 ಮಿ.ಮೀ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ದೊಡ್ಮನೆಯಲ್ಲಿ 66.5 ಮಿ.ಮೀ, ಆಗುಂಬೆಯಲ್ಲಿ 66.4 ಮಿಲಮೀ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ನೆರಿಯಾದಲ್ಲಿ 65 ಮಿ.ಮೀ, ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಪುನಭಘಟ್ಟದಲ್ಲಿ 58 ಮಿ.ಮೀ, ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ 53 ಮಿ.ಮೀ ಮಳೆಯಾಗಿದೆ.ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಿರುನಾಣಿಯಲ್ಲಿ 48 ಮಿ.ಮೀ, ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಯರಪಾಡಿಯಲ್ಲಿ 47.5 ಮಿ.ಮೀ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಬೇಗಾರಿನಲ್ಲಿ 47 ,ಮಿ.ಮೀ, ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿ ಹೊಗಡಹಳ್ಳದಲ್ಲಿ 46.5 ಮಿ.ಮೀ ಮಳೆಯಾಗಿದೆ.ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಪೋಲಕಪಲ್ಲಿಯಲ್ಲಿ 31 ಮಿ.ಮೀ, ಬೀದರ್ ಜಿಲ್ಲೆ ಕಮಲಾನಗರ ತಾಲ್ಲೂಕಿನ ಭಂಡಾರಕುಮ್ತಾದಲ್ಲಿ 28 ಮಿ.ಮೀ, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಇಡಗೂರಿನಲ್ಲಿ 24.5 ಮಿ.ಮೀ, ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಲ್ಲೂರಿನಲ್ಲಿ 19.5 ಮಿ.ಮೀ, ಹಾವೇರಿ ಜಿಲ್ಲೆ ಹಿರೇಕೆರೂರ ತಾಲ್ಲೂಕಿನ ನಿಡನೇಗಿಲಿನಲ್ಲಿ 14.5 ಮಿ.ಮೀ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ 11.6 ಮಿ.ಮೀ, ದಾವಣಗೆರೆ ತಾಲ್ಲೂಕಿನ ಅವರಗೊಳ್ಳದಲ್ಲಿ 10.5 ಮಿ.ಮೀ, ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಬೆಲವಂತರ ಹಾಗೂ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಸೊನ್ನದಲ್ಲಿ ತಲಾ 10 ಮಿ.ಮೀ ಮಳೆಯಾಗಿದೆ,ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ವಂದಲಗುಪ್ಪೆಯಲ್ಲಿ 9.5 ಮಿ.ಮೀ, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ 8.6 ಮಿ.ಮೀ, ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಹಳೆಬೀಡಿನಲ್ಲಿ 8 ಮಿ.ಮೀ, ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರಿನಲ್ಲಿ 7 ಮಿ.ಮೀ, ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಚೀಲೂರು ಹಾಗೂ ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ತಾಲ್ಲೂಕಿನ ಗಜರಕೋಟದಲ್ಲಿ ತಲಾ 5 ಮಿ.ಮೀ ಮಳೆಯಾಗಿದೆ.ರಾಯಚೂರು ತಾಲ್ಲೂಕಿನ ಜಂಬಲದಿನ್ನಿಯಲ್ಲಿ 3.5 ಮಿ.ಮೀ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಅರೂಡಿಯಲ್ಲಿ 2 ಮಿ.ಮೀ, ಕೊಪ್ಪಳ ತಾಲ್ಲೂಕು ಹೊಸಹಳ್ಳಿಯಲ್ಲಿ 1.5 ಮಿ.ಮೀ, ವಿಜಯಪುರ ತಾಲ್ಲೂಕಿನ ಬರಟಗಿ, ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಹೆಬ್ಬಾನಿಯಲ್ಲಿ ತಲಾ 1 ಮಿ.ಮೀ, ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹುಂಡಿಪುರದಲ್ಲಿ 0.5 ಮಿ.ಮೀ ಮಳೆಯಾಗಿದೆ.ಜಿಲ್ಲೆಗಳಲ್ಲಿ ಮಳೆಯಾದ ಪ್ರಮಾಣ