ರಾಮ ಮಂದಿರ ಟ್ರಸ್ಟ್: ಚಂಪತ್ ರಾಯ್ ಸ್ಥಾನ ತುಂಬಲಿರುವ ಬಜರಂಗ್ ಬಾಗ್ಡಾ ಯಾರು?
ಅಯೋಧ್ಯಾ: ರಾಮ ಮಂದಿರದ ದೇಣಿಗೆ ಅಕ್ರಮ ಆರೋಪಗಳ ಕುರಿತು ತನಿಖೆ ನಡೆಯುತ್ತಿರುವ ಹೊತ್ತಿನಲ್ಲೇ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನಲ್ಲಿ ಮಹತ್ವದ ನಾಯಕತ್ವ ಬದಲಾವಣೆಯಾಗಿದೆ. ವಿಶ್ವ ಹಿಂದೂ ಪರಿಷತ್ನ (ವಿಎಚ್ಪಿ) ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಜರಂಗ್ ಲಾಲ್ ಬಾಗ್ಡಾ ಅವರನ್ನು ಟ್ರಸ್ಟ್ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮ

ಅಯೋಧ್ಯಾ: ರಾಮ ಮಂದಿರದ ದೇಣಿಗೆ ಅಕ್ರಮ ಆರೋಪಗಳ ಕುರಿತು ತನಿಖೆ ನಡೆಯುತ್ತಿರುವ ಹೊತ್ತಿನಲ್ಲೇ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನಲ್ಲಿ ಮಹತ್ವದ ನಾಯಕತ್ವ ಬದಲಾವಣೆಯಾಗಿದೆ. ವಿಶ್ವ ಹಿಂದೂ ಪರಿಷತ್ನ (ವಿಎಚ್ಪಿ) ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಜರಂಗ್ ಲಾಲ್ ಬಾಗ್ಡಾ ಅವರನ್ನು ಟ್ರಸ್ಟ್ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.ಇದುವರೆಗೆ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಇಂದು (ಸೋಮವಾರ, ಜುಲೈ 6) ನಡೆದ ಟ್ರಸ್ಟ್ನ ಸಭೆಯಲ್ಲಿ ಅಂಗೀಕರಿಸಲಾಗಿದೆ. ಬಳಿಕ, ಬಾಗ್ಡಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ವಿಎಚ್ಪಿ ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಹಲವು ವರ್ಷಗಳಿಂದ ಸಂಘಟನೆ ಮತ್ತು ಹಣಕಾಸು ನಿರ್ವಹಣೆಯ ಜವಾಬ್ದಾರಿ ನಿರ್ವಹಿಸಿರುವ ಬಾಗ್ಡಾ, ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡ ನಂತರವಷ್ಟೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ.ಯಾರು ಈ ಬಾಗ್ಡಾ?ರಾಜಸ್ಥಾನದ ಸಿಕರ್ ಜಿಲ್ಲೆಯ ಬಗ್ಡಾ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್ (ಸಿಎ). ಲೋಸಲ್ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಜೈಪುರದ ಯೂನಿವರ್ಸಿಟಿ ಕಾಲೇಜ್ ಆಫ್ ಕಾಮರ್ಸ್ನಲ್ಲಿ ವಾಣಿಜ್ಯ ಪದವಿ ಪೂರೈಸಿದ್ದಾರೆ. ನಂತರ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮೂಲಕ ಚಾರ್ಟರ್ಡ್ ಅಕೌಂಟೆಂಟ್ ಪದವಿ ಪಡೆದಿದ್ದಾರೆ.ರಾಮಮಂದಿರ ದೇಣಿಗೆ ಕಳವು: ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ ಅಂಗೀಕಾರರಾಮನು ಎಲ್ಲವನ್ನೂ ನೋಡುತ್ತಿದ್ದಾನೆ: ದೇಣಿಗೆ ದುರುಪಯೋಗ ಬೆನ್ನಲ್ಲೇ ಭಕ್ತರ ಮಾತುಸಂಪೂರ್ಣವಾಗಿ ಸಂಘಟನಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮುನ್ನ ಬಾಗ್ಡಾ ಅವರು, ಸಾರ್ವಜನಿಕ ವಲಯದ ಹಲವು ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದರು.ರೈಟ್ಸ್ ಲಿಮಿಟೆಡ್ನಲ್ಲಿ 2000ರಿಂದ 2007ರವರೆಗೆ ಹಣಕಾಸು ವಿಭಾಗದ ನಿರ್ದೇಶಕರಾಗಿ, ನಂತರ ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ (ನಾಲ್ಕೊ) ಸಂಸ್ಥೆಯಲ್ಲಿ ಹಣಕಾಸು ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್ಒ) ಕಾರ್ಯನಿರ್ವಹಿಸಿದ್ದರು. 2011ರಲ್ಲಿ ಅದೇ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ (ಸಿಎಂಡಿ) ನೇಮಕಗೊಂಡಿದ್ದರು.ಹೀಗೆ, ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಆಡಳಿತ ನಡೆಸಿದ ಅನುಭವವೇ ರಾಮ ಮಂದಿರ ಟ್ರಸ್ಟ್ನಲ್ಲಿ ಅವರಿಗೆ ಪ್ರಮುಖ ಜವಾಬ್ದಾರಿ ದೊರಕಲು ಕಾರಣವಾಗಿದೆ.BAJRANG BAGRA TAKES CHAMPAT RAI'S PLACE.VHP's Bajrang Bagra set to be the Ram Mandir Trusts new general secretary. The last known video statement of Bagra was in the context of mass killings of Hindus in Bangladesh. pic.twitter.com/ekOqXToJAA— Rahul Shivshankar (@RShivshankar) July 6, 2026 ಏಕಲ್ ಅಭಿಯಾನಕಾರ್ಪೊರೇಟ್ ಕ್ಷೇತ್ರ ತೊರೆದು ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯರಾದ ಬಾಗ್ಡಾ, 2013ರಿಂದ 2021ರವರೆಗೆ ಗ್ರಾಮೀಣ ಶಿಕ್ಷಣ ಚಳವಳಿಯಾದ ‘ಏಕಲ್ ಅಭಿಯಾನ’ದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲಿ ಈ ಅಭಿಯಾನವು 62 ಸಾವಿರಕ್ಕೂ ಹೆಚ್ಚು ಗ್ರಾಮಗಳಿಗೆ ವಿಸ್ತರಿಸಿತ್ತು.ಇದರಿಂದಾಗಿ ಸುಮಾರು 59 ಸಾವಿರ ಶಾಲೆಗಳ ಮೂಲಕ 16 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಕೌಶಲಾಭಿವೃದ್ಧಿ ಹಾಗೂ ಸಮುದಾಯ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ದೊರೆತಿತ್ತು.2021ರಲ್ಲಿ ವಿಶ್ವ ಹಿಂದೂ ಪರಿಷತ್ನ ಸಹ ಪ್ರಧಾನ ಕಾರ್ಯದರ್ಶಿಯಾದ ಅವರನ್ನು, 2024ರ ಫೆಬ್ರವರಿಯಲ್ಲಿ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು.ಬಾಗ್ಡಾ ಅವರು ಹಣಕಾಸು, ಆಡಳಿತ ಮತ್ತು ಸಂಘಟನೆಯಲ್ಲಿ ಪರಿಣತಿ ಹೊಂದಿರುವ ಸಮರ್ಥ ಆಡಳಿತಗಾರನಾಗಿ ವಿಶ್ವ ಹಿಂದೂ ಪರಿಷತ್ನಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ರಾಮ ಮಂದಿರ ಟ್ರಸ್ಟ್ನ ಆಡಳಿತ ವ್ಯವಸ್ಥೆ ಮತ್ತು ಕಾರ್ಯನಿರ್ವಹಣೆಯನ್ನು ಬಲಪಡಿಸುತ್ತಾರೆ ಎಂಬ ನಿರೀಕ್ಷೆ ಬಲವಾಗಿದೆ.ಬಾಗ್ಡಾ ಅವರೇ ಏಕೆ?ಸಭೆಯಲ್ಲಿ ಚರ್ಚೆಯಾದ ವಿಚಾರಗಳುನಾಯಕತ್ವ ಬದಲಾವಣೆ ಮಾತ್ರವಲ್ಲದೆ, ರಾಮ ಮಂದಿರ ದೇಣಿಗೆ ಅಕ್ರಮ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಮಧ್ಯಂತರ ವರದಿಯನ್ನೂ ಸಭೆಯಲ್ಲಿ ಪರಿಶೀಲಿಸಲಾಗಿದೆ.2025–26ನೇ ಹಣಕಾಸು ವರ್ಷದಲ್ಲಿ ಲೆಕ್ಕಪರಿಶೋಧನೆಗೆ ಒಳಪಡದ ಆದಾಯ, ವೆಚ್ಚದ ಲೆಕ್ಕಪತ್ರಗಳು, ಆಯವ್ಯಯ ಪಟ್ಟಿ ಹಾಗೂ ಆಡಳಿತಾತ್ಮಕ ವಿಷಯಗಳ ಕುರಿತೂ ಚರ್ಚೆಯಾಗಿದೆ.ಅಧ್ಯಕ್ಷ ನೃತ್ಯ ಗೋಪಾಲ್ ದಾಸ್, ಖಜಾಂಚಿ ಗೋವಿಂದ ದೇವ ಗಿರಿ, ಕೆ. ಪರಾಶರನ್, ವಾಸುದೇವಾನಂದ ಸರಸ್ವತಿ, ವಿಶ್ವಪ್ರಸನ್ನತೀರ್ಥ, ಪರಮಾನಂದ ಗಿರಿ, ಕೃಷ್ಣ ಮೋಹನ್ ಹಾಗೂ ದಿನೇಂದ್ರ ದಾಸ್ ಸೇರಿದಂತೆ ಟ್ರಸ್ಟ್ನ ಒಟ್ಟು 9 ಖಾಯಂ ಸದಸ್ಯರ ಪೈಕಿ ಏಳು ಮಂದಿ ಸಭೆಯಲ್ಲಿ ಖುದ್ದಾಗಿ ಹಾಜರಿದ್ದರು. ಆದರೆ, ಆರೋಪ ಎದುರಿಸುತ್ತಿರುವ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಗೈರಾಗಿದ್ದರು.