ಖಮೇನಿ ಅಂತ್ಯಕ್ರಿಯೆ: ಮೂವರು ಪುತ್ರರು ಭಾಗಿ
ಟೆಹರಾನ್ (ಎಎಫ್ಪಿ/ಎಪಿ): ಇರಾನ್ನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಎರಡನೇ ದಿನವಾದ ಭಾನುವಾರವೂ ನಡೆದವು.ಟೆಹರಾನ್ನ ಗ್ರ್ಯಾಂಡ್ ಮೊಸಲ್ಲಾದ ಪ್ರಾರ್ಥನಾ ಸಂಕೀರ್ಣದಲ್ಲಿ ಶಿಯಾ ಧರ್ಮಗುರು ಜಾಫರ್ ಸೊಭಾನಿ ನೇತೃತ್ವದಲ್ಲಿ ಪ್ರಾರ್ಥನಾ ಕಾರ್ಯಕ್ರಮಗಳು ನಡೆದವು. ಖಮೇನಿ ಅವರ ಪುತ್ರರಾದ ಮಸೂದ್, ಮುಸ್ತಫಾ ಮತ್ತ

ಟೆಹರಾನ್ (ಎಎಫ್ಪಿ/ಎಪಿ): ಇರಾನ್ನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಎರಡನೇ ದಿನವಾದ ಭಾನುವಾರವೂ ನಡೆದವು.ಟೆಹರಾನ್ನ ಗ್ರ್ಯಾಂಡ್ ಮೊಸಲ್ಲಾದ ಪ್ರಾರ್ಥನಾ ಸಂಕೀರ್ಣದಲ್ಲಿ ಶಿಯಾ ಧರ್ಮಗುರು ಜಾಫರ್ ಸೊಭಾನಿ ನೇತೃತ್ವದಲ್ಲಿ ಪ್ರಾರ್ಥನಾ ಕಾರ್ಯಕ್ರಮಗಳು ನಡೆದವು. ಖಮೇನಿ ಅವರ ಪುತ್ರರಾದ ಮಸೂದ್, ಮುಸ್ತಫಾ ಮತ್ತು ಮೇಸಮ್ ಸೇರಿದಂತೆ ಉನ್ನತ ಅಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು.ಆದರೆ, ಖಮೇನಿ ಅವರ ಪುತ್ರ, ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಗೈರುಹಾಜರಾಗಿದ್ದರು. ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಫೆಬ್ರುವರಿ 28ರಂದು ನಡೆಸಿದ್ದ ದಾಳಿಯಲ್ಲಿ ಖಮೇನಿ ಮೃತಪಟ್ಟಿದ್ದರು. ಮೊಜ್ತಬಾ ಗಾಯಗೊಂಡಿದ್ದು, ಅಂದಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರನ್ನೂ ಹತ್ಯೆ ಮಾಡುವುದಾಗಿ ಇಸ್ರೇಲ್ ಬೆದರಿಕೆ ಹಾಕಿದೆ.ಇರಾನ್ನಾದ್ಯಂತ ಭಾನುವಾರ ಸಾರ್ವಜನಿಕ ರಜೆ ಘೋಷಿಸಲಾಗಿತ್ತು. ಬೆಳಿಗ್ಗೆ ಪ್ರಾರ್ಥನಾ ಸಂಕೀರ್ಣ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಲಕ್ಷಾಂತರ ಜನರು ನೆರೆದಿದ್ದರು. ಕಪ್ಪುಬಟ್ಟೆ ಧರಿಸಿ, ಕೆಂಪು ಧ್ವಜ ಹಿಡಿದು, ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.ಟೆಹರಾನ್ನಲ್ಲಿ ಸೋಮವಾರ ಮೆರವಣಿಗೆ ನಡೆಯಲಿದ್ದು, ಇದರ ಸಿದ್ಧತೆಗಾಗಿ ಗ್ರ್ಯಾಂಡ್ ಮೊಸಲ್ಲಾದಿಂದ ಖಮೇನಿ ಅವರ ಪಾರ್ಥಿವ ಶರೀರವನ್ನು ಭಾನುವಾರ ಮಧ್ಯಾಹ್ನ ಹೊರಗೆ ತರಲಾಗಿದೆ.ಮಂಗಳವಾರ ಕೋಮ್ ನಗರಕ್ಕೆ, ಬುಧವಾರ ನೆರೆಯ ಇರಾಕ್ಗೆ ಖಮೇನಿ ಅವರ ಪಾರ್ಥಿವ ಶರೀರವನ್ನು ಸಾಗಿಸಲಾಗುತ್ತದೆ. ಜನ್ಮಸ್ಥಳ ಮಶಾದ್ನಲ್ಲಿ ಖಮೇನಿ ಅವರ ಮೃತದೇಹವನ್ನು ಗುರುವಾರ ಸಮಾಧಿ ಮಾಡಲಾಗುತ್ತದೆ.ಟ್ರಂಪ್ ಹಾಗೂ ಬೆಂಜಮಿನ್ ನೆತನ್ಯಾಹು ಅವರ ಹತ್ಯೆಗೆ ಕರೆ ನೀಡುವಂತಹ ಪೋಸ್ಟರ್ ಅನ್ನು ವ್ಯಕ್ತಿಯೊಬ್ಬರು ಹಿಡಿದಿದ್ದರು –ಎಎಫ್ಪಿ ಚಿತ್ರ ಟೆಹರಾನ್ನ ಗ್ರ್ಯಾಂಡ್ ಮೊಸಲ್ಲಾ ಪ್ರಾರ್ಥನಾ ಸಂಕೀರ್ಣದಲ್ಲಿ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರವಿದ್ದ ಬ್ಯಾನರ್ಗೆ ಯುವಕನೊಬ್ಬ ಕಾಲಿನಿಂದ ಒದೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾನೆ –ಎಎಫ್ಪಿ ಚಿತ್ರಟ್ರಂಪ್ ಬೆಂಜಮಿನ್ ಹತ್ಯೆಗೆ ಕರೆ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಕಲಾವಿದರೊಬ್ಬರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಲಕ್ಷಾಂತರ ಜನರ ಸಮ್ಮುಖದಲ್ಲೇ ಕರೆ ನೀಡಿದ್ದಾರೆ. ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹತ್ಯೆಗೆ ಕರೆ ನೀಡುವ ಪೋಸ್ಟರ್ಗಳು ಮತ್ತು ಬರಹಗಳನ್ನು ಜನರು ಪ್ರದರ್ಶಿಸಿದ್ದಾರೆ. ಕವಿ ಮೊಹಮ್ಮದ್ ರಸೌಲಿ ಅವರು ಧ್ವನಿವರ್ಧಕದ ಮೂಲಕ ಮಾತನಾಡಿ ‘ಅಮೆರಿಕಕ್ಕೆ ಸಾವು’ ‘ಇಸ್ರೇಲ್ಗೆ ಸಾವು’ ಎಂದು ಘೋಷಣೆ ಕೂಗಿದ್ದಾರೆ. ಟ್ರಂಪ್ ಅವರನ್ನು ಉಲ್ಲೇಖಿಸಿ ‘ವಿಶ್ವದ ಅತ್ಯಂತ ಕಿಡಿಗೇಡಿ ವ್ಯಕ್ತಿ ಇನ್ನೂ ಏಕೆ ಜೀವಂತವಾಗಿದ್ದಾನೆ? ಈ ಜಗತ್ತು ಇನ್ನುಮುಂದೆ ಟ್ರಂಪ್ಗೆ ಒಳ್ಳೆಯ ಸ್ಥಳವಲ್ಲ’ ಎಂದು ಹೇಳಿದ್ದಾರೆ.