4 ಭಾಷೆ ಮಾತನಾಡುತ್ತೀರಾ? ಹಾಗಾದರೆ ದೇಹಕ್ಕಿಂತ ನಿಮ್ಮ ಮಿದುಳು 13ವರ್ಷ ಚಿಕ್ಕದಂತೆ!
ಒಂದಕ್ಕಿಂತ ಹೆಚ್ಚು ಭಾಷೆಯನ್ನು ಕಲಿಯುವುದು, ಮಾತನಾಡುವುದರಿಂದ ಮಿದುಳಿಗೆ ವಯಸ್ಸಾಗುವಿಕೆಯು ನಿಧಾನವಾಗುತ್ತದೆ ಎಂದು ಇತ್ತೀಚೆಗೆ ನಡೆದ ಅಧ್ಯಯನವೊಂದು ಬಹಿರಂಗ ಪಡಿಸಿದೆ. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡುವ ಜನರ ಮಿದುಳು ಹೆಚ್ಚು ಸಕ್ರಿಯವಾಗಿರುವುದರ ಜೊತೆಗೆ ಚುರುಕಾಗಿರುತ್ತದೆ. ನಮ್ಮ ಮಿದುಳು ಶತಕೋಟಿಯಷ್ಟು ನರ ಕೋಶಗಳಿಂದ ಮಾಡಲ್ಪಟ್ಟಿದೆ. ದೇಹಕ್ಕೆ

ಒಂದಕ್ಕಿಂತ ಹೆಚ್ಚು ಭಾಷೆಯನ್ನು ಕಲಿಯುವುದು, ಮಾತನಾಡುವುದರಿಂದ ಮಿದುಳಿಗೆ ವಯಸ್ಸಾಗುವಿಕೆಯು ನಿಧಾನವಾಗುತ್ತದೆ ಎಂದು ಇತ್ತೀಚೆಗೆ ನಡೆದ ಅಧ್ಯಯನವೊಂದು ಬಹಿರಂಗ ಪಡಿಸಿದೆ. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡುವ ಜನರ ಮಿದುಳು ಹೆಚ್ಚು ಸಕ್ರಿಯವಾಗಿರುವುದರ ಜೊತೆಗೆ ಚುರುಕಾಗಿರುತ್ತದೆ. ನಮ್ಮ ಮಿದುಳು ಶತಕೋಟಿಯಷ್ಟು ನರ ಕೋಶಗಳಿಂದ ಮಾಡಲ್ಪಟ್ಟಿದೆ. ದೇಹಕ್ಕೆ ವಯಸ್ಸಾದಂತೆ, ಮಿದುಳಿನ ಒಳಗಿನ ನರಕೋಶಗಳೊಂದಿಗೆ ಸಂಪರ್ಕವು ಕ್ಷೀಣಿಸುತ್ತಾ ಹೋಗುತ್ತದೆ. ಇದು ಮುನುಷ್ಯನ ಆಲೋಚನಾ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ.‘ಯುರೋಪಿಯನ್ ನರವಿಜ್ಞಾನ ಸಂಘಗಳ ಒಕ್ಕೂಟ (ಎಫ್ಇಎನ್ಎಸ್)–2026’ ನಡೆಸಿದ ಸಂಶೋಧನೆಯಲ್ಲಿ ಈ ಅಂಶವನ್ನು ಪತ್ತೆ ಮಾಡಲಾಗಿದೆ. ಬಹು ಭಾಷೆಗಳನ್ನು ಕಲಿಯುವುದರಿಂದಾಗುವ ಪ್ರಯೋಜನಗಳ ಬಗ್ಗೆ ಈ ಸಂಶೋಧನೆ ವಿವರಿಸುತ್ತದೆ.ಸ್ಪೇನ್ ದೇಶದ ಬಾಸ್ಕ್ನ ಜನರನ್ನು ಈ ಸಂಶೋಧನೆಯಲ್ಲಿ ಬಳಸಿಕೊಳ್ಳಲಾಗಿದೆ. ಅಲ್ಲಿನ ಜನರು ಸ್ಪ್ಯಾನಿಷ್, ಬಾಸ್ಕ್, ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತನಾಡುತ್ತಾರೆ. ಒಟ್ಟು 728 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಪ್ರತಿಯೊಬ್ಬರಿಗೂ (brain ageing clock) ಮಿದುಳಿನ ಜೈವಿಕ ವಯಸ್ಸನ್ನು ಅಳೆಯುವ ಬಯೋಮಾರ್ಕರ್ ಸಾಧನವನ್ನು ಅಳವಡಿಸಲಾಗಿತ್ತು.ಮ್ಯಾಗ್ನೆಟೋಎನ್ಸೆಫಾಲೋಗ್ರಫಿ ಎಂಬ ತಂತ್ರಜ್ಞಾನವನ್ನು ಬಳಸಿಕೊಂಡು ವಿವಿಧ ವಯಸ್ಸಿನವರ ಮಿದುಳಿನ ಚಟುವಟಿಕೆಯನ್ನು ವಿಶ್ಲೇಷಣೆ ಮಾಡಲಾಗಿತ್ತು. ವ್ಯಕ್ತಿಯ ದೇಹದ ವಯಸ್ಸನ್ನು ಅವರ ಮಿದುಳಿನ ವಯಸ್ಸಿನೊಂದಿಗೆ ಹೋಲಿಸಿದಾಗ ವ್ಯತ್ಯಾಸ ಕಂಡುಬಂದಿದೆ. 2 ಭಾಷೆ ಮಾತನಾಡುವವರ ಮಿದುಳಿನ ವಯಸ್ಸು ಅವರ ದೇಹದ ವಯಸ್ಸಿಗಿಂತ 6 ವರ್ಷ ಚಿಕ್ಕದಾಗಿರುತ್ತದೆ ಎಂದು ಬಹಿರಂಗವಾಗಿದೆ.3 ಭಾಷೆಗಳನ್ನು ಮಾತನಾಡುವವರ ಮಿದುಳಿನ ವಯಸ್ಸು, ದೇಹದ ವಯಸ್ಸಿಗಿಂತ 7 ವರ್ಷ ಕಡಿಮೆ ಇರುತ್ತದೆ. ಅದರಂತೆ 4 ಭಾಷೆಗಳನ್ನು ಮಾತನಾಡುವವರ ಮಿದುಳಿನ ವಯಸ್ಸು ದೇಹದ ವಯಸ್ಸಿಗಿಂತ 13 ವರ್ಷ ಚಿಕ್ಕದಾಗಿರುತ್ತದೆ ಎಂಬುದು ಅಧ್ಯಯನದಲ್ಲಿ ದೃಢಪಟ್ಟಿದೆ.ಸ್ಪೇನ್ನ ಬಿಸಿಬಿಎಲ್ ಸಂಸ್ಥೆಯ ನಿರ್ದೇಶಕ ಡಾ. ಲೂಸಿಯಾ ಅಮೋರುಸೊ ಮಾತನಾಡಿ, ‘ ಹೆಚ್ಚು ಭಾಷೆ ಮಾತನಾಡುವ ವ್ಯಕ್ತಿಯ ಮಿದುಳಿನ ವಯಸ್ಸು ದೇಹದ ವಯಸ್ಸಿಗಿಂತ ಹಲವು ಪಟ್ಟು ಕಡಿಮೆ ಇರುತ್ತದೆ. ಆದರೆ ಎಷ್ಟು ಭಾಷೆ ಮಾತನಾಡುತ್ತೇವೆ ಎನ್ನುವುದಕ್ಕಿಂತ, ಭಾಷೆಯ ಮೇಲೆ ಹಿಡಿತವೂ ಮಿದುಳಿನ ವಯಸ್ಸನ್ನು ನಿರ್ಧರಿಸುತ್ತದೆ’ ಎಂದಿದ್ದಾರೆ.