ಬೆಂಗಳೂರು: ಆಂಬುಲೆನ್ಸ್ಗೆ ದಾರಿ ಬಿಡದೆ ವ್ಹೀಲಿ ಮಾಡಿದ ಪುಂಡರು; ರೋಗಿಯ ನರಳಾಟ
ಬೆಂಗಳೂರು: ರಸ್ತೆಯಲ್ಲಿ ಯುವಕರ ಗುಂಪೊಂದು ದ್ವಿಚಕ್ರ ವಾಹನಗಳಲ್ಲಿ ವ್ಹೀಲಿ ಮಾಡುತ್ತಾ ಆಂಬುಲೆನ್ಸ್ಗೆ ದಾರಿ ಬಿಡದೆ ಪುಂಡಾಟ ಮೆರೆದಿದೆ. ಗೊರಗುಂಟೆಪಾಳ್ಯ ಮತ್ತು ಯಶವಂತಪುರ ನಡುವಿನ ರಸ್ತೆಯಲ್ಲಿ ಜುಲೈ 4ರಂದು ತಡರಾತ್ರಿ ಈ ಘಟನೆ ನಡೆದಿದೆ. ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ರೋಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರೂ ದ

ಬೆಂಗಳೂರು: ರಸ್ತೆಯಲ್ಲಿ ಯುವಕರ ಗುಂಪೊಂದು ದ್ವಿಚಕ್ರ ವಾಹನಗಳಲ್ಲಿ ವ್ಹೀಲಿ ಮಾಡುತ್ತಾ ಆಂಬುಲೆನ್ಸ್ಗೆ ದಾರಿ ಬಿಡದೆ ಪುಂಡಾಟ ಮೆರೆದಿದೆ. ಗೊರಗುಂಟೆಪಾಳ್ಯ ಮತ್ತು ಯಶವಂತಪುರ ನಡುವಿನ ರಸ್ತೆಯಲ್ಲಿ ಜುಲೈ 4ರಂದು ತಡರಾತ್ರಿ ಈ ಘಟನೆ ನಡೆದಿದೆ. ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ರೋಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರೂ ದಾರಿ ಬಿಡದ ಯುವಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹೆಲ್ಮೆಟ್ ಧರಿಸದೆ ಅತಿ ವೇಗದಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಾ ಯುವಕರು ವ್ಹೀಲಿ ಮಾಡುತ್ತಿದ್ದರು. ಆಂಬುಲೆನ್ಸ್ ಚಾಲಕ ವಾಹನದ ಸೈರನ್ ಮೊಳಗಿಸಿ, ಹಾರ್ನ್ ಮಾಡಿದರೂ ದಾರಿ ಬಿಡದೆ ಸತಾಯಿಸಿದ್ದಾರೆ. ಆಂಬುಲೆನ್ಸ್ ಒಳಗಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.‘ತುರ್ತು ಸೇವೆಗಳಿಗೆ ಅಡ್ಡಿಪಡಿಸಿದ ಯುವಕರ ವಾಹನಗಳನ್ನು ಜಪ್ತಿಗೊಳಿಸಿ, ಚಾಲನಾ ಪರವಾನಗಿ ರದ್ದುಪಡಿಸಬೇಕು. ರೋಗಿಯ ಜೀವದ ಜತೆ ಚೆಲ್ಲಾಟವಾಡಿರುವ ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು‘ ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.ಜಾಲತಾಣದಲ್ಲಿ ವಿಡಿಯೊ ಹರಿದಾಡಿದ ಬೆನ್ನಲ್ಲೇ ಸಂಚಾರ ಪೊಲೀಸರು, ವ್ಹೀಲಿ ಮಾಡಿದವರ ಪತ್ತೆಗೆ ಮುಂದಾಗಿದ್ದಾರೆ. ತುಮಕೂರು ರಸ್ತೆಯ ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿ ಪರಿಶೀಲಿಸಿ, ಯುವಕರ ದ್ವಿಚಕ್ರ ವಾಹನಗಳ ನೋಂದಣಿ ಸಂಖ್ಯೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಚಾರ ವಿಭಾಗದ ಡಿಸಿಪಿ ಜಯಪ್ರಕಾಶ್, ‘ವಿಡಿಯೊ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಯುವಕರನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಕಾನೂನುಬಾಹಿರವಾಗಿ ನಡೆದುಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.Bengaluru, Yeswanthpur ⚠️ Wheelie reel shoot ahead of Ambulance…Scooter w/o rear number plate…@DriveSmart_IN @dabir @RCBengaluru @sumanthchandar @Belurr @anil_lulla @InfraEye VC/Insta, _crazy_4806 pic.twitter.com/KIpAcGlBim— Dave (Road Safety: City & Highways) (@motordave2) July 5, 2026 ‘ಕೊಲೆ ಯತ್ನಕ್ಕೆ ಸಮ‘‘ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ಗೆ ದಾರಿ ಬಿಡದೆ ವ್ಹೀಲಿ ಮಾಡುತ್ತಾ ಅಪಾಯಕಾರಿ ಕಸರತ್ತು ಪ್ರದರ್ಶಿಸಿದ ಯುವಕರ ಕೃತ್ಯವು ಕೊಲೆ ಯತ್ನಕ್ಕೆ ಸಮಾನ. ಇಂತಹ ಬೇಜವಾಬ್ದಾರಿ ವರ್ತನೆ ಕೇವಲ ಸಂಚಾರ ನಿಯಮದ ಉಲ್ಲಂಘನೆಯಷ್ಟೇ ಅಲ್ಲ ಕೊಲೆ ಯತ್ನಕ್ಕೆ ಸಮಾನವಾಗಿದೆ’ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗೃಹ ಸಚಿವರಿಗೆ ಕುಟುಕಿದ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಪೋಸ್ಟ್ ಹಾಕಿರುವ ಬಿಜೆಪಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕುಟುಕಿದೆ.‘ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ಆಡಳಿತದಲ್ಲಿ ಆಂಬುಲೆನ್ಸ್ಗೂ ಜಾಗ ಬಿಡದ ವ್ಹೀಲಿ ಪುಂಡರು. ಇದರ ಬಗ್ಗೆ ಟ್ವೀಟ್ ಬರೆಯುವುದು ಯಾವಾಗ? ದಿನವೆಲ್ಲಾ ಟ್ವಿಟರ್ನಲ್ಲಿ ಜ್ಞಾನ ಹಂಚುವ ನಿಮಗೆ ನಿಮ್ಮದೇ ಸರ್ಕಾರದ ಮೂಗಿನಡಿಯಲ್ಲಿ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತು ಹೋಗಿರೋದು ಕಾಣಿಸುತ್ತಿಲ್ಲವೇ? ಸಿಲಿಕಾನ್ ಸಿಟಿಯಲ್ಲಿ ಸಾರ್ವಜನಿಕರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದ್ದರೂ ನಿಮ್ಮ ಈ ದಿವ್ಯ ಮೌನಕ್ಕೆ ಕಾರಣವೇನು? ಸೋಷಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಮಾತನಾಡೋ ನೀವು ಈ ಪುಂಡರ ಹುಚ್ಚಾಟಕ್ಕೆ ಬ್ರೇಕ್ ಹಾಕೋದು ಯಾವಾಗ?’ ಎಂದು ಬಿಜೆಪಿ ಪ್ರಶ್ನಿಸಿದೆ. ಆಂಬ್ಯುಲೆನ್ಸ್ಗೂ ಜಾಗ ಬಿಡದ ವೀಲಿಂಗ್ ಪುಂಡರು! @PriyankKharge ಅವರೇ, ದಿನವೆಲ್ಲಾ ಟ್ವಿಟರ್ನಲ್ಲಿ ಜ್ಞಾನ ಹಂಚುವ ನಿಮಗೆ ನಿಮ್ಮದೇ ಸರ್ಕಾರದ ಮೂಗಿನಡಿಯಲ್ಲಿ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತುಹೋಗಿರೋದು ಕಾಣಿಸುತ್ತಿಲ್ಲವೇ? ಸಿಲಿಕಾನ್ ಸಿಟಿಯಲ್ಲಿ ಸಾರ್ವಜನಿಕರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದ್ದರೂ ನಿಮ್ಮ ಈ ದಿವ್ಯ… pic.twitter.com/l3g8ux3g33— BJP Karnataka (@BJP4Karnataka) July 6, 2026