ಮೆಲೋನಿಯನ್ನು ಕೆಣಕಿದ ಟ್ರಂಪ್: ‘ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ’ ಎಂದ ಸಚಿವ
ರೋಮ್: ಅಮೆರಿಕದಂತಹ ಪ್ರಮುಖ ಮಿತ್ರ ರಾಷ್ಟ್ರದೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವುದು ಮುಖ್ಯ ಎಂದು ಇಟಲಿ ರಕ್ಷಣಾ ಸಚಿವ ಗ್ವಿಡೋ ಕ್ರೊಸೆಟ್ರೋ ಸೋಮವಾರ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ವಿರುದ್ಧ ವ್ಯಂಗ್ಯವಾಡಿದ ಬೆನ್ನಲ್ಲೇ, ಗ್ವಿಡೋ ಈ ಹೇಳಿಕೆ ನೀಡಿದ್ದಾರೆ.‘ಫ್ರಾನ್ಸ್ನಲ್ಲಿ ನಡೆದ ಜಿ7 ಶ

ರೋಮ್: ಅಮೆರಿಕದಂತಹ ಪ್ರಮುಖ ಮಿತ್ರ ರಾಷ್ಟ್ರದೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವುದು ಮುಖ್ಯ ಎಂದು ಇಟಲಿ ರಕ್ಷಣಾ ಸಚಿವ ಗ್ವಿಡೋ ಕ್ರೊಸೆಟ್ರೋ ಸೋಮವಾರ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ವಿರುದ್ಧ ವ್ಯಂಗ್ಯವಾಡಿದ ಬೆನ್ನಲ್ಲೇ, ಗ್ವಿಡೋ ಈ ಹೇಳಿಕೆ ನೀಡಿದ್ದಾರೆ.‘ಫ್ರಾನ್ಸ್ನಲ್ಲಿ ನಡೆದ ಜಿ7 ಶೃಂಗಸಭೆಯ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನನ್ನೊಂದಿಗೆ ಫೋಟೊ ತೆಗೆಸಿಕೊಳ್ಳಲು ಬೇಡಿಕೊಂಡಿದ್ದರು’ ಎಂದು ಅಮೆರಿಕ ಅಧ್ಯಕ್ಷ ಕಳೆದ ತಿಂಗಳು ಹೇಳಿದ್ದರು. ಅದಕ್ಕೆ ಮೆಲೋನಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.‘ನಿಮ್ಮೊಂದಿಗಿನ ಸ್ನೇಹವು ನಾನು ಜನಪ್ರಿಯತೆ ಹೆಚ್ಚಿಸಿಕೊಳ್ಳಲು ನೆರವಾಗಿಲ್ಲ. ನನ್ನ ಜನಪ್ರಿಯತೆಯು ಇಟಲಿಯ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡುವ ನನ್ನ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಅದನ್ನು ಕಾಪಾಡಲು ಬದ್ಧವಾಗಿದ್ದೇನೆ’ ಎಂದು ತಿರುಗೇಟು ನೀಡಿದ್ದರು.ಇದೇ ವಾರ ಟರ್ಕಿಯಲ್ಲಿ ನಡೆಯುವ ನ್ಯಾಟೋ ಶೃಂಗಸಭೆಯಲ್ಲಿ ಇಬ್ಬರೂ ಭಾಗವಹಿಸಲಿದ್ದಾರೆ. ಅದಕ್ಕೂ ಮುನ್ನ ತಮ್ಮದೇ ಒಡೆತನದ ‘ಟ್ರುತ್ ಸೋಶಿಯಲ್’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇಟಲಿ ಪ್ರಧಾನಿಯನ್ನು ಕೆಣಕಿದ್ದಾರೆ.ಫೋಟೊಗಾಗಿ ಬೇಡಿಕೊಂಡಿದ್ದ ಮೆಲೊನಿ: ಹೇಳಿಕೆ ಪುನರುಚ್ಛರಿಸಿದ ಟ್ರಂಪ್ ನನ್ನ ಜನಪ್ರಿಯತೆ ಬಗ್ಗೆ ನಿಮಗೆ ಚಿಂತೆ ಬೇಡ: ಟ್ರಂಪ್ಗೆ ಮೆಲೊನಿ ತಿರುಗೇಟುಮೆಲೋನಿ ಅವರು ತಮ್ಮನ್ನೇ ನೋಡುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಅಮೆರಿಕ ಅಧ್ಯಕ್ಷ, ‘ಪ್ರತಿಬಂಧಕ ಆದೇಶದ ಅಗತ್ಯವಿದೆ’ ಎಂಬ ಒಕ್ಕಣೆ ಬರೆದಿದ್ದಾರೆ. ಸದ್ಯಕ್ಕೆ ಮೆಲೋನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಗ್ವಿಡೋ ಕ್ರೊಸೆಟ್ರೋ ಮಾತನಾಡಿದ್ದಾರೆ.ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ; ಆದರೆ..‘ಆ (ಡೊನಾಲ್ಡ್ ಟ್ರಂಪ್) ಪೋಸ್ಟ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಆದರೆ, ಅಮೆರಿಕದಂತಹ ಪ್ರಮುಖ ಮಿತ್ರ ರಾಷ್ಟ್ರದೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳುವುದು ಮುಖ್ಯ. ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ; ರಾಷ್ಟ್ರಗಳ ನಡುವಿನ ಸಂಬಂಧ ಹಾಗೆಯೇ ಇರುತ್ತದೆ’ ಎಂದು ‘Sky TV’ಗೆ ಹೇಳಿಕೆ ನೀಡಿದ್ದಾರೆ.ಇನ್ನೊಂದೆಡೆ, ಪ್ರತಿಪಕ್ಷ ನಾಯಕರು ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಅಜಿಯೋನೆ ಪಕ್ಷದ ನಾಯಕ ಕಾರ್ಲೊ ಕ್ಯಾಲೆಂಡಾ ಅವರು ‘ಟ್ರಂಪ್ ಹೀನ, ಕೀಳು ಮಟ್ಟದ ದಬ್ಬಾಳಿಕೆಗಾರ’ ಎಂದು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮೆಲೋನಿ ಬೆಂಬಲಕ್ಕೆ ನಿಂತಿದ್ದಾರೆ.ಟ್ರಂಪ್ ಜತೆಗಿದ್ದ ಯುರೋಪಿನ ಏಕೈಕ ನಾಯಕಿ!ಜಾರ್ಜಿಯ ಮೆಲೋನಿ ಅವರು ಈ ಹಿಂದೆ ಟ್ರಂಪ್ ಪರ ನಿಲುವು ಹೊಂದಿದ್ದರು. ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರಕ್ಕೇರಿದ ಟ್ರಂಪ್, 2025ರಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ಭಾಗವಹಿಸಿದ್ದ ಯುರೋಪಿನ ಏಕೈಕ ನಾಯಕಿ ಎನಿಸಿದ್ದರು.ಆದರೆ, ಈ ವರ್ಷ ಇವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆ. ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ಖಂಡಿಸಿದ್ದ ಪೋಪ್ ಲಿಯೋ ವಿರುದ್ಧ ಟ್ರಂಪ್ ಟೀಕಾ ಪ್ರಹಾರ ನಡೆಸಿದ್ದನ್ನು ಮೆಲೋನಿ ಟೀಕಿಸಿದದರು.