Karnataka Reservoirs: ಕರ್ನಾಟಕದ ಈ ಆರು ಜಲಾಶಯಗಳಲ್ಲಿದೆ ಶೇ 50ಕ್ಕೂ ಅಧಿಕ ನೀರು
ಬೆಂಗಳೂರು: ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಹಾಗೂ ಕೇರಳದ ಮಲೆನಾಡು ಭಾಗದಲ್ಲಿ ಜುಲೈ ಮೊದಲ ವಾರ ಸುರಿದ ಭಾರೀ ಮಳೆಗೆ ಜಲಾಶಯಗಳಿಗೆ ಉತ್ತಮ ನೀರು ಹರಿದು ಬಂದಿತು. ಇದರಿಂದ ಕೆಲವು ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬಂದು ಜಲಾಶಯದ ನೀರಿನ ಮಟ್ಟವು ಶೇ 50ಕ್ಕಿಂತ ಅಧಿಕವಿದೆ. ಲಕೆಲವು ಜಲಾಶಯಗಳಲ್ಲಿ ಶೇ 25ಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಿದೆ.ಸದ್ಯ 14 ಜಲಾ

ಬೆಂಗಳೂರು: ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಹಾಗೂ ಕೇರಳದ ಮಲೆನಾಡು ಭಾಗದಲ್ಲಿ ಜುಲೈ ಮೊದಲ ವಾರ ಸುರಿದ ಭಾರೀ ಮಳೆಗೆ ಜಲಾಶಯಗಳಿಗೆ ಉತ್ತಮ ನೀರು ಹರಿದು ಬಂದಿತು. ಇದರಿಂದ ಕೆಲವು ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬಂದು ಜಲಾಶಯದ ನೀರಿನ ಮಟ್ಟವು ಶೇ 50ಕ್ಕಿಂತ ಅಧಿಕವಿದೆ. ಲಕೆಲವು ಜಲಾಶಯಗಳಲ್ಲಿ ಶೇ 25ಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಿದೆ.ಸದ್ಯ 14 ಜಲಾಶಯಗಳಲ್ಲಿ 355.26 ಟಿಎಂಸಿ ನೀರು ಸಂಗ್ರಹವಿದೆ. ಒಟ್ಟು 895.65 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು, ಕಳೆದ ವರ್ಷ ಇದೇ ದಿನ 654.99 ಟಿಎಂಸಿ ನೀರು ಸಂಗ್ರಹವಿತ್ತು. ಸದ್ಯ ಜಲಾಶಯಗಳಲ್ಲಿ ಶೇ 40ರಷ್ಟು ನೀರು ಲಭ್ಯವಿದೆ. ಜಲಾಶಯಕ್ಕೆ ಈಗಲೂ 47532 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮೂರು ದಿನದಲ್ಲಿ ಶೇ 75ರಷ್ಟು ಒಳಹರಿವು ತಗ್ಗಿದೆ.ಸದ್ಯ ಅತೀ ಹೆಚ್ಚು ನೀರು ಸಂಗ್ರಹವಿರುವ ಜಲಾಶಯಗಳಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಮೊದಲ ಸ್ಥಾನದಲ್ಲಿದೆ. ಇಲ್ಲಿ ಈಗ 23.68 ಟಿಎಂಸಿ ನೀರು ಸಂಗ್ರಹವಿದ್ದು. ಶೇ 78 ತುಂಬಿದೆ.ಮಹಾರಾಷ್ಟ್ರ ಮಳೆಯಿಂದ ನಾಲ್ಕು ದಿನದಲ್ಲೇ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ಶೇ 72ರಷ್ಟು ಭರ್ತಿಯಾಗಿದೆ. ಸದ್ಯ ಜಲಾಶಯದಲ್ಲಿ 89.14 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯಕ್ಕೆ ಈಗಲೂ 15189 ಕ್ಯೂಸೆಕ್ ನೀರು ಬರಿದು ಬರುತ್ತಿದೆ.ಕೊಡಗಿನ ಹಾರಂಗಿ ಜಲಾಶಯದಲ್ಲಿ ಈಗ ಶೇ 62ರಷ್ಟು ನೀರು ಸಂಗ್ರಹವಿದೆ. ಇಲ್ಲಿ 5.29 ಟಿಎಂಸಿ ನೀರು ಲಭ್ಯವಿದೆ. ಒಳಹರಿವು 1528 ಕ್ಯೂಸೆಕ್ ಇದೆ.ಮೈಸೂರು ಜಿಲ್ಲೆಯ ಕಬಿನಿ ಜಲಾಶಯವೂ ಕೇರಳದಲ್ಲಿನ ಮಳೆಯಿಂದ ಶೇ 61ರಷ್ಟು ತುಂಬಿದೆ. ಈಗ ಜಲಾಶಯದಲ್ಲಿ 11.89 ಟಿಎಂಸಿ ನೀರಿದೆ. ಜಲಾಶಯಕ್ಕೆ 2550 ಕ್ಯೂಸೆಕ್ ನೀರು ಹರಿದು ಬರುತ್ತಿದೆ.ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಲ್ಲಿ ಶೇ 60ರಷ್ಟು ನೀರು ಭರ್ತಿಯಾಗಿದೆ. ಈ ಜಲಾಶಯದಲ್ಲಿ ಸದ್ಯ 22.08 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯಕ್ಕೆ 754 ಕ್ಯೂಸೆಕ್ ನೀರು ಬರುತ್ತಿದೆ.ಯಾದಗಿರಿ ಜಿಲ್ಲೆ ನಾರಾಯಣಪುರ ಜಲಾಶಯದಲ್ಲಿ ಈಗ ಶೇ 59ರಷ್ಟು ನೀರು ಲಭ್ಯವಿದೆ. ಜಲಾಶಯದಲ್ಲಿ 19.60 ಟಿಎಂಸಿ ನೀರಿದೆ. ಒಳ ಹರಿವು ಈಗಲೂ ಶೂನ್ಯ.ಉಳಿದಂತೆ ಲಿಂಗನಮಕ್ಕಿ ಜಲಾಶಯದಲ್ಲಿ ಶೇ 30, ಸೂಪಾ ಜಲಾಶಯದಲ್ಲಿ ಶೇ 26, ವಾರಾಹಿ ಜಲಾಶಯದಲ್ಲಿ ಶೇ 25, ಕೆಆರ್ಎಸ್ ಜಲಾಶಯದಲ್ಲಿ ಶೇ 35, ಭದ್ರಾ ಜಲಾಶಯದಲ್ಲಿ ಶೇ 45, ತುಂಗಭದ್ರಾ ಜಲಾಶಯದಲ್ಲಿ ಶೇ 24, ಘಟಪ್ರಭಾದಲ್ಲಿ ಶೇ 39, ಮಲಪ್ರಭಾದಲ್ಲಿ ಶೇ 33 ರಷ್ಟು ನೀರು ಸಂಗ್ರಹವಾಗಿದೆ.