ಕೊಡಗು: ಮಲ್ಲಳ್ಳಿ ಜಲಪಾತದಲ್ಲಿ ಸಿಲುಕಿದ್ದ ಆಂಧ್ರಪ್ರದೇಶದ ಇಬ್ಬರ ರಕ್ಷಣೆ
ಸೋಮವಾರಪೇಟೆ (ಕೊಡಗು ಜಿಲ್ಲೆ): ತಾಲ್ಲೂಕಿನ ಮಲ್ಲಳ್ಳಿ ಜಲಪಾತದ ಬಂಡೆಯಲ್ಲಿ ನೀರಿನ ನಡುವೆ ಸಿಲುಕಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಪಡೆ ಸೋಮವಾರ ರಕ್ಷಿಸಿದೆ.ಆಂಧ್ರಪ್ರದೇಶದ ವಿದ್ಯಾರ್ಥಿಗಳಾದ ಗಣೇಶ್ ನಾಯಕ್(21) ಹಾಗೂ ಸಂತೋಷ್ ಕುಮಾರ್(23) ಅಪಾಯದಿಂದ ಪಾರಾದವರು.ಇವರು ರಕ್ಷಣಾ ಬೇಲಿ ದಾಟಿ ನೀರಿಗೆ ಇಳಿದು, ಬಂಡೆಯ ಮೇಲೆ ಕುಳಿತಿದ್ದರು. ಆಗ ವಿದ್ಯುತ್ ಉತ್

ಸೋಮವಾರಪೇಟೆ (ಕೊಡಗು ಜಿಲ್ಲೆ): ತಾಲ್ಲೂಕಿನ ಮಲ್ಲಳ್ಳಿ ಜಲಪಾತದ ಬಂಡೆಯಲ್ಲಿ ನೀರಿನ ನಡುವೆ ಸಿಲುಕಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಪಡೆ ಸೋಮವಾರ ರಕ್ಷಿಸಿದೆ.ಆಂಧ್ರಪ್ರದೇಶದ ವಿದ್ಯಾರ್ಥಿಗಳಾದ ಗಣೇಶ್ ನಾಯಕ್(21) ಹಾಗೂ ಸಂತೋಷ್ ಕುಮಾರ್(23) ಅಪಾಯದಿಂದ ಪಾರಾದವರು.ಇವರು ರಕ್ಷಣಾ ಬೇಲಿ ದಾಟಿ ನೀರಿಗೆ ಇಳಿದು, ಬಂಡೆಯ ಮೇಲೆ ಕುಳಿತಿದ್ದರು. ಆಗ ವಿದ್ಯುತ್ ಉತ್ಪಾದನಾ ಘಟಕದಿಂದ ಹೊಳೆಗೆ ನೀರು ಬಿಡಲಾಗಿದೆ. ಈ ವೇಳೆ ಹೊರಡಿಸಿದ ಸೈರನ್ ಶಬ್ದ ವಿದ್ಯಾರ್ಥಿಗಳ ಗಮನಕ್ಕೆ ಬಂದಿಲ್ಲ. ಒಮ್ಮೆಗೆ ನೀರಿನ ರಭಸ ಹೆಚ್ಚಾಗಿ ಬಂಡೆ ಸುತ್ತಲೂ ನೀರು ಸೇರಿತು. ಈ ವೇಳೆ ಹೊರಬರಲಾಗದೇ ಅವರು ರಕ್ಷಣೆಗೆ ಮೊರೆ ಇಟ್ಟರು.ಸುಮಾರು 2 ಗಂಟೆಗಳ ಕಾಲ ಬಂಡೆಯನ್ನು ಹಿಡಿದುಕೊಂಡಿದ್ದ ಅವರನ್ನು ಸ್ಥಳೀಯರ ನೆರವಿನಿಂದ ಜೀವರಕ್ಷಕ ಜಾಕೆಟ್ ಹಾಗೂ ಹಗ್ಗವನ್ನು ಬಳಸಿ ರಕ್ಷಿಸಲಾಯಿತು ಎಂದು ಅಗ್ನಿಶಾಮಕ ಪಡೆಯ ಮೂಲಗಳು ತಿಳಿಸಿವೆ.
Read the complete story at Prajavani