ಕರ್ನಾಟಕದ ಅಡಿಕೆ ವಾಹನಗಳಿಗಿಲ್ಲ ಮಹಾರಾಷ್ಟ್ರದಲ್ಲಿ ತಡೆ
– ಅಡಿಕೆ ಸಾಗಣೆ ವಾಹನ ಬಿಡುಗಡೆಗೆ ದೇವೇಂದ್ರ ಫಡ್ನವೀಸ್ ಸಮ್ಮತಿ ನವದೆಹಲಿ: ಕರ್ನಾಟಕದ (Karnataka) ಅಡಿಕೆ ಬೆಳೆಗಾರರ ಬೆನ್ನಿಗೆ ನಿಂತಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ(Pralhad Joshi) ಮಹಾರಾಷ್ಟ್ರದಲ್ಲಿ ತಡೆಹಿಡಿದಿದ್ದ ಅಡಿಕೆ ಸರಕುಳ್ಳ ವಾಹನಗಳ ಬಿಡುಗಡೆಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(Devendra Fa

– ಅಡಿಕೆ ಸಾಗಣೆ ವಾಹನ ಬಿಡುಗಡೆಗೆ ದೇವೇಂದ್ರ ಫಡ್ನವೀಸ್ ಸಮ್ಮತಿ ನವದೆಹಲಿ: ಕರ್ನಾಟಕದ (Karnataka) ಅಡಿಕೆ ಬೆಳೆಗಾರರ ಬೆನ್ನಿಗೆ ನಿಂತಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ(Pralhad Joshi) ಮಹಾರಾಷ್ಟ್ರದಲ್ಲಿ ತಡೆಹಿಡಿದಿದ್ದ ಅಡಿಕೆ ಸರಕುಳ್ಳ ವಾಹನಗಳ ಬಿಡುಗಡೆಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(Devendra Fadnavis) ಜತೆ ಯಶಸ್ವಿ ಮಾತುಕತೆ ನಡೆಸಿದ್ದಾರೆ. ರಾಜ್ಯ ಅಡಿಕೆ(Arecanut) ಬೆಳೆಗಾರರ ಹಿತರಕ್ಷಣೆಗೆ ಧಾವಿಸಿದ ಜೋಶಿ, ಮಹಾರಾಷ್ಟ್ರದಲ್ಲಿ ರಾಜ್ಯದ ಅಡಿಕೆ ಸರಕುಳ್ಳ ಲಾರಿಗಳನ್ನು ತಡೆಹಿಡಿದಿರುವ ಬಗ್ಗೆ ಅಲ್ಲಿನ ಸಿಎಂ ದೇವೇಂದ್ರ ಫಡ್ನವೀಸ್ ಜತೆ ಚರ್ಚಿಸಿ ಬಿಡುಗಡೆಗೆ ಮನವೊಲಿಸಿದರು. ಈ ಮೂಲಕ ಕರ್ನಾಟಕದ ರೈತರ ಮತ್ತು ಅಡಿಕೆ ವರ್ತಕರ, ಪ್ರಮುಖ ಅಡಿಕೆ ಸಹಕಾರಿ ಸಂಸ್ಥೆಗಳ ಸಮಸ್ಯೆ ಪರಿಹರಿಸಿದರು. ಜೋಶಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಹಾರಾಷ್ಟ್ರ(Maharashtra) ಸಿಎಂ ತಮ್ಮ ರಾಜ್ಯದಲ್ಲಿ ತಡೆಹಿಡಿದಿರುವ ಕರ್ನಾಟಕದ ಅಡಿಕೆ ಸರಕನ್ನು ತಕ್ಷಣವೇ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೇ, ಮುಂದಿನ ದಿನಗಳಲ್ಲೂ ಅಡಿಕೆ ಸಾಗಣೆಗೆ ಯಾವುದೇ ಅಡ್ಡಿಯಾಗದಂತೆ ಅಗತ್ಯ ಕ್ರಮ ಕೈಗೊಂಡು ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಸಹ ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಇವಿಎಂ ಮಾದರಿ ಅಳವಡಿಕೆಗೆ ಮುಂದಾದ ಇಂಡೋನೇಷ್ಯಾ ಕರ್ನಾಟಕದ ಪ್ರಮುಖ ಅಡಿಕೆ ಸಹಕಾರಿ ಸಂಸ್ಥೆಗಳಾದ ಕ್ಯಾಂಪ್ಕೋ (CAMPCO), ಮಾಮ್ಕೋಸ್ (MAMCOS), ಟುಮ್ಕೋಸ್ (TUMCOS) ಹಾಗೂ ರಾಜ್ಯ ಅಡಿಕೆ ಸಹಕಾರಿ ಮಹಾಮಂಡಳದ ನಿಯೋಗ ಇಂದು ನನ್ನನ್ನು ಭೇಟಿಯಾಗಿ ಮಹಾರಾಷ್ಟ್ರದಲ್ಲಿ ತಡೆಹಿಡಿಯಲಾಗಿರುವ ಅಡಿಕೆ ಸಾಗಣೆ ವಾಹನಗಳ ಬಿಡುಗಡೆಗೆ ಮಧ್ಯಪ್ರವೇಶಿಸುವಂತೆ ವಿನಂತಿಸಿತ್ತು. ಮಹಾರಾಷ್ಟ್ರದಾದ್ಯಂತ ಅಡಿಕೆ… pic.twitter.com/f3buuG6amS — Pralhad Joshi (@JoshiPralhad) July 7, 2026 ಏನಿದು ಸಮಸ್ಯೆ? ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾಗಿದೆ ಅಡಿಕೆ. ರಾಜ್ಯದಿಂದ ಉತ್ತರ ಭಾರತದ ಮಾರುಕಟ್ಟೆಗಳಿಗೆ ಅಡಿಕೆ ರವಾನೆ ಆಗುತ್ತಿತ್ತು. ಆದರೆ, ಆದರೆ, ಇತ್ತೀಚೆಗೆ ಮಹಾರಾಷ್ಟ್ರದ ಎಲ್ಲೆಡೆ ಕರ್ನಾಟಕದ ಅಡಿಕೆ ಸಾಗಣೆ ವಾಹನಗಳನ್ನು ತಪಾಸಣೆಗೆಂದು ದಿನಗಟ್ಟಲೆ ತಡೆಹಿಡಿಯಲಾಗುತ್ತಿತ್ತು. ಹೀಗಾಗಿ ಕರ್ನಾಟಕದ ರೈತರು ಮತ್ತು ವರ್ತಕರು, ಅಡಿಕೆ ಸಹಕಾರಿ ಸಂಸ್ಥೆಗಳಿಗೆ ತೀವ್ರ ಸಮಸ್ಯೆಯಾಗಿತ್ತು. ಅಲ್ಲದೇ, ಅಡಿಕೆ ಹಾನಿಗೊಳಗಾಗಿ ಬೆಳೆಗಾರರಿಗೆ ತೀವ್ರ ಆರ್ಥಿಕ ನಷ್ಟವೂ ಎದುರಾಗಿತ್ತು. ಈ ಹಿನ್ನಲೆಯಲ್ಲಿ ಕರ್ನಾಟಕದ ಪ್ರಮುಖ ಅಡಿಕೆ ಸಹಕಾರಿ ಸಂಸ್ಥೆಗಳಾದ ಕ್ಯಾಂಪ್ಕೋ (CAMPCO), ಮಾಮ್ಕೋಸ್ (MAMCOS), ತುಮ್ಕೋಸ್ (TUMCOS) ಹಾಗೂ ರಾಜ್ಯ ಅಡಿಕೆ ಸಹಕಾರಿ ಮಹಾಮಂಡಳದ ನಿಯೋಗವು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿತ್ತು. ಮಹಾರಾಷ್ಟ್ರದಲ್ಲಿ ತಡೆಹಿಡಿಯಲಾಗಿರುವ ಅಡಿಕೆ ಸಾಗಣೆ ವಾಹನಗಳ ಬಿಡುಗಡೆಗೆ ಮನವಿ ಮಾಡಿತ್ತು. ಇದನ್ನೂ ಓದಿ: ಕಸದಿಂದ ತಯಾರಿಸಿದ ಹೈಡ್ರೋಜನ್ ಇಂಧನ ಬಳಸಿ ಓಡಲಿವೆ ದೆಹಲಿ ಬಸ್ಗಳು: ಗಡ್ಕರಿ ಘೋಷಣೆ ಕೇಂದ್ರ ಸಚಿವ ಜೋಶಿ ಅವರು ಮಂಗಳವಾರ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ದೆಹಲಿಯಲ್ಲೇ ಭೇಟಿ ಮಾಡಿ, ಚರ್ಚಿಸಿದರಲ್ಲದೆ, ಕರ್ನಾಟಕದ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ರಾಜ್ಯದ ಅಡಿಕೆ ಸರಕುಳ್ಳ ವಾಹನಗಳನ್ನು ತಡೆಯದಂತೆ ಯಶಸ್ವಿ ಮಾತುಕತೆ ನಡೆಸಿದರು.