ಮ್ಯಾಗ್ನಂ ಐಸ್ಕ್ರೀಂ: ಬೆಂಗಳೂರಿನಲ್ಲಿ ಹೊಸ ಸಂಶೋಧನಾ ಕೇಂದ್ರ
ಬೆಂಗಳೂರು: ಐಸ್ಕ್ರೀಂ ತಯಾರಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿ ಕಂಪನಿಗಳಲ್ಲಿ ಒಂದಾಗಿರುವ ಮ್ಯಾಗ್ನಂ ಐಸ್ಕ್ರೀಂ ಕಂಪನಿಯು ಬೆಂಗಳೂರಿನಲ್ಲಿ ಸಂಶೋಧನಾ ಕೇಂದ್ರವನ್ನು ಆರಂಭಿಸಿದೆ.ವೈಟ್ಫೀಲ್ಡ್ನಲ್ಲಿ ಈ ಕೇಂದ್ರವನ್ನು ಆರಂಭಿಸಲಾಗಿದ್ದು, ಇದರಲ್ಲಿ ಅತ್ಯಾಧುನಿಕ ಪ್ರಯೋಗಾಲಯವೂ ಸೇರಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.ಕ್ವಾಲಿಟಿ ವಾಲ್ಸ್, ಕಾರ್ನೆಟೊ, ಮ್ಯಾಗ್ನಂ, ಫೀಸ

ಬೆಂಗಳೂರು: ಐಸ್ಕ್ರೀಂ ತಯಾರಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿ ಕಂಪನಿಗಳಲ್ಲಿ ಒಂದಾಗಿರುವ ಮ್ಯಾಗ್ನಂ ಐಸ್ಕ್ರೀಂ ಕಂಪನಿಯು ಬೆಂಗಳೂರಿನಲ್ಲಿ ಸಂಶೋಧನಾ ಕೇಂದ್ರವನ್ನು ಆರಂಭಿಸಿದೆ.ವೈಟ್ಫೀಲ್ಡ್ನಲ್ಲಿ ಈ ಕೇಂದ್ರವನ್ನು ಆರಂಭಿಸಲಾಗಿದ್ದು, ಇದರಲ್ಲಿ ಅತ್ಯಾಧುನಿಕ ಪ್ರಯೋಗಾಲಯವೂ ಸೇರಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.ಕ್ವಾಲಿಟಿ ವಾಲ್ಸ್, ಕಾರ್ನೆಟೊ, ಮ್ಯಾಗ್ನಂ, ಫೀಸ್ಟ್ ಸೇರಿದಂತೆ ವಿವಿಧ ಬ್ರ್ಯಾಂಡ್ಗಳ ಅಡಿಯಲ್ಲಿ ಮಾರಾಟವಾಗುವ ಐಸ್ಕ್ರೀಂಗಳಲ್ಲಿ ಹೊಸತನವನ್ನು ತರಲು ಇದನ್ನು ಸ್ಥಾಪಿಸಲಾಗಿದೆ.ಬೆಂಗಳೂರಿನ ಸಂಶೋಧನಾ ಕೇಂದ್ರವು ಗ್ರಾಹಕರ ಬಯಕೆಗಳಿಗೆ ತ್ವರಿತವಾಗಿ ಸ್ಪಂದಿಸಲು ಅನುಕೂಲ ಮಾಡಿಕೊಡಲಿದೆ. ಭಾರತೀಯರ ರುಚಿ ಹಾಗೂ ಅಗತ್ಯಗಳಿಗೆ ತಕ್ಕಂತಹ ಉತ್ಪನ್ನಗಳನ್ನು ಸಿದ್ಧಪಡಿಸಲು ಸಹಾಯ ಮಾಡಲಿದೆ ಎಂದು ಕ್ವಾಲಿಟಿ ವಾಲ್ಸ್ (ಇಂಡಿಯಾ) ಲಿಮಿಟೆಡ್ನ ಡೆಪ್ಯುಟಿ ವ್ಯವಸ್ಥಾಪಕ ನಿರ್ದೇಶಕ ಚಿತ್ರಾಂಕ್ ಗೋಯಲ್ ಹೇಳಿದ್ದಾರೆ.
Read the complete story at Prajavani