ಭಾರತ ನಮ್ಮ ಪ್ರಬಲ ಮಿತ್ರರಲ್ಲಿ ಒಬ್ಬರು – ಅಮೆರಿಕ ಇಸ್ರೇಲ್ನ ಏಕೈಕ ಮಿತ್ರ ಎಂಬ ವ್ಯಾನ್ಸ್ ಹೇಳಿಕೆ ತಿರಸ್ಕರಿಸಿದ ನೆತನ್ಯಾಹು
– ಅಮೆರಿಕ ಸ್ನೇಹಿತರಾದ ಮಾತ್ರಕ್ಕೆ ಹೇಳಿದ್ದಕ್ಕಲ್ಲ ತಲೆಯಾಡಿಸುತ್ತೇನೆ ಎಂದಲ್ಲ ಜೆರುಸಲೆಮ್: ʻಇಸ್ರೇಲ್ ತನ್ನ ಏಕೈಕ ಪ್ರಬಲ ಮಿತ್ರ ಅಮೆರಿಕʼ (America) ಟೀಕಿಸುವುದನ್ನ ನಿಲ್ಲಿಸಬೇಕು ಎನ್ನುವ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಹೇಳಿಕೆಯನ್ನು ತಳ್ಳಿಹಾಕಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu), ʻಭಾರತವನ್ನು ಇಸ್ರೇಲ್ನ ಪ್ರಬಲ ಮಿತ್

– ಅಮೆರಿಕ ಸ್ನೇಹಿತರಾದ ಮಾತ್ರಕ್ಕೆ ಹೇಳಿದ್ದಕ್ಕಲ್ಲ ತಲೆಯಾಡಿಸುತ್ತೇನೆ ಎಂದಲ್ಲ ಜೆರುಸಲೆಮ್: ʻಇಸ್ರೇಲ್ ತನ್ನ ಏಕೈಕ ಪ್ರಬಲ ಮಿತ್ರ ಅಮೆರಿಕʼ (America) ಟೀಕಿಸುವುದನ್ನ ನಿಲ್ಲಿಸಬೇಕು ಎನ್ನುವ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಹೇಳಿಕೆಯನ್ನು ತಳ್ಳಿಹಾಕಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu), ʻಭಾರತವನ್ನು ಇಸ್ರೇಲ್ನ ಪ್ರಬಲ ಮಿತ್ರರಲ್ಲಿ ಒಬ್ಬರುʼ ಎಂದು ಹೇಳಿಕೊಂಡಿದ್ದಾರೆ. ಭಾರತದಿಂದ ಅಗಾಧ ಬೆಂಬಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೆತನ್ಯಾಹು, ಇಸ್ರೇಲ್ಗೆ ಭಾರತದಿಂದ ಅಗಾಧ ಬೆಂಬಲ ಇದೆ. ಅಮೆರಿಕದೊಂದಿಗೆ ಉತ್ತಮ ಸಂಬಂಧವಿದೆ ಅನ್ನೋ ಜೆ.ಡಿ ವ್ಯಾನ್ಸ್ (JD Vance) ಹೇಳಿಕೆಯನ್ನ ನಾನು ಗೌರವಿಸುತ್ತೇನೆ, ಹಾಗೆಂದ ಮಾತ್ರಕ್ಕೆ ಎಲ್ಲದಕ್ಕೂ ತಲೆಯಾಡಿಸುತ್ತೇನೆ ಎಂದು ಅರ್ಥವಲ್ಲ ಎಂದು ಕುಟುಕಿದ್ದಾರೆ. Netanyahu laughs as he DENIES Vance’s ‘only powerful ally’ claim Bibi: Israel has TONS of friends — picks India as an example ‘Boy, do we have tremendous support there’ pic.twitter.com/tQP5JHlSCs — RT (@RT_com) July 5, 2026 ಅಮೆರಿಕ ನಮ್ಮ ಶ್ರೇಷ್ಠ ಸ್ನೇಹಿತ ಅನ್ನೋದನ್ನ ಅಲ್ಲಗಳೆಯಲು ಸಾಧ್ಯವಿಲ್ಲ. ಆದ್ರೆ ನಮಗೆ ಇನ್ನೂ ಕೆಲವು ಸ್ನೇಹಿತರಿದ್ದಾರೆ. ಭಾರತದಂತಹ (India) ಅನೇಕ ದೇಶಗಳ ಬೆಂಬಲ ನಮಗಿದೆ. ಈ ಬಗ್ಗೆ ನಿಮಗೆ ತಿಳಿದಿದೆಯೇ ಅಂತ ವ್ಯಾನ್ಸ್ಗೆ ತಿರುಗೇಟು ನೀಡಿದ್ದಾರೆ. ಈ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಹಾಗೂ ಅಂತರರಾಷ್ಟ್ರೀಯ ಮಾಧ್ಯಮಗಳ ಕೆಲವು ವಿಭಾಗಗಳಲ್ಲಿ ಟೀಕೆಗಳ ಹೊರತಾಗಿಯೂ ಇಸ್ರೇಲ್ ಹಲವಾರು ದೇಶಗಳಿಂದ ಬೆಂಬಲ ಪಡೆಯುತ್ತಿದೆ ಎಂಬುದನ್ನು ನೆತನ್ಯಾಹು ಹೇಳಿಕೊಂಡಿದ್ದಾರೆ. ಹಲವು ದೇಶದ ನಾಯಕರು ನನಗೆ ಕರೆ ಮಾಡಿದ್ದಾರೆ. ʻನೋಡು… ಸಾರ್ವಜನಿಕವಾಗಿ ನಾನು ನಿಮಗೆ ಬೆಂಬಲ ಘೋಷಿಸಲು ಸಮಸ್ಯೆಯಿದೆ. ಆದ್ರೆ ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ನಾವು ಕೆಲವು ಒಪ್ಪಂದಗಳನ್ನೂ ಮಾಡಿಕೊಳ್ಳಬಹುದು. ನಿಮ್ಮ ಮಿಲಿಟರಿ ಕೆಲ ವಿಷಯಗಳನ್ನು ನಮಗೂ ಕಲಿಸಬಹುದು ಜೊತೆಗೆ ನಿಮ್ಮ ಎಐ ಸೈಬರ್ ಪರಿಣತಿಯನ್ನು ನಮ್ಮೊಂದಿಗೂ ಹಂಚಿಕೊಳ್ಳಬಹುದು ಎಂದಿದ್ದಾರೆ. ಇಂದು ತಂತ್ರಜ್ಞಾನದಲ್ಲಿ ಇಸ್ರೇಲ್ ಜಾಗತಿಕ ನಾಯಕನಾಗಿ ಗುರುತಿಸಿಕೊಂಡಿದೆ. ವಿಶ್ವದ ಸೈಬರ್ ತಂತ್ರಜ್ಞಾನದಲ್ಲಿ ಇಸ್ರೇಲ್ 2ನೇ ಸ್ಥಾನದಲ್ಲಿದೆ ಎಂದು ನಿಮಗೆ ತಿಳಿದಿದೆ. ಏಕೆಂದ್ರೆ ನಮ್ಮ ತಂತ್ರಜ್ಞಾನ ತುಂಬಾ ಉತ್ತಮವಾಗಿದೆ. ಆದ್ದರಿಂದ ಅಮೆರಿಕ ಒಂದೇ ನಮ್ಮ ಏಕೈಕ ಮಿತ್ರ ಅಲ್ಲ, ನಮಗೆ ಅನೇಕ ಸ್ನೇಹಿತರಿದ್ದಾರೆ ಎಂದು ನೆತನ್ಯಾಹು ಹೇಳಿದ್ದಾರೆ.