ಜೆಇಇ ಅಡ್ವಾನ್ಸ್ಡ್ ಪರೀಕ್ಷೆ: ಕರಿಯಪ್ಪಗೆ ಸನ್ಮಾನ
ಹುಬ್ಬಳ್ಳಿ: ಸಾರಥಿ ಫೌಂಡೇಷನ್ನ ವಿದ್ಯಾರ್ಥಿ ಗುಳೇದಗುಡ್ಡದ ಕರಿಯಪ್ಪ ಮಾದರ ಅವರು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ 2,753ನೇ ರ್ಯಾಂಕ್ ಪಡೆದು ಐಐಟಿ ಮದ್ರಾಸ್ಗೆ ಆಯ್ಕೆಯಾಗಿದ್ದು, ಇತ್ತೀಚಿಗೆ ಅವರನ್ನು ಎಸ್.ಕೆ.ಟಿ. ಸಾರಥಿ ಪಿಯು ಕಾಲೇಜಿನಲ್ಲಿ ಸನ್ಮಾನಿಸಲಾಯಿತು.ಸಂಸ್ಥೆಯ ಮಾರ್ಗದರ್ಶಕ ಪಂಪಾಪತಿ ಹೆಗಡಿ ಮಾತನಾಡಿ, ‘ಕರಿಯಪ್ಪ ಮಾದರ ಅವರು ಸಾರಥಿ ಫೌಂಡೇಷನ್ನ
ಹುಬ್ಬಳ್ಳಿ: ಸಾರಥಿ ಫೌಂಡೇಷನ್ನ ವಿದ್ಯಾರ್ಥಿ ಗುಳೇದಗುಡ್ಡದ ಕರಿಯಪ್ಪ ಮಾದರ ಅವರು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ 2,753ನೇ ರ್ಯಾಂಕ್ ಪಡೆದು ಐಐಟಿ ಮದ್ರಾಸ್ಗೆ ಆಯ್ಕೆಯಾಗಿದ್ದು, ಇತ್ತೀಚಿಗೆ ಅವರನ್ನು ಎಸ್.ಕೆ.ಟಿ. ಸಾರಥಿ ಪಿಯು ಕಾಲೇಜಿನಲ್ಲಿ ಸನ್ಮಾನಿಸಲಾಯಿತು.ಸಂಸ್ಥೆಯ ಮಾರ್ಗದರ್ಶಕ ಪಂಪಾಪತಿ ಹೆಗಡಿ ಮಾತನಾಡಿ, ‘ಕರಿಯಪ್ಪ ಮಾದರ ಅವರು ಸಾರಥಿ ಫೌಂಡೇಷನ್ನಲ್ಲಿ ಉಚಿತ ತರಬೇತಿ ಪಡೆದು, ಸಾಧನೆ ಮಾಡಿ ನಮ್ಮ ಸಂಸ್ಥೆಗೆ ಹೆಸರು ತಂದುಕೊಟ್ಟಿದ್ದಾರೆ’ ಎಂದು ಹೇಳಿದರು.ಪ್ರಾಚಾರ್ಯ ಆರ್.ವಿ. ಜಹಗೀರದಾರ, ಶ್ರೀನಗರ ಸೊಸೈಟಿಯ ಅಧ್ಯಕ್ಷ ಡಿ.ಎನ್. ಮುತಾಲಿಕ್, ಬಿಂದು ಸಿ., ತ್ರಿವೇಣಿ ಹೊನ್ನಿಕೊಪ್ಪಾ, ಸಹನಾ ನಂದಿ, ಶ್ವೇತಾ ಪಟ್ಟಣಶೆಟ್ಟಿ, ವೀರಣ್ಣಾ ಹಂಪಣ್ಣವರ ಇದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260707-24-473201376
Read the complete story at Prajavani