ಮನೆಯಲ್ಲಿರುವ ಸ್ಟೀಲ್ ಕಂಬಿ ಹೊಸದರಂತೆ ಹೊಳೆಯಲು ಈ ರೀತಿ ಸ್ವಚ್ಛ ಮಾಡಿ...
ಐಷಾರಾಮಿ ಮನೆಗಳಲ್ಲಿ ಕಿಟಕಿ, ಸ್ಟೇರ್ ಕೇಸ್ ಹಾಗೂ ಗೇಟ್ಗಳನ್ನು ಸ್ಟೀಲ್ನಿಂದ ಮಾಡಿಸಿರುತ್ತಾರೆ. ಸ್ಟೀಲ್ ಕಂಬಿಗಳು ನೋಡಲು ಸುಂದರ ಮತ್ತು ಐಷಾರಾಮಿಯಾಗಿ ಕಾಣುತ್ತವೆ. ಆದರೆ ಕಾಲಕ್ರಮೇಣ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಕಾಂತಿಯನ್ನು ಕಳೆದುಕೊಳ್ಳುತ್ತವೆ. ಕೆಲವು ವೇಳೆ ಕಂದು ಬಣ್ಣದ ಚುಕ್ಕೆಗಳೂ ಕಂಬಿಯ ಮೇಲೆ ಉಂಟಾಗುತ್ತವೆ. ಹೀಗಾಗಿ ಸ್ಟೀಲ್ ಕಂಬಿಗಳನ್ನು ಸ

ಐಷಾರಾಮಿ ಮನೆಗಳಲ್ಲಿ ಕಿಟಕಿ, ಸ್ಟೇರ್ ಕೇಸ್ ಹಾಗೂ ಗೇಟ್ಗಳನ್ನು ಸ್ಟೀಲ್ನಿಂದ ಮಾಡಿಸಿರುತ್ತಾರೆ. ಸ್ಟೀಲ್ ಕಂಬಿಗಳು ನೋಡಲು ಸುಂದರ ಮತ್ತು ಐಷಾರಾಮಿಯಾಗಿ ಕಾಣುತ್ತವೆ. ಆದರೆ ಕಾಲಕ್ರಮೇಣ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಕಾಂತಿಯನ್ನು ಕಳೆದುಕೊಳ್ಳುತ್ತವೆ. ಕೆಲವು ವೇಳೆ ಕಂದು ಬಣ್ಣದ ಚುಕ್ಕೆಗಳೂ ಕಂಬಿಯ ಮೇಲೆ ಉಂಟಾಗುತ್ತವೆ. ಹೀಗಾಗಿ ಸ್ಟೀಲ್ ಕಂಬಿಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಉತ್ತಮ. ಕಂಬಿಗಳನ್ನು ಸ್ವಚ್ಛಗೊಳಿಸಲು ಕೆಲವು ರಾಸಾಯನಿಕ ದ್ರಾವಣಗಳು ಲಭ್ಯವಿವೆ. ಅವುಗಳ ಹೊರತಾಗಿಯೂ ಮನೆಯಲ್ಲಿ ಬಳಸುವ ಕೆಲವು ವಸ್ತುಗಳಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು. ಸ್ಟೀಲ್ ಕಂಬಿಗಳನ್ನು ಸ್ವಚ್ಛಗೊಳಿಸಲು ಕೆಲವು ಸಲಹೆಗಳು ಇಲ್ಲಿವೆ..ಉಗುರು ಬೆಚ್ಚಗಿನ ನೀರುಒಂದು ಬಟ್ಟಲಿನಲ್ಲಿ ಉಗುರು ಬೆಚ್ಚಗಿನ ನೀರನ್ನು ಹಾಕಿ, ಅದರೊಳಗೆ ಪಾತ್ರೆ ಸ್ವಚ್ಛಗೊಳಿಸುವ ಲಿಕ್ವಿಡ್ ಅಥವಾ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮೃದುವಾದ ಬಟ್ಟೆಯಲ್ಲಿ ಕಂಬಿಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಗಡುಸಾದ ಬಟ್ಟೆಯ ಬದಲು ಕಾಟನ್ ಬಟ್ಟೆ ಬಳಸುವುದು ಉತ್ತಮ.ಬಿಳಿ ವಿನೆಗರ್ ಬಳಸಬಹುದುಒಂದು ಬಟ್ಟಲಿಗೆ ನೀರು ಮತ್ತು ವಿನೆಗರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು, ಕೊಳೆಯಾಗಿರುವ ಕಂಬಿಗಳನ್ನು ಬಟ್ಟೆಯಿಂದ ಒರೆಸುವ ಮೂಲಕ ಸ್ವಚ್ಛಗೊಳಿಸಬಹುದು. ಈ ರೀತಿ ಸ್ವಚ್ಛಗೊಳಿಸುವುದರಿಂದ ಎಣ್ಣೆಯ ಜಿಡ್ಡು, ಕೊಳೆ ಮತ್ತು ಕಲೆಗಳು ಮಾಯವಾಗುತ್ತವೆ. ಬೇಕಿಂಗ್ ಸೋಡಾ ಹೆಚ್ಚು ದಿನಗಳವರೆಗೆ ಸ್ವಚ್ಛಗೊಳಿಸದೆ ಇರುವ ಕಂಬಿಗಳು ತುಕ್ಕು ಹಿಡಿದಂತೆ ಕಾಣುತ್ತವೆ. ಆಗ ಒಂದು ಬಟ್ಟಲಿಗೆ ಬೇಕಿಂಗ್ ಸೋಡಾ ಮತ್ತು ನೀರನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ತುಕ್ಕು ಹಿಡಿದಂತೆ ಕಾಣುವ ಜಾಗಕ್ಕೆ ಹಚ್ಚಿ 15 ನಿಮಿಷ ಬಿಟ್ಟು, ಉಜ್ಜಿ ತೊಳೆದರೆ ಕಲೆ ಮಾಯವಾಗುತ್ತದೆ.ನಿಂಬೆ ರಸ ಬಳಸಿನಿಂಬೆಯಲ್ಲಿ ಆಮ್ಲೀಯತೆಯ ಗುಣ ಇರುವುದರಿಂದ ನೈಸರ್ಗಿಕ ಕ್ಲಿನಿಂಗ್ನಂತೆ ಕೆಲಸ ಮಾಡುತ್ತದೆ. ಒಂದು ನಿಂಬೆಯನ್ನು ತೆಗೆದುಕೊಂಡು ಕತ್ತರಿಸಿ, ಅದರ ನಿಂಬೆ ಹೋಳನ್ನು ತೆಗದುಕೊಂಡು ಕಂಬಿಗಳ ಮೇಲೆ ಚೆನ್ನಾಗಿ ಉಜ್ಜಿ ಸ್ವಚ್ಛಗೊಳಿಸಿ. ಬಳಿಕ ಒದ್ದೆ ಬಟ್ಟೆ ತೆಗೆದುಕೊಂಡು ಕಂಬಿಗಳನ್ನು ಒರೆಸಿ.ಕೊಬ್ಬರಿ ಎಣ್ಣೆಕೊಬ್ಬರಿ ಎಣ್ಣೆಯನ್ನು ಮಾಲಿರಶರ್ ಆಗಿ ಬಳಕೆ ಮಾಡಬಹುದು. ಸ್ಟೀಲ್ ಕಂಬಿ ಒಣಗಿದ ಬಳಿಕ ಒಂದು ಬಟ್ಟೆಗೆ ಒಂದೆರಡು ಹನಿ ಕೊಬ್ಬರಿ ಎಣ್ಣೆ ಹಾಕಿಕೊಂಡು ಬಳಸಿದರೆ, ಕಂಬಿಗಳು ಹೊಸದರಂತೆ ಹೊಳೆಯುತ್ತವೆ. ಸ್ವಚ್ಛತೆಗೆ ಮುನ್ನ ಅನುಸರಿಸಬೇಕಾದ ಕ್ರಮಗಳುಸ್ಟೀಲ್ ಕಂಬಿಗಳನ್ನು ಸ್ವಚ್ಛಗೊಳಿಸಲು ಸ್ಟೀಲ್ ಸ್ಕ್ರಬ್ಬರ್, ಗಟ್ಟಿಯಾದ ಬ್ರಷ್ಗಳನ್ನು ಬಳಸಬೇಡಿ. ಇದರಿಂದಾಗಿ ಕಂಬಿಯಲ್ಲಿ ಗೀರು ಮೂಡುವ ಸಾಧ್ಯತೆ ಇರುತ್ತದೆ. ಕಂಬಿಗಳನ್ನು ಒಮ್ಮೆ ಸ್ವಚ್ಛಗೊಳಿಸಿದ ನಂತರ, ಮತ್ತೆ ಒಣ ಬಟ್ಟೆಯಿಂದ ಸ್ವಚ್ಛಗೊಳಿಸಬೇಡಿ. ಬ್ಲೀಚ್ ಅಥವಾ ಕ್ಲೋರಿನ್ ಇರುವ ರಾಸಾಯನಿಕಗಳನ್ನು ಬಳಸಬೇಡಿ. ಏಕೆಂದರೆ, ಇವು ಸ್ಟೀಲ್ನ ಗುಣಮಟ್ಟವನ್ನು ಹಾಳುಮಾಡಬಹುದು.