ಇದೇ ನನ್ನ ಕೊನೆಯ ವಿಶ್ವಕಪ್: ಪೋರ್ಚುಗಲ್ ತಾರೆ ರೊನಾಲ್ಡೊ ವಿದಾಯ ಘೋಷಣೆ
ಟೆಕ್ಸಾಸ್: 'ಇದುವೇ ನನ್ನ ವೃತ್ತಿ ಜೀವನದ ಕೊನೆಯ ವಿಶ್ವಕಪ್. ಹಾಗಾಗಿ ಪ್ರತಿಯೊಂದು ಕ್ಷಣವನ್ನು ಆನಂದಿಸಲು ಬಯಸುತ್ತೇನೆ' ಎಂದು ಪೋರ್ಚುಗಲ್ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಘೋಷಿಸಿದ್ದಾರೆ. 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಪೇನ್ ವಿರುದ್ಧ ನಡೆಯಲಿರುವ ಮಹತ್ವದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ 4

ಟೆಕ್ಸಾಸ್: 'ಇದುವೇ ನನ್ನ ವೃತ್ತಿ ಜೀವನದ ಕೊನೆಯ ವಿಶ್ವಕಪ್. ಹಾಗಾಗಿ ಪ್ರತಿಯೊಂದು ಕ್ಷಣವನ್ನು ಆನಂದಿಸಲು ಬಯಸುತ್ತೇನೆ' ಎಂದು ಪೋರ್ಚುಗಲ್ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಘೋಷಿಸಿದ್ದಾರೆ. 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಪೇನ್ ವಿರುದ್ಧ ನಡೆಯಲಿರುವ ಮಹತ್ವದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ 41 ವರ್ಷದ ರೊನಾಲ್ಡೊ, ನಿವೃತ್ತಿ ಕುರಿತು ಎದ್ದಿರುವ ಊಹಾಪೋಹಾಗಳಿಗೆ ಸ್ಪಷ್ಟನೆ ನೀಡಿದ್ದಾರೆ. 'ಹೌದು, ಇದು ನನ್ನ ಪಾಲಿನ ಕೊನೆಯ ವಿಶ್ವಕಪ್. ಹಾಗಾಗಿ ಸಾಧ್ಯವಾದಷ್ಟು ಆನಂದಿಸಲು ಬಯಸುತ್ತೇನೆ. ಆದರೆ, ನಾಳೆಯ ಪಂದ್ಯವೇ ವಿಶ್ವಕಪ್ನಲ್ಲಿ ನನ್ನ ಕೊನೆಯ ಪಂದ್ಯವಾಗದಿರಲಿ ಎಂದು ಆಶಿಸುತ್ತೇನೆ' ಎಂದಿದ್ದಾರೆ. ಪ್ರಸಕ್ತ ವಿಶ್ವಕಪ್ನಲ್ಲಿ ಈಗಾಗಲೇ 3 ಗೋಲುಗಳನ್ನು ಗಳಿಸಿರುವ ರೊನಾಲ್ಡೊ, ಪೋರ್ಚುಗಲ್ ತಂಡವು ಪ್ರಶಸ್ತಿ ಗೆಲ್ಲುವ ಭರವಸೆಯೊಂದಿಗೆ ಅಖಾಡಕ್ಕಿಳಿದಿದೆ ಎಂದು ಹೇಳಿದ್ದಾರೆ. ️ "It's about passion", Cristiano Ronaldo. #FIFAWorldCup pic.twitter.com/qSvCxBLMEN— FIFA World Cup (@FIFAWorldCup) July 5, 2026 'ಬಲಿಷ್ಠ ಸ್ಪೇನ್ ತಂಡವನ್ನು ಎದುರಿಸಲು ತಮ್ಮ ತಂಡ ಸಂಪೂರ್ಣ ಸಜ್ಜಾಗಿದೆ. ದೇಶಕ್ಕಾಗಿ ತಮ್ಮ ಶ್ರೇಷ್ಠ ಪ್ರದರ್ಶನವನ್ನು ನೀಡಲು ಬಯಸುತ್ತೇನೆ' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ನಡುವೆ ನಿವೃತ್ತಿಯ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗೆ ಅಸಮಾಧಾನ ವ್ಯಕ್ತಪಡಿಸಿರುವ ರೊನೊಲ್ಡೊ, 'ನಾನು ಯಾವಾಗ ನಿವೃತ್ತಿಯಾಗಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇನೆ, ಇತರರಲ್ಲ. ಪದೇ ಪದೇ ಇದೇ ಪ್ರಶ್ನೆಯನ್ನು ಕೇಳುವುದು ಸಮಯದ ವ್ಯರ್ಥ. ಸದ್ಯಕ್ಕೆ ನನ್ನ ಸಂಪೂರ್ಣ ಗಮನ ದೇಶಕ್ಕಾಗಿ ಆಡುವುದರ ಮೇಲಿದೆ' ಎಂದು ಹೇಳಿದ್ದಾರೆ. ಮೆಸ್ಸಿ ಬಳಿಕ ರೊನಾಲ್ಡೊ...ಫಿಫಾ ವಿಶ್ವಕಪ್ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಸಾಲಿನಲ್ಲಿ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ನಂತರದ ಸ್ಥಾನದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಇದ್ದಾರೆ. ಈವರೆಗೆ ಮೆಸ್ಸಿ 30 ಹಾಗೂ ರೊನಾಲ್ಡೊ 26 ವಿಶ್ವಕಪ್ ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ ಅತಿ ಹೆಚ್ಚು ಗೋಲು ಸರದಾರರ ಪಟ್ಟಿಯಲ್ಲಿ 20 ಗೋಲುಗಳೊಂದಿಗೆ ಮೆಸ್ಸಿ ಅಗ್ರಸ್ಥಾನದಲ್ಲಿದ್ದಾರೆ. ರೊನಾಲ್ಡೊ ಈವರೆಗೆ 11 ಗೋಲುಗಳನ್ನು ಗಳಿಸಿದ್ದಾರೆ.Movement on the all-time appearances table after the latest round of games #FIFAWorldCup pic.twitter.com/QpEA9rw4Hi— FIFA World Cup (@FIFAWorldCup) July 4, 2026 ಐದು ಬಾರಿಯ ಚಾಂಪಿಯನ್ ಬ್ರೆಜಿಲ್ಗೆ ಆಘಾತ: ನೇಮರ್ ಕಣ್ಣೀರಿನ ವಿದಾಯಫಿಫಾ ವಿಶ್ವಕಪ್: ಹಾಲೆಂಡ್ ಅವಳಿ ಗೋಲು, ಬ್ರೆಜಿಲ್ ಮಣಿಸಿದ ನಾರ್ವೆ ಕ್ವಾರ್ಟರ್ಗೆ