Karnataka Rains: ವಾರದ ನಂತರ ಕರ್ನಾಟಕದಲ್ಲಿ ಮಳೆ ಚುರುಕು, ಕರಾವಳಿಯಲ್ಲಿ ಅಧಿಕ
ಬೆಂಗಳೂರು: ಕರ್ನಾಟಕದಲ್ಲಿ ಜುಲೈ 8ರ ನಂತರ ಮಳೆ ಪ್ರಮಾಣ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕರಾವಳಿ ಭಾಗದ ಜಿಲ್ಲೆಗಳು ಸೇರಿದಂತೆ ಹಲವು ಕಡೆಗಳಲ್ಲಿ ಹೆಚ್ಚಿನ ಮಳೆಯಾಗಿದೆ.ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಮಳೆ ಮಾಹಿತಿ ಪ್ರಕಾರ, ಉತ್ತರ ಕನ್ನಡ, ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹೆಚ್ಚಿನ ಕಡೆ ಮಳೆಯಾಗಿದೆ.ಅದರಲ್ಲೂ ಉತ್ತರ ಕನ್

ಬೆಂಗಳೂರು: ಕರ್ನಾಟಕದಲ್ಲಿ ಜುಲೈ 8ರ ನಂತರ ಮಳೆ ಪ್ರಮಾಣ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕರಾವಳಿ ಭಾಗದ ಜಿಲ್ಲೆಗಳು ಸೇರಿದಂತೆ ಹಲವು ಕಡೆಗಳಲ್ಲಿ ಹೆಚ್ಚಿನ ಮಳೆಯಾಗಿದೆ.ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಮಳೆ ಮಾಹಿತಿ ಪ್ರಕಾರ, ಉತ್ತರ ಕನ್ನಡ, ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹೆಚ್ಚಿನ ಕಡೆ ಮಳೆಯಾಗಿದೆ.ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ 275 ಮಿ.ಮೀ ಮಳೆ ಸುರಿದಿದೆ. ಅಂಕೋಲಾ ಸಮೀಪದ ವಂದಿಗೆಯಲ್ಲಿ 270.5 ಮಿ.ಮೀ, ಅಲಗೇರಿಯಲ್ಲಿ 266.5 ಮಿ.ಮೀ. ಭಾವಿಕೇರಿಯಲ್ಲಿ 259 ಮಿ.ಮೀ, ಬೆಲಸೆಯಲ್ಲಿ 244 ಮಿ.ಮೀ ಮಳೆಯಾಗಿದೆ.ಕಾರವಾರ ತಾಲ್ಲೂಕಿನ ಕದ್ರ ಆದಲ್ಲಿ 238 ಮಿ.ಮೀ, ಅಂಕೋಲಾ ತಾಲ್ಲೂಕಿನ ಬೆಳಂಬಾರಿನಲ್ಲಿ 238 ಮಿ.ಮೀ, ಬೊಬ್ರವಾಡದಲ್ಲಿ 235.5 ಮಿ.ಮೀ, ಕುಮಟಾ ತಾಲ್ಲೂಕಿ ಹನೇಹಳ್ಳಿಯಲ್ಲಿ 231 ಮಿ.ಮೀ, ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿಯಲ್ಲಿ 225.5 ಮಿ.ಮೀ, ಶೆಟಗೇರಿಯಲ್ಲಿ 216.5 ಮಿ.ಮೀ, ಕುಮಟಾ ತಾಲ್ಲೂಕಿನ ನಡುಮಸಕೇರಿಯಲ್ಲಿ 204.5 ಮಿ.ಮೀ ಮಳೆ ಸುರಿದಿದೆ.ಕುಮಟಾ ತಾಲ್ಲೂಕಿನ ಹಿರೇಗುತ್ತಿಯಲ್ಲಿ 194.5 ಮಿ.ಮೀ, ಕಾರವಾರ ತಾಲ್ಲೂಕಿನ ವಾಯಿಲವಾಡದಲ್ಲಿ 189.5 ಮಿ.ಮೀ, ಗೋಟೆಗಾಳಿಯಲ್ಲಿ 187 ಮಿ.ಮೀ, ಹೊನ್ನಾವರ ತಾಲ್ಲೂಕಿನ ಕಡತೋಕದಲ್ಲಿ 184.5 ಮಿ.ಮೀ ಮಳೆಯಾಗಿದೆ.ಉಡುಪಿ ಜಿಲ್ಲೆ ಕಾಪು ತಾಲ್ಲೂಕಿನ ಹೆಜಮಾಡಿಯಲ್ಲಿ 183 ಮಿ,ಮೀ, ದಕ್ಷಿಣ ಕನ್ನಡ ಜಿಲ್ಲೆಯ ನೀರಮಾರ್ಗದಲ್ಲಿ 178.5 ಮಿ.ಮೀ, ಭಟ್ಕಳ ತಾಲ್ಲೂಕಿನ ಶಿರಾಲಿ ಹಾಗೂ ದಕ್ಷಿಣ ಕನ್ನಡದ ಮುಲ್ಕಿ ಸಮೀಪದ ಕಿಲಪಾಡಿಯಲ್ಲಿ ತಲಾ 172.5 ಮಿ.ಮೀ, ಉಡುಪಿ ಜಿಲ್ಲೆ ಕಾಪು ತಾಲ್ಲೂಕಿನ ಉಳಿರಗೋಳಿಯಲ್ಲಿ 151.5 ಮಿ.ಮೀ, ಕುಂದಾಪುರ ತಾಲ್ಲೂಲಿನ ಹಳ್ಳಿಹೊಳೆಯಲ್ಲಿ 147 ಮಿ.ಮೀ ಮಳೆಯಾಗಿದೆ.ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೆತಾಳುವಿನಲ್ಲಿ 105. ಮಿ.ಮೀ, ಆಗುಂಬೆಯಲ್ಲಿ 104.2 ಮಿ.ಮೀ ಮಳೆಯಾಗಿದೆ, ಕರಾವಳಿ ವಿವಿಧ ಭಾಗಗಳ ಮಳೆ ಮಾಹಿತಿ#Agumbe breaking the week-long dry spell, heavy showers lashed the this region.Rainfall of up to 80 mm was recorded across Agumbe and nearby villages within a few hours, benefiting the Tunga and Bhadra river catchments. pic.twitter.com/xy5uVtqqNP— Naveen Reddy (@navin_ankampali) July 16, 2026